ಕ್ರೀಡೆ

  • associate partner
HOME » NEWS » Sports » CRICKET IPL 2020 CAPTAIN VIRAT KOHLI REACTS AFTER RCB REMOVE PICTURE AND NAME ON SOCIAL MEDIA VB

Virat Kohli: ಕೊಹ್ಲಿಗೇ ತಿಳಿಯದೆ ಆರ್​​ಸಿಬಿಯಲ್ಲಿ ಹೀಗೆಲ್ಲ ನಡೆಯಿತಾ?; ವಿಷಯ ತಿಳಿದು ಗರಂ ಆದ ಕ್ಯಾಪ್ಟನ್

RCB: ಆರ್​ಸಿಬಿಯ ಈ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಇನ್​ಸ್ಟಾಗ್ರಾಂನಲ್ಲಿ ಇದುವರೆಗೂ ಹಾಕಿದ್ದ ಎಲ್ಲಾ ಪೋಸ್ಟ್​ಗಳನ್ನು ಆರ್​​ಸಿಬಿ ಡಿಲೀಟ್ ಮಾಡಿದೆ.

news18-kannada
Updated:February 13, 2020, 10:28 AM IST
Virat Kohli: ಕೊಹ್ಲಿಗೇ ತಿಳಿಯದೆ ಆರ್​​ಸಿಬಿಯಲ್ಲಿ ಹೀಗೆಲ್ಲ ನಡೆಯಿತಾ?; ವಿಷಯ ತಿಳಿದು ಗರಂ ಆದ ಕ್ಯಾಪ್ಟನ್
Virat Kohli
  • Share this:
ಬೆಂಗಳೂರು (ಫೆ. 13): ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಅಧಿಕೃತ ಟ್ವಿಟ್ಟರ್, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರೊಫೈಲ್ ಫೋಟೋ , ಕವರ್ ಫೋಟೋ ತೆಗೆದು ಹಾಕಿದ್ದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆರ್​ಸಿಬಿ ತಂಡದ ಒಬ್ಬೊಬ್ಬ ಆಟಗಾರು ಈ ಕುರಿತು ಟ್ವೀಟ್ ಮಾಡುತ್ತಿದ್ದಾರೆ. ಅದರಲ್ಲು ವಿರಾಟ್ ಕೊಹ್ಲಿ, "ತಂಡದ ನಾಯಕನಾಗಿ ನನಗೆ ಈ ಬಗ್ಗೆ ಏನೂ ಕೂಡ ತಿಳಿಸಲೇ ಇಲ್ಲವಲ್ಲ?? ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಎಬಿಡಿ ವಿಲಿಯರ್ಸ್​ ಕೂಡ "ನಮ್ಮ ಸೋಷಿಯಲ್ ಮಿಡಿಯಾ ಖಾತೆಗೆ ಏನಾಗಿದೆ?" ಎಂದು ಬರೆದುಕೊಂಡಿದ್ದಾರೆ.

  


ಆರ್​ಸಿಬಿಯ ಈ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಇನ್​ಸ್ಟಾಗ್ರಾಂನಲ್ಲಿ ಇದುವರೆಗೂ ಹಾಕಿದ್ದ ಎಲ್ಲಾ ಪೋಸ್ಟ್​ಗಳನ್ನು ಆರ್​​ಸಿಬಿ ಡಿಲೀಟ್ ಮಾಡಿದೆ.

IPL 2020: ‘What googly is this’ - Yuzvendra Chahal reacts after RCB remove picture and name on social media
ಆರ್​ಸಿಬಿಯ ಅಧಿಕೃತ ಇನ್​ಸ್ಟಾಗ್ರಾಂ ಖಾತೆ.


ಈ ಮೂಲಕ ಆರ್​ಸಿಬಿ ತಂಡ ತನ್ನ ಹೆಸರು ಬದಲಾವಣೆಗೆ ಮತ್ತೊಂದು ಸುಳಿವು ನೀಡಿದೆ. ಇದರಿಂದ ಕೇವಲ ಅಭಿಮಾನಿಗಳು ಮಾತ್ರ ಶಾಕ್ ಆಗಿದ್ದಲ್ಲದೆ, ಯಜುವೇಂದ್ರ ಚಹಾಲ್ ಕೂಡ ಟ್ವೀಟ್ ಮಾಡಿ "ಆರ್​ಸಿಬಿಯಿಂದ ಇದು ಯಾವರೀತಿಯ ಗೂಗ್ಲಿ?, ಇನ್​ಸ್ಟಾಗ್ರಾಂನ ಪ್ರೊಫೈಲ್ ಫೋಟೋ ಮತ್ತು ಪೋಸ್ಟ್​ಗಳು ಇಲ್ಲಿದೆ ಹೋದವು?" ಎಂದು ಕೇಳಿದ್ದಾರೆ.

 ಕಿಂಗ್ ಕೊಹ್ಲಿ 7 ಬಾರಿ ನಾಯಕನಾಗಿ ಆರ್​ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಆದರೂ ಒಮ್ಮೆಯೂ ಕಪ್ ಗೆಲ್ಲಲು ಯಶಸ್ವಿಯಾಗಲಿಲ್ಲ. ಆದರೆ, ಈ ಬಾರಿ ಹಲವು ಬದಲಾವಣೆಯೊಂದಿಗೆ ಹೊಸ ಹುರುಪಿನಿಂದ ಕಣಕ್ಕಿಳಿಯುವ ಅಂದಾಜಿದೆ.

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 29 ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ. ಮೇ 24ರಂದು ಫೈನಲ್ ಪಂದ್ಯ ನಡೆಯಲಿದೆ.

Youtube Video
First published: February 13, 2020, 10:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories