ಐಪಿಎಲ್ ಹರಾಜಿಗೆ ಕ್ಷಣಗಣನೆ; ಯಾವ ತಂಡದ ಬಳಿ ಎಷ್ಟು ಹಣ?, ಎಷ್ಟು ಪ್ಲೇಯರ್ಸ್​ ಖರೀದಿಸಬಹುದು?

IPL 2020: ಹೆಚ್ಚು ಆಟಗಾರರನ್ನು ಖರೀದಿಸಲು ಅವಕಾಶ ಇರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಒಟ್ಟು 12 ಪ್ಲೇಯರ್​ಗಳನ್ನು ಕೊಹ್ಲಿ ಪಡೆ ಖರೀದಿ ಮಾಡಬಹುದು.

Vinay Bhat | news18-kannada
Updated:December 18, 2019, 3:11 PM IST
ಐಪಿಎಲ್ ಹರಾಜಿಗೆ ಕ್ಷಣಗಣನೆ; ಯಾವ ತಂಡದ ಬಳಿ ಎಷ್ಟು ಹಣ?, ಎಷ್ಟು ಪ್ಲೇಯರ್ಸ್​ ಖರೀದಿಸಬಹುದು?
ಈ ಸಂದರ್ಭ ಡೆಲ್ಲಿ ಡೇರ್ಡೆವಿಲ್ಸ್ ಆಗಿನ ಅಂಡರ್-19 ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಯನ್ನು ಬಿಟ್ಟು 50 ಸಾವಿರ ಡಾಲರ್ಗೆ ಪ್ರದೀಪ್ ಸಂಗ್ವಾನ್ರನ್ನು ಖರೀದಿ ಮಾಡಿತ್ತು.
  • Share this:
ಬೆಂಗಳೂರು (ಡಿ. 18): ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಡಿ. 19) ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜಿನ ಮೇಲೆ ಎಲ್ಲ ಫ್ರಾಂಚೈಸಿ ಕಣ್ಣಿಟ್ಟಿದೆ. 8 ಫ್ರಾಂಚೈಸಿಗಳು ತಮಗೆ ಬೇಕಾಗಿರುವ ಆಟಗಾರರನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ.  

ಕಿಂಗ್ಸ್​ ಇಲೆವೆನ್ ಪಂಜಾಬ್ ಬಳಿ ಗರಿಷ್ಠ ಮೊತ್ತವಿದ್ದು, 42.70 ಕೋಟಿ ಹಣವಿದೆ. ಅತಿ ಕಡಿಮೆ ಹಣವಿರುವ ತಂಡ ಮುಂಬೈ ಇಂಡಿಯನ್ಸ್ ಆಗಿದ್ದು 13.05 ಕೋಟಿ ರೂ. ಇದೆ.

 ಇನ್ನು ಹೆಚ್ಚು ಆಟಗಾರರನ್ನು ಖರೀದಿಸಲು ಅವಕಾಶ ಇರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಒಟ್ಟು 12 ಪ್ಲೇಯರ್​ಗಳನ್ನು ಕೊಹ್ಲಿ ಪಡೆ ಖರೀದಿ ಮಾಡಬಹುದು. ಇದರಲ್ಲಿ 6 ವಿದೇಶಿ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಅವಕಾಶ ಆರ್​ಸಿಬಿಗಿದೆ.

India vs West Indies Live: ರೋಹಿತ್-ರಾಹುಲ್ ಅರ್ಧಶತಕ; ಶತಕದ ಜೊತೆಯಾಟ

ಇನ್ನು 2 ಕೋಟಿ ಮೂಲ ಬೆಲೆಗೆ 7 ಆಟಗಾರರು ಲಭ್ಯವಿದ್ದು ಎಲ್ಲ ವಿದೇಶಿ ಆಟಗಾರರಾಗಿದ್ದಾರೆ. 1.5 ಕೋಟಿಗೆ 10 ಆಟಗಾರರಿದ್ದು ಭಾರತದ 1 ಹಾಗೂ 9 ವಿದೇಶಿಯರಾಗಿದ್ದಾರೆ. ಅಂತೆಯೆ 1 ಕೋಟಿಗೆ 23 ಆಟಗಾರರಿದ್ದಾರೆ (ಭಾರತ 3, 20 ವಿದೇಶಿಯರು). 75 ಲಕ್ಷದ 16 ಆಟಗಾರರು (16 ವಿದೇಶಿಯರು), ಹಾಗೂ 50 ಲಕ್ಷದ 78 ಆಟಗಾರರು (ಭಾರತ 9, 69 ವಿದೇಶಿಯರು) ಹರಾಜಿಗೆ ಲಭ್ಯರಿದ್ದಾರೆ.

   • ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 9 ಆಟಗಾರರನ್ನು ಖರೀದಿಸುವ ಅವಕಾಶವಿದೆ. ವಿದೇಶಿ ಆಟಗಾರರು 4.

  • ಕೋಲ್ಕತಾ ನೈಟ್ ರೈಡರ್ಸ್​​ ಒಟ್ಟು 11 ಪ್ಲೇಯರ್ಸ್​​ಗಳನ್ನು ಹರಾಜಿನಲ್ಲಿ ಪಡೆದುಕೊಳ್ಳಬಹುದು. ವಿದೇಶಿ ಆಟಗಾರರು 4.

  • ರಾಜಸ್ಥಾನ ರಾಯಲ್ಸ್ ಖರೀದಿಸಬಹುದಾದ ಆಟಗಾರರು 11. ವಿದೇಶಿ ಆಟಗಾರರು 4.

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 12 ಆಟಗಾರರನ್ನು ಖರೀದಿಸುವ ಅವಕಾಶವಿದೆ. ವಿದೇಶಿ ಆಟಗಾರರು 6.

  • ಡೆಲ್ಲಿ ಕ್ಯಾಪಿಟಲ್ಸ್ 11 ಆಟಗಾರರನ್ನು ಖರೀದಿಸಬಹುದು. ವಿದೇಶಿ ಆಟಗಾರರು 5.

  • ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಬಹುದಾದ ಆಟಗಾರರು 7. ವಿದೇಶಿ ಆಟಗಾರರು 2.

  • ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಬಹುದಾದ ಆಟಗಾರರು 5. ವಿದೇಶಿ ಆಟಗಾರರು 2.

  • ಮುಂಬೈ ಇಂಡಿಯನ್ಸ್ 7 ಆಟಗಾರರನ್ನು ಖರೀದಿಸಬಹುದು. ವಿದೇಶಿ ಆಟಗಾರರು.


ಯಾವ ತಂಡದ ಬಳಿ ಎಷ್ಟು ಹಣ?:ತಂಡ ಬಾಕಿ ಇರುವ ಹಣ
ಕಿಂಗ್ಸ್ ಇಲೆವೆನ್ ಪಂಜಾಬ್ 42.70 ಕೋಟಿ ರೂ.
ಕೋಲ್ಕತಾ ನೈಟ್ ರೈಡರ್ಸ್ 35.65 ಕೋಟಿ ರೂ.
ರಾಜಸ್ಥಾನ ರಾಯಲ್ಸ್ 28.90 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 27.90 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್ 27.85 ಕೋಟಿ ರೂ.
ಸನ್‌ರೈಸರ್ಸ್ ಹೈದರಾಬಾದ್ 17 ಕೋಟಿ ರೂ.
ಚೆನ್ನೈ ಸೂಪರ್ ಕಿಂಗ್ಸ್ 14.60 ಕೋಟಿ ರೂ.
ಮುಂಬೈ ಇಂಡಿಯನ್ಸ್ 13.05 ಕೋಟಿ ರೂ.

First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading