ಕ್ರೀಡೆ

  • associate partner
HOME » NEWS » Sports » CRICKET IPL 2020 IS JASPRIT BUMRAH JOINING RCB A FAN QUESTIONS ON TWITTER MUMBAI INDIANS RESPONDS VB

ಆರ್​ಸಿಬಿ ತಂಡ ಸೇರಿಕೊಳ್ತಾರಾ ಬುಮ್ರಾ?; ವೈರಲ್ ಆಗುತ್ತಿದೆ ಈ ಒಂದು ಫೋಟೋ ಹಾಗೂ ಟ್ವೀಟ್

13ನೇ ಆವೃತ್ತಿಯ ಐಪಿಎಲ್​​ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

Vinay Bhat | news18-kannada
Updated:October 26, 2019, 11:07 AM IST
ಆರ್​ಸಿಬಿ ತಂಡ ಸೇರಿಕೊಳ್ತಾರಾ ಬುಮ್ರಾ?; ವೈರಲ್ ಆಗುತ್ತಿದೆ ಈ ಒಂದು ಫೋಟೋ ಹಾಗೂ ಟ್ವೀಟ್
ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ
  • Share this:
ಬೆಂಗಳೂರು (ಅ. 26): ಉದ್ಯಮಿ ಮತ್ತು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ತಮ್ಮ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಎಲ್ಲ ಆಟಗಾರರಿಗೆ ದೀಪಾವಳಿ ಪಾರ್ಟಿ ಆಯೋಜನೆ ಮಾಡಿದ್ದಾರೆ.

ಜಿಯೋ ವರ್ಡ್ಡ್ ಸೆಂಟರ್​ನಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮುಂಬೈ ತಂಡದ ಹೆಚ್ಚಿನ ಸದಸ್ಯರು ಹಾಜರಿದ್ದರು. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಮಹೇಲ ಜಯವರ್ದನೆ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

 Mumbai Indians respond to fan’s enquiry over Jasprit Bumrah’s alleged exit from IPL team
ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಮುಂಬೈ ಇಂಡಿಯನ್ಸ್​ ಫ್ಯಾಮಿಲಿ


Vijay Hazare: ಕರ್ನಾಟಕ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಅಶ್ವಿನ್​ಗೆ ಬಿತ್ತು ಭಾರೀ ದಂಡ!

ಆದರೆ, ಮುಂಬೈ ತಂಡದ ಪ್ರಮುಖ ಬೌಲರ್ ಯಾರ್ಕರ್ ಸ್ಪೆಷಲಿಸ್ಟ್​ ಜಸ್​ಪ್ರೀತ್ ಬುಮ್ರಾ ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ. ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಜೊತೆ ತಂಡದ ಎಲ್ಲ ಆಟಗಾರರು ಇರುವ ಫೋಟೋವನ್ನು ಮುಂಬೈ ಇಂಡಿಯನ್ಸ್​ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಬುಮ್ರಾ ಮಿಸ್ ಆಗಿದ್ದರು.

 ಇದನ್ನ ಮನಗಂಡು ಅಭಿಮಾನಿಯೋರ್ವ ಮುಂಬೈ ಇಂಡಿಯನ್ಸ್​ ದೀಪಾವಳಿ ಸಡಗರದ ಈ ಫೋಟೋದಲ್ಲಿ ಜಸ್​ಪ್ರೀತ್ ಇಲ್ಲವಲ್ಲ! ಆರ್​ಸಿಬಿ ತಂಡ ಸೇರಿಕೊಳ್ತಾರಾ? ಎಂದು ಕೇಳಿದ್ದಾನೆ.

 ಈ ಪ್ರಶ್ನೆಗೆ ಉತ್ತರಿಸಿರುವ ಮುಂಬೈ ಇಂಡಿಯನ್ಸ್​, ರೋಹಿತ್ ಶರ್ಮಾ ಅವರು ತಾಳ್ಮೆಯಿಂದ ಇರಿ ಎಂದು ಕೈ ಸನ್ನೆಯಲ್ಲಿ ಹೇಳುವ ಜಿಫ್ ಇಮೇಜ್ ಶೇರ್ ಮಾಡಿದೆ. ಈ ಫೋಟೋ ಹಾಗೂ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 13ನೇ ಆವೃತ್ತಿಯ ಐಪಿಎಲ್​​ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

First published: October 26, 2019, 11:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading