ಕ್ರೀಡೆ

  • associate partner

IPL 2020: (VIDEO) ಐಪಿಎಲ್​ನಲ್ಲಿ ಅಭಿಮಾನಿಗಳನ್ನು ಮೂಕವಿಸ್ಮಿತಗೊಳಿಸಿದ 5 ಅದ್ಭುತ ಹೊಡೆತ ಯಾವುವು ಗೊತ್ತಾ?

ಸನ್​ರೈಸರ್ಸ್​ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಪಂತ್ ಕೇವಲ 63 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸ್​ನೊಂದಿಗೆ ಅಜೇಯ 128 ರನ್ ಸಿಡಿಸಿ ಮಿಂಚಿದರು.

Vinay Bhat | news18-kannada
Updated:January 8, 2020, 7:33 AM IST
IPL 2020: (VIDEO) ಐಪಿಎಲ್​ನಲ್ಲಿ ಅಭಿಮಾನಿಗಳನ್ನು ಮೂಕವಿಸ್ಮಿತಗೊಳಿಸಿದ 5 ಅದ್ಭುತ ಹೊಡೆತ ಯಾವುವು ಗೊತ್ತಾ?
IPL
  • Share this:
ಬೆಂಗಳೂರು (. 08): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಬಿಸಿಸಿಐ ಈಗಾಗಳೇ ವೇಳಾಪಟ್ಟಿ ತಯಾರಿಸುತ್ತಿದ್ದು, ಕೆಲವು ದಿನಗಳಲ್ಲಿ ಪ್ರಕಟಮಾಡಲಿದೆ.

ಚುಟುಕು ಕದನ ಎಂದಮೇಲೆ ಅಲ್ಲಿ ಬ್ಯಾಟ್ಸ್​ಮನ್​ಗಳ ಅಬ್ಬರ, ಹೊಡಿಬಡಿ ಆಟದ ರಂಗು ಇದ್ದೇ ಇರುತ್ತದೆ. ಐಪಿಎಲ್​ನಲ್ಲೂ ಕೆಲ ಬ್ಯಾಟ್ಸ್​ಮನ್​​ಗಳ ಹೊಡೆದ ವಾವ್ ಎಂಬಂತ್ತಿತ್ತು. ಅವುಗಳಲ್ಲಿ ಬೆಸ್ಟ್​ 5 ಶಾಟ್​​ಗಳನ್ನು ನೋಡುವುದಾದರೆ...

India vs Sri Lanka: ಸಿಕ್ಸ್ ಸಿಡಿಸಿ ಕೊಹ್ಲಿಯಿಂದ ವಿನ್ನಿಂಗ್ ಶಾಟ್; ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ!

ಇಶಾನ್ ಕಿಶನ್​ರ ಹೆಲಿಕಾಫ್ಟರ್ ಶಾಟ್:

ಮುಂಬೈ ಇಂಡಿಯನ್ಸ್​ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​​​ ಇಶಾನ್ ಕಿಶನ್​​ 2018 ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​​ ವಿರುದ್ಧ ಕೇವಲ 21 ಎಸೆತಗಳಲ್ಲಿ 62 ರನ್ ಚಚ್ಚಿದ್ದರು. ಈ ಸಂದರ್ಭ ಅವರು ಬಾರಿಸಿದ ಹೆಲಿಕಾಫ್ಟರ್ ಶಾಟ್ ಅದ್ಭುವಾಗಿತ್ತು.

 ರಿಷಭ್ ಪಂತ್ ಸ್ಕೂಪ್ ಶಾಟ್:

ಡೆಲ್ಲಿ ಡೇರ್ ಡೆವಿಲ್ಸ್​​ ತಂಡದ ಸ್ಫೋಟಕ ಬ್ಯಾಟ್ಸ್​ಮನ್​​ ರಿಷಭ್ ಪಂತ್ ಪಂದ್ಯದ ಗತಿಯನ್ನೇ ಬಲಾಯಿಸುವ ಆಟಗಾರ. ತಮ್ಮ ಅದ್ಭುತ ಹೊಡೆತಗಳಿಂದಲೇ ಗಮನ ಸೆಳೆದ ಪಂತ್, ಅದರಲ್ಲು ಬ್ಯಾಕ್ ಸೈಡ್​ನಲ್ಲಿ ಥರ್ಡ್​​ ಮ್ಯಾನ್​​ ಕಡೆ ಬಾರಿಸಿದ ಸ್ಕೂಪ್ ಶಾಟ್ ಫೇಮಸ್ ಆಯಿತು.

 ವೈಡ್ ಬಾಲ್​​​ಗೆ ಎಬಿ ಡಿವಿಲಿಯರ್ಸ್​ ಸಿಕ್ಸ್​​:

IND vs SL: ಥೇಟ್ ಹರ್ಭಜನ್ ಮಾದರಿಯಲ್ಲಿ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ; ಇಲ್ಲಿದೆ ವೈರಲ್ ವಿಡಿಯೋ

ಆರ್​ಸಿಬಿ ತಂಡದ ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್​​ಗೆ ಯಾವರೀತಿ ಬೌಲಿಂಗ್ ಮಾಡಬೇಕು ಎಂದು ಬೌಲರ್​ಗಳು ಹೆದರುತ್ತಾರೆ. ಎಂತಹದೆ ಬಾಲ್ ಎಸೆಯಲಿ ಅದನ್ನು ಸಿಕ್ಸ್​ ಸಿಡಿಸುವ ಚಾತುರ್ಯ ಎಬಿಡಿ ಹೊಂದಿದ್ದಾರೆ. ಅಂತೆಯೆ 2018ರ ಐಪಿಎಲ್​ ಸೀಸನ್​ನಲ್ಲಿ ಎಬಿಡಿ ವೈಡ್​​ ಬಾಲ್​​​​​​ನ್ನು ಸಿಕ್ಸ್​ ಅಟ್ಟಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

 ರಿಷಭ್ ಪಂತ್​ರಿಂದ ಒಂದೇ ಕೈನಲ್ಲಿ ಸಿಕ್ಸ್​:

ಸನ್​ರೈಸರ್ಸ್​ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಪಂತ್ ಕೇವಲ 63 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸ್​ನೊಂದಿಗೆ ಅಜೇಯ 128 ರನ್ ಸಿಡಿಸಿ ಮಿಂಚಿದರು. ಅದರಲ್ಲು ಈ ಪಂದ್ಯದ ಮಧ್ಯೆ ಭುವನೇಶ್ವರ್ ಕುಮಾರ್ ಬೌಲಿಂಗ್​​ನಲ್ಲಿ ಪಂತ್ ಒಂದೇ ಕೈನಲ್ಲಿ ಸಿಕ್ಸ್​ ಸಿಡಿಸಿದ್ದು ಎಲ್ಲರನ್ನು ಒಮ್ಮೆ ದಂಗಾಗಿಸಿತು.

 ಬ್ರೆಂಡನ್​ ಮೆಕಲಮ್​​ರ ಹೆಡ್ ಶಾಟ್:

RCB ಈ ಆಟಗಾರನನ್ನು ಉಳಿಸಿಕೊಂಡಿದ್ದಕ್ಕೂ ಸಾರ್ಥಕ?; ರಣಜಿಯಲ್ಲಿ ಇವರ ಬೌಲಿಂಗ್ ಬಿರುಗಾಳಿ ನೋಡಿ!

11ನೇ ಸೀಸನ್​​ನಲ್ಲಿ ಆರ್​ಸಿಬಿ ತಂಡದ ಪರವಾಗಿ ಆಡಿದ ಮೆಕಲಮ್​ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿಯಲಿಲ್ಲ. ಆದರೆ, ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಮೆಕಲಮ್ ಹೊಡೆದ ಹೊಡೆತ ಭಾರೀ ಸದ್ದು ಮಾಡಿತ್ತು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ವಿಕೆಟ್ ಹಿಂದೆಯಿಂದ ತಲೆಮೇಲೆ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಪರಿ ಅದ್ಭುತವಾಗಿತ್ತು.

Published by: Vinay Bhat
First published: January 8, 2020, 7:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading