IPL: 2018ರ ಐಪಿಎಲ್ ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?

ಧೋನಿ ಟೀಂ 13ನೇ ಆವೃತ್ತಿಯಲ್ಲಿ ಹೊಸ ತಂಡ ರಚನೆ ಮಾಡುವ ಅಂದಾಜು ಮಾಡಿಕೊಂಡಂತಿದೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

Vinay Bhat | news18-kannada
Updated:November 13, 2019, 10:13 AM IST
IPL: 2018ರ ಐಪಿಎಲ್ ಹೀರೋ ಸೇರಿ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟ CSK?
ಚೆನ್ನೈ ಸೂಪರ್ ಕಿಂಗ್ಸ್‌ ಗೆಲುವಿಗೆ ಮುಖ್ಯ ಕಾರಣ ಫ್ರಾಂಚೈಸಿ. ಸಿಎಸ್​ಕೆ ತಂಡ ಮಾಲಕರು ಇಂಡಿಯಾ ಸಿಮೆಂಟ್ ಕಂಪೆನಿ ಉದ್ಯಮಿ. ಅವರಿಗೆ ಒಂದು ತಂಡವೊಂದನ್ನು ಹೇಗೆ ಮುನ್ನಡೆಸಬೇಕೆಂದು ಚೆನ್ನಾಗಿ ಗೊತ್ತಿದೆ.
  • Share this:
ಬೆಂಗಳೂರು (ನ. 13): ಇಂಡಿಯನ್ ಪ್ರೀಮಿಯನ್ ಲೀಗ್​ನ ಯಶಸ್ವಿ ತಂಡದ ಪೈಕಿ ಎರಡನೇಯದಾಗಿ ಗುರುತಿಸಿಕೊಂಡಿರುವುದು ಎಂ ಎಸ್ ಧೋನಿ ನಾಯತ್ವದ ಚೆನ್ನೈ ಸೂಪರ್ ಕಿಂಗ್ಸ್​.

ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಿಎಸ್​ಕೆ ಪ್ರತಿಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ಟೀಂ ಕೂಡ ಹೌದು. ಸದ್ಯ ಚೆನ್ನೈ ತನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

Chennai Super Kings Set to Release Ambati Rayudu, Kedar Jadhav And Murali Vijay Ahead of IPL Auction?
ಅಂಬಟಿ ರಾಯುಡು, ಕೇದರ್ ಜಾಧವ್ ಹಾಗೂ ಮುರಳಿ ವಿಜಯ್


48 ಗಂಟೆಯೊಳಗೆ ಎರಡನೇ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ದೀಪಕ್ ಚಹಾರ್!

ಇಂಗ್ಲಿಷ್ ಪತ್ರಿಕೆಯೊಂದು ಮಾಡಿರುವ ವರದಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ರಮುಖ ಮೂವರು ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆಯಂತೆ.

2018ರ ಐಪಿಎಲ್​ನಲ್ಲಿ ಗರಿಷ್ಠ ರನ್ ಕಲೆಹಾಕಿ ಮಿಂಚಿದ ಅಂಬಾಟಿ ರಾಯುಡುರನ್ನು ಚೆನ್ನೈ ರಿಲೀಸ್ ಮಾಡಲು ಮುಂದಾಗಿದೆಯಂತೆ. ಇವರ ಜೊತೆಗೆ ಕೇದರ್ ಜಾಧವ್ ಹಾಗೂ ಮುರಳಿ ವಿಜಯ್​ ಅವರನ್ನು ಕೂಡ ಚೆನ್ನೈ ಕೈಬಿಡುವ ತೀರ್ಮಾನ ಮಾಡಿದೆಯಂತೆ.

ಕಳೆದ ಸೀಸನ್​ನಲ್ಲಿ ಈ ಮೂವರು ಆಟಗಾರರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಅಂಬಟಿ ರಾಯುಡು ವಿಶ್ವಕಪ್​ ವೇಳೆ ಕ್ರಿಕೆಟ್​ನಿಂದ ನಿವೃತ್ತಿ ಪಡೆದು ಮತ್ತೆ ಹಿಂಪಡೆದಿದ್ದಾರೆ. ಸದ್ಯ ಇದುವೇ ರಾಯುಡುಗೆ ಮುಳುವಾಗಿದ್ದು, ಫಾರ್ಮ್​ಕೂಡ ಕಳೆದುಕೊಂಡಿದ್ದಾರೆ.Syed Mushtaq Ali Trophy: ಪಾಂಡೆ ಆರ್ಭಟಕ್ಕೆ ತಲೆಬಾಗಿದ ಸರ್ವಿಸಸ್ ; ಅಗ್ರಸ್ಥಾನಕ್ಕೇರಿದ ಕರ್ನಾಟಕ ತಂಡ

ಮುರಳಿ ವಿಜಯ್​ಗೆ ಕಳೆದ ಐಪಿಎಲ್​ನಲ್ಲಿ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಇತ್ತ ಜಾಧವ್ ನಿಧಾನಗತಿಯ ಆಟವಾಡಿದ್ದರು. ಇದನ್ನೆಲ್ಲ ಮನಗಂಡು ಸಿಎಸ್​ಕೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಆದರೆ, ಚೆನ್ನೈ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ನವೆಂಬರ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡದಿಂದ ಕೈಬಿಟ್ಟ ಹಾಗೂ ತನ್ನಲ್ಲೆ ಉಳಿಸಿಕೊಂಡ ಆಟಗಾರರ ಬಗ್ಗೆ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಿದೆ. ರಾಯುಡು, ವಿಜಯ್ ಹಾಗೂ ಜಾಧವ್ ಜೊತೆ ಶಾರ್ದೂಲ್ ಠಾಕೂರ್ ಮತ್ತು ಕರ್ಣ್​ ಶರ್ಮಾ ಹೆಸರು ಕೂಡ ಕೇಳಿಬರುತ್ತಿದೆ.

ಹ್ಯಾಟ್ರಿಕ್ ವಿಕೆಟ್ ಕಿತ್ತ ದೀಪಕ್ ಚಹಾರ್ ತಂಗಿ ಯಾರು ಗೊತ್ತಾ?; ಇಲ್ಲಿದೆ ಅಚ್ಚರಿ ವಿಚಾರ

ಧೋನಿ ಟೀಂ 13ನೇ ಆವೃತ್ತಿಯಲ್ಲಿ ಹೊಸ ತಂಡ ರಚನೆ ಮಾಡುವ ಅಂದಾಜು ಮಾಡಿಕೊಂಡಂತಿದೆ. ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

First published: November 13, 2019, 10:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading