ಐಪಿಎಲ್ ಹರಾಜು ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?; ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತದಲ್ಲಿ ಸೇಲ್ ಆಗಲಿರುವ ಸಂಭಾವ್ಯ ಆಟಗಾರರು: ಪ್ಯಾಟ್ ಕಮಿನ್ಸ್​, ಗ್ಲೆನ್ ಮ್ಯಾಕ್ಸ್​​ವೆಲ್, ಈಯಾನ್ ಮಾರ್ಗನ್, ಯಶಸ್ವಿ ಜೈಸ್ವಾಲ್, ಪ್ರಿಯಾಮ್ ಗರ್ಗ್​.

Vinay Bhat | news18-kannada
Updated:December 16, 2019, 4:22 PM IST
ಐಪಿಎಲ್ ಹರಾಜು ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?; ಇಲ್ಲಿದೆ ಸಂಪೂರ್ಣ ಮಾಹಿತಿ
IPL 2020 Auction Date, Time, Place, Final Player List, Live Streaming Details
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 3 ದಿನಗಳಷ್ಟೆ ಬಾಕಿ ಇಳಿದಿದೆ. ಈಗಾಗಕೇ ಐಪಿಎಲ್ ಮಂಡಳಿ 971 ಆಟಗಾರರಿಂದ ಬಂದ ಅರ್ಜಿಯನ್ನು ಶಾರ್ಟ್​ ಲಿಸ್ಟ್​ ಮಾಡಿ 332ಕ್ಕೆ ಇಳಿಸಿದೆ. ಈ ಪೈಕಿ ಕೇವಲ 73 ಸ್ಥಾನಕ್ಕೆ ಇಷ್ಟು ಆಟಗಾರರ ನಡುವೆ ಕಾದಾಟ ನಡೆಯಲಿದೆ.

332 ಆಟಗಾರರು ಯಾರು ಎಂಬ ಹೆಸರನ್ನು ಕೂಡ ಐಪಿಎಲ್ ಮಂಡಳಿ ಈಗಾಗಲೇ ತಿಳಿಸಿದೆ. 7 ವಿದೇಶಿ ಆಟಗಾರ ಮೂಲ ಬೆಲೆಯನ್ನು 2 ಕೋಟಿ ಆಗಿದೆ. 332 ಆಟಗಾರ ಸಂಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ

ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಕ್ರಿಸ್‌ ಲಿನ್‌, ಮಿಚೆಲ್‌ ಮಾರ್ಷ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಮತ್ತು ಶ್ರೀಲಂಕಾದ ಏಂಜಲೊ ಮ್ಯಾಥ್ಯೂಸ್‌ 2 ಕೋಟಿ ಲಿಸ್ಟ್‌ನಲ್ಲಿರುವ ಆಟಗಾರರು.

IPL 2020: ಹರಾಜಿನಲ್ಲಿ ವಿರಾಟ್ ಮೇಲೆ ಎಲ್ಲರ ಕಣ್ಣು; ಆದ್ರೆ ಕೊಹ್ಲಿ ಅಲ್ಲ; ಮತ್ಯಾರು?

 ಇನ್ನು 9 ಆಟಗಾರರ ಬೆಲೆ 1.5 ಕೋಟಿ ರೂ. ನಿಗದಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌, ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಟ್‌ ಈ ಪಟ್ಟಿಯಲ್ಲಿ ಇರುವ ಸ್ಟಾರ್‌ ಆಟಗಾರರು.

ಎಲ್ಲಿ ಮತ್ತು ಯಾವಾಗ?: 19 ಡಿಸೆಂಬರ್ 2019, ಕೋಲ್ಕತ್ತಾ

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್​​ ಮತ್ತು ಹಾಟ್​ಸ್ಟಾರ್

ಕ್ರಿಕೆಟ್​ನಲ್ಲಿ ಈರೀತಿ ಎಂದೂ ನೋಡಿರಲಿಲ್ಲ; ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಕೆಂಡಾಮಂಡಲ ಆಗಿದ್ದೇಕೆ?

ಸಮಯ: ಐಪಿಎಲ್ ಹರಾಜು ಕಾರ್ಯಕ್ರಮ ಮಧ್ಯಾಹ್ನ 2:30ಕ್ಕೆ ಆರಂಭ, ಹರಾಜು ಪ್ರಕ್ರಿಯೆ 3:30ಕ್ಕೆ ಶುರುವಾಗಲಿದೆ.

ಹರಾಜಿನಲ್ಲಿ ಸೇಲ್ ಆಗುವ ಆಟಗಾರರು: 73

ದೊಡ್ಡ ಮೊತ್ತದಲ್ಲಿ ಸೇಲ್ ಆಗಲಿರುವ ಸಂಭಾವ್ಯ ಆಟಗಾರರು: ಪ್ಯಾಟ್ ಕಮಿನ್ಸ್​, ಗ್ಲೆನ್ ಮ್ಯಾಕ್ಸ್​​ವೆಲ್, ಈಯಾನ್ ಮಾರ್ಗನ್, ಯಶಸ್ವಿ ಜೈಸ್ವಾಲ್, ಪ್ರಿಯಾಮ್ ಗರ್ಗ್​.

 First published:December 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ