ಕ್ರೀಡೆ

  • associate partner

ಬಾ ಬಾ ಬಾ, ಬರ್ಬೇಡ ಬರ್ಬೇಡ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೃಷ್ಣಪ್ಪ, ಮಯಾಂಕ್​ ಕನ್ನಡ ಮಾತು

Kings Xi Panjab: ಕಿಂಗ್ಸ್​ ಇಲೆವನ್​ ತಂಡದಲ್ಲಿ ನಾಯಕ ಕೆ ಎಲ್​ ರಾಹುಲ್​, ಮಯಾಂಗ್​ ಅಗರ್​ವಾಲ್​, ಕರುಣ್​ ನಾಯರ್​, ಕೃಷ್ಣಪ್ಪ ಗೌತಮ್ ಬೆಂಗಳೂರಿಗರಿದ್ದಾರೆ. ಬ್ಯಾಟಿಂಗ್​ ವೇಳೆ ಕೃಷ್ಣಪ್ಪ ಮತ್ತು ಗೌತಮ್​ ಕನ್ನಡದಲ್ಲಿ ಮಾತನಾಡುತ್ತಾ ಆಡಿದ್ದಾರೆ. ಈ ದೃಶ್ಯವನ್ನು ಕಂಡು ಕ್ರಿಕೆಟ್​ ಪ್ರಿಯರು ಸಂತಸಗೊಂಡಿದ್ದಾರೆ.

news18-kannada
Updated:September 21, 2020, 8:45 AM IST
ಬಾ ಬಾ ಬಾ, ಬರ್ಬೇಡ ಬರ್ಬೇಡ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೃಷ್ಣಪ್ಪ, ಮಯಾಂಕ್​ ಕನ್ನಡ ಮಾತು
ಮಯಾಂಕ್​ ಅಗರ್​ವಾಲ್​
  • Share this:
ಕಿಂಗ್ಸ್​ ಇಲೆವನ್​ ಪಂಜಾಬ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಸ್ಪರ್ಧಾತ್ಮಕ ಪಂದ್ಯಾಟ ನಡೆಯುತ್ತಿದೆ. ಪಂಜಾಬ್​ ತಂಡದಲ್ಲಂತೂ ಕನ್ನಡಿಗರ ಕಮಾಲ್​ ಕ್ರಿಕೆಟ್​ ಪ್ರಿಯರ ಕಣ್ಣಿಗೆ ಬಿದ್ದಿದೆ, ಕೋಚ್​ ಅನಿಲ್​ ಕುಂಬ್ಳೆ ಸೇರದಂತೆ 4 ಆಟಗಾರರು ಕಿಂಗ್ಸ್​ ಇಲೆವನ್​ ಪಂಜಾಬ್​ ತಂಡದಲ್ಲಿದ್ದಾರೆ. ಇನ್ನು ಪಂದ್ಯದ ವೇಳೆ ಕ್ರೀಸ್​ನಲ್ಲಿ ಆಡುತ್ತಿದ್ದ ಕೃಷ್ಣಪ್ಪ ಗೌತಮ್​​ ಮತ್ತು ಮಯಾಂಕ್​ ಅಗರ್​ವಾಲ್​​ ಅವರು ಕನ್ನಡದಲ್ಲಿ ಮಾತನಾಡುತ್ತಿರುವ ವಿಚಾರ ಕನ್ನಡಿಗರಿಗೆ ಖುಷಿ ನೀಡಿದೆ. ಕಿಂಗ್ಸ್​ ಇಲೆವನ್​ ತಂಡದಲ್ಲಿ ನಾಯಕ ಕೆ ಎಲ್​ ರಾಹುಲ್​, ಮಯಾಂಗ್​ ಅಗರ್​ವಾಲ್​, ಕರುಣ್​ ನಾಯರ್​, ಕೃಷ್ಣಪ್ಪ ಗೌತಮ್ ಬೆಂಗಳೂರಿಗರಿದ್ದಾರೆ. ಬ್ಯಾಟಿಂಗ್​ ವೇಳೆ ಕೃಷ್ಣಪ್ಪ ಮತ್ತು ಗೌತಮ್​ ಕನ್ನಡದಲ್ಲಿ ಮಾತನಾಡುತ್ತಾ ಆಡಿದ್ದಾರೆ. ಈ ದೃಶ್ಯವನ್ನು ಕಂಡು ಕ್ರಿಕೆಟ್​ ಪ್ರಿಯರು ಸಂತಸಗೊಂಡಿದ್ದಾರೆ.

ಕೃಷ್ಣಪ್ಪ ಗೌತಮ್​


ಮಯಾಂಕ್​ ಅಗರ್​ವಾಲ್​


ರನ್​ ಪೇರಿಸುವ ಸಮಯದಲ್ಲಿ ಇವರಿಬ್ಬರು ಬಾ..ಬಾ, ಬರ್ಬೇಡ ಎಂದು ಹೇಳುತ್ತಿರುವುದು ಲೈವ್​ನಲ್ಲಿ ಕಂಡುಬಂದಿದೆ. ಅರಬ್​ ರಾಷ್ಟ್ರದಲ್ಲಿ ಕನ್ನಡಿಗರ ಜೊತೆಯಾಟವನ್ನು ನೋಡಿ ಕ್ರಿಕೆಟ್​ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಮಾತ್ರವಲ್ಲದೆ. ಕನ್ನಡದಲ್ಲೇ ಮಾತನಾಡುತ್ತಿರುವ ಕನ್ನಡತನವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
Published by: Harshith AS
First published: September 20, 2020, 11:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading