IPL 2020 Auction: ಐಪಿಎಲ್ ಹರಾಜಿಗೆ ಮ್ಯಾಕ್ಸ್​ವೆಲ್​, ಪ್ಯಾಟ್ ಕಮಿನ್ಸ್​ ಸೇರಿ 332 ಆಟಗಾರರ ಹೆಸರು ಪ್ರಕಟ

971 ಆಟಗಾರರ ಪೈಕಿ 332 ಆಟಗಾರರು ಈ ಬಾರಿಯ ಹರಾಜಿಗೆ ಲಭ್ಯರಿದ್ದಾರೆ. 16 ಆಟಗಾರರು ಈಗಾಗಲೇ ಕೋಟಿ ಲೆಕ್ಕದಲ್ಲಿ ಮೂಲ ಬೆಲೆ ಪ್ರಕಟಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 73 ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ.

news18-kannada
Updated:December 14, 2019, 8:04 AM IST
IPL 2020 Auction: ಐಪಿಎಲ್ ಹರಾಜಿಗೆ ಮ್ಯಾಕ್ಸ್​ವೆಲ್​, ಪ್ಯಾಟ್ ಕಮಿನ್ಸ್​ ಸೇರಿ 332 ಆಟಗಾರರ ಹೆಸರು ಪ್ರಕಟ
IPL 2020
  • Share this:
ಬೆಂಗಳೂರು (ಡಿ. 14): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜಿಗೆ ಕೇವಲ 5 ದಿನವಷ್ಟೆ ಬಾಕಿಯಿದೆ. ಡಿ. 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ ಇದಕ್ಕಾಗಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.

ಈ ಬಾರಿಯ ಐಪಿಎಲ್​ನಲ್ಲಿ ಆಡಲು ಒಟ್ಟು 971 ಆಟಗಾರರಿಂದ ಅರ್ಜಿ ಬಂದಿವೆ. ಇದನ್ನು ಶಾರ್ಟ್​​ ಲಿಸ್ಟ್​ ಮಾಡಿ, 332 ಆಟಗಾರರನ್ನು ಫೈನಲ್ ಮಾಡಲಾಗಿದ್ದು. 73 ಸ್ಥಾನವಷ್ಟೆ ಕಾಲಿಯಿದ್ದು, ಈ ಜಾಗಕ್ಕಾಗಿ 332 ಆಟಗಾರರು ಹರಾಜಿನಲ್ಲಿ ಕಾದಾಟ ನಡೆಸಲಿದ್ದಾರೆ. ಈ ಪೈಕಿ 24 ಹೊಸ ಆಟಗಾರರು ಹಾಗೂ 19 ಭಾರತೀಯ ಆಟಗಾರರಿದ್ದಾರೆ. ಸದ್ಯ ಈ 332 ಆಟಗಾರರ ಹೆಸರು ಪ್ರಕಟವಾಗಿದೆ.

IPL 2020: ಐಪಿಎಲ್ ಪಂದ್ಯವನ್ನಾಡಿದ ಪಾಕ್ ಆಟಗಾರರು ಇವರೇ..!

ಈಗಾಗಲೇ 16 ಆಟಗಾರರು ತಮ್ಮ ಗರಿಷ್ಠ ಬೇಸ್ ಪ್ರೈಸ್ ಪ್ರಕಟಿಸಿದ್ದು, ಅದರಲ್ಲಿ ಬೃಹತ್ ಮೊತ್ತವನ್ನು ಡಿಮ್ಯಾಂಡ್ ಮಾಡಿರುವುದು ಏಕೈಕ ಭಾರತೀಯ ಕ್ರಿಕೆಟಿಗ ಎಂಬುವುದು ವಿಶೇಷ. 7 ವಿದೇಶಿ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ತಿಳಿಸಿದ್ದಾರೆ. ಇನ್ನು 9 ಆಟಗಾರರು 1.5 ಕೋಟಿಗೆ ತಮ್ಮ ಬೆಲೆಯನ್ನು ನಿಗದಿ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಕ್ರಿಸ್‌ ಲಿನ್‌, ಮಿಚೆಲ್‌ ಮಾರ್ಷ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಮತ್ತು ಶ್ರೀಲಂಕಾದ ಏಂಜಲೊ ಮ್ಯಾಥ್ಯೂಸ್‌ 2 ಕೋಟಿ ಲಿಸ್ಟ್‌ನಲ್ಲಿರುವ ಆಟಗಾರರು.

ಇನ್ನು 1.5 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌, ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಟ್‌ ಈ ಪಟ್ಟಿಯಲ್ಲಿ ಇರುವ ಸ್ಟಾರ್‌ ಆಟಗಾರರಾಗಿದ್ದಾರೆ.

ಕ್ರಿಕೆಟ್ ಸ್ಟೇಡಿಯಂನಲ್ಲೇ ಪೂಲ್ ಬೀಚ್: ಮೋಜು ಮಸ್ತಿಯೊಂದಿಗೆ ಪಂದ್ಯ ವೀಕ್ಷಣೆಇನ್ನು ಕೆಕೆಆರ್​ನಿಂದ ಬಿಡುಗಡೆಯಾಗಿರುವ ಪಿಯೂಷ್ ಚಾವ್ಲಾ, ಯೂಸುಫ್ ಪಠಾಣ್ (ಸನ್​ರೈಸರ್ಸ್​​), ಜೈದೇವ್ ಉನಾದ್ಕಟ್ (ಆರ್​ಆರ್​) ಅವರ ಮೂಲಬೆಲೆ 1 ಕೋಟಿ ರೂ. ಆಗಿದೆ. 183 ಹೊಸ ಆಟಗಾರು 20 ಲಕ್ಷ, 40 ಲಕ್ಷದ 7 ಆಟಗಾರರು ಹಾಗೂ 30 ಲಕ್ಷದ 8 ಆಟಗಾರರಿದ್ದಾರೆ.

ಒಟ್ಟಾರೆ 971 ಆಟಗಾರರ ಪೈಕಿ 332 ಆಟಗಾರರು ಈ ಬಾರಿಯ ಹರಾಜಿಗೆ ಲಭ್ಯರಿದ್ದಾರೆ. 16 ಆಟಗಾರರು ಈಗಾಗಲೇ ಕೋಟಿ ಲೆಕ್ಕದಲ್ಲಿ ಮೂಲ ಬೆಲೆ ಪ್ರಕಟಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 73 ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ. ಹೀಗಾಗಿ ಇದರಲ್ಲಿ ಯಾರು ಉಳಿಯಲಿದ್ದಾರೆ, ಯಾರಿಗೆ ಫ್ರಾಂಚೈಸಿ ಮಣೆ ಹಾಕಲಿದ್ದಾರೆ ಎಂಬುದು ಡಿ. 19 ರಂದು ತಿಳಿದು ಬರಲಿದೆ.

332 ಆಟಗಾರ ಸಂಪೂರ್ಣ ವಿವರ:

IPL Auction List Trimmed from 971 to 332

First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ