ಕ್ರೀಡೆ

  • associate partner
HOME » NEWS » Sports » CRICKET IPL 2020 BIG MATCH WINNERS FOR ROYAL CHALLENGER BANGALORE TEAM RCB IN INDIAN PREMIER LEAGUE 2020 VB

IPL 2020: ಕೊಹ್ಲಿ-ಎಬಿಡಿ ಜೊತೆ ಈ ಬಾರಿ ಅಬ್ಬರಿಸಲಿದ್ದಾರೆ ಮತ್ತಿಬ್ಬರು ಆಟಗಾರರು; ಯಾರು ಗೊತ್ತಾ?

RCB: 50 ಲಕ್ಷ ನೀಡಿ ಶ್ರೀಲಂಕಾ ಆಲ್ರೌಂಡರ್ ಆಟಗಾರ ಇಸುರು ಉದಾನ ಅವರನ್ನು ಆರ್​ಸಿಬಿ ಖರೀದಿ ಮಾಡಿದೆ. ಇವರು ಕೂಡ 6 ಅಥವಾ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮ್ಯಾಚ್ ಫಿನಿಶ್ ಮಾಡುವ ಆಟಗಾರನಾಗಿದ್ದಾರೆ.

news18-kannada
Updated:January 18, 2020, 3:05 PM IST
IPL 2020: ಕೊಹ್ಲಿ-ಎಬಿಡಿ ಜೊತೆ ಈ ಬಾರಿ ಅಬ್ಬರಿಸಲಿದ್ದಾರೆ ಮತ್ತಿಬ್ಬರು ಆಟಗಾರರು; ಯಾರು ಗೊತ್ತಾ?
13ನೇ ಆವೃತ್ತಿಯ ಐಪಿಎಲ್ಗೆ ಬಲಿಷ್ಠ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಆರ್ಸಿಬಿ ಈ ಬಾರಿ ಆದ್ರೂ ಕಪ್ ಗೆಲ್ಲುತ್ತಾ ನೋಡಬೇಕಿದೆ.
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಇನ್ನು ಕೇಲವು ತಿಂಗಳುಗಳಷ್ಟೆ ಬಾಕಿ ಉಳಿದಿದೆ. ಈಗಾಗಲೇ ಬಿಸಿಸಿಐ ವೇಳಾಪಟ್ಟಿಯನ್ನು ತಯಾರು ಮಾಡುತ್ತಿದ್ದು, ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಈ ಬಾರಿ ಪ್ರತಿ ತಂಡ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿದ್ದು, ಎಲ್ಲ ತಂಡ ಸ್ಟ್ರಾಂಗ್ ಆಗಿವೆ. ಅಂತೆಯೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಇಬ್ಬರು ಸ್ಟಾರ್ ಮ್ಯಾಚ್ ಫಿನಿಶರ್ ಆಟಗಾರರಿದ್ದಾರೆ. ಇವರು ಕೊಹ್ಲಿ- ಎಬಿಡಿ ಜೊತೆ ಅಬ್ಬರಿಸುವುದು ಖಚಿತ.

IPL 2020: Three big match winners for Royal Challenger Bangalore Team RCB
ವಿರಾಟ್ ಕೊಹ್ಲಿ.


Sania Mirza: ಸಾನಿಯಾ ಸೂಪರ್ ಕಮ್​ಬ್ಯಾಕ್​; ಹೊಬಾರ್ಟ್‌ ಇಂಟರ್​​ನ್ಯಾಷನಲ್ ಪ್ರಶಸ್ತಿ ಗೆದ್ದ ಮಿರ್ಜಾ ಜೋಡಿ

ವಿರಾಟ್ ಕೊಹ್ಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್​​ನಲ್ಲಿ ಆರ್​ಸಿಬಿ ಪರ ಅಷ್ಟೊಂದು ಯಶಸ್ಸು ಸಿಕ್ಕಿಲ್ಲ. ಆದರೆ, ತಂಡಕ್ಕೆ ತನ್ನ ಕೊಡುಗೆಯನ್ನು ಪ್ರತಿ ಸೀಸನ್​​ನಲ್ಲಿ ನೀಡುತ್ತಿದ್ದಾರೆ. ಅದೆಷ್ಟೊ ಬಾರಿ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಐಪಿಎಲ್​​​ ಇತಿಹಾಸದಲ್ಲೆ ಗರಿಷ್ಠ ರನ್ ಗಳಿಸಿದವರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಒಬ್ಬ ಬೆಸ್ಟ್​ ಮ್ಯಾಚ್ ಫಿನಿಶರ್ ಕೂಡ ಆಗಿದ್ದು, ಇತ್ತೀಚೆಗಷ್ಟೆ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಲ್ಲಿ ಇದನ್ನ ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಹೀಗಾಗಿ ಈ ಬಾರಿ ತಂಡವನ್ನು ಹೇಗಾದರು ಮಾಡಿ ಫೈನಲ್​​ನತ್ತ ಕೊಂಡಯ್ಯಬೇಕೆಂದೆ ಕೊಹ್ಲಿ ಪಣತೊಟ್ಟಿದ್ದಾರೆ.

IPL 2020: Three big match winners for Royal Challenger Bangalore Team RCB
ಎಬಿ ಡಿವಿಲಿಯರ್ಸ್​.
ಎಬಿ ಡಿವಿಲಿಯರ್ಸ್​: ಆರ್​ಸಿಬಿ ತಂಡದ ಆಧಾರ ಸ್ಥಂಭ ಎಬಿ ಡಿವಿಲಿಯರ್ಸ್​​. ಮಿ. 360 ಎಂದೇ ಖ್ಯಾತಿಯಾಗಿರುವ ಎಬಿಡಿ ಮ್ಯಾಚ್ ಫಿನಿಶ್ ಮಾಡುವ ಆಟಗಾರ. ಎಂತಹದೆ ಸಂದರ್ಭದಲ್ಲಿ ಬ್ಯಾಟ್ ಬೀಸುವ ಇವರು 3 ಬಾರಿ ಐಪಿಎಲ್​​ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ ಬ್ಯಾಟಿಂಗ್ ಜೊತೆಯಲ್ಲದೆ ಫೀಲ್ಡಿಂಗ್​ನಲ್ಲು ಅದ್ಭುತ ಕ್ಯಾಚ್, ಶರವೇಗದಲ್ಲಿ ರನೌಟ್ ಮಾಡುವ ಗೇಮ್ ಚೇಂಜರ್ ಕೂಡ ಔದು.

IND vs AUS: ರೋಹಿತ್-ಧವನ್ 3ನೇ ಏಕದಿನಕ್ಕೆ ಡೌಟ್; ಟೀಂ ಇಂಡಿಯಾ ಓಪನರ್​ಗಳು ಯಾರು ಗೊತ್ತಾ?

ಶಿವಂ ದುಬೆ/ ಇಸುರು ಉದಾನ:  ಕಳೆದ ಸೀಸನ್​ನಲ್ಲಿ ಶಿವಂ ದುಬೆ ಅವರಿಗೆ ಅಷ್ಟೊಂದು ಅವಕಾಶ ಸಿಕ್ಕಿರಲಿಲ್ಲ. ಆದರೆ, ಸದ್ಯ ಟೀಂ ಇಂಡಿಯಾ ಸೇರಿ ಅನಭವ ಪಡೆದಿರುವ ದುಬೆ ಅಂತಿಮ ಹಂತದಲ್ಲಿ ಬ್ಯಾಟ್ ಬೀಸಲು ಬಂದರೆ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಯುವುದು ಖಚಿತ.

IPL 2020: Three big match winners for Royal Challenger Bangalore Team RCB
ಶಿವಂ ದುಬೆ ಹಾಗೂ ಇಸುರು ಉದಾನ.


ಇನ್ನು 50 ಲಕ್ಷ ನೀಡಿ ಶ್ರೀಲಂಕಾ ಆಲ್ರೌಂಡರ್ ಆಟಗಾರ ಇಸುರು ಉದಾನ ಅವರನ್ನು ಆರ್​ಸಿಬಿ ಖರೀದಿ ಮಾಡಿದೆ. ಇವರು ಕೂಡ 6 ಅಥವಾ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಮ್ಯಾಚ್ ಫಿನಿಶ್ ಮಾಡುವ ಆಟಗಾರನಾಗಿದ್ದಾರೆ. ದೊಡ್ಡ ಹೊಡೆತಗಳಿಗೆ ಫೇಮಸ್ ಆಗಿರುವ ಉದಾನ ಆರ್​ಸಿಬಿ ಪರ ಮಿಂಚುತ್ತಾರ ನೋಡಬೇಕಿದೆ.

Youtube Video
First published: January 18, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories