IPL 2020 Auction: ಹರಾಜಿನಲ್ಲಿ ಸೇಲ್ ಆಗದ ಅತಿ ಕಿರಿಯ ಆಟಗಾರ; ಮಾರಾಟವಾದ 48 ವರ್ಷದ ಪ್ಲೇಯರ್!

Indian Premier League (IPL) 2020 Player Auction: 48 ವರ್ಷ ಪ್ರಾಯದ ಪ್ರವೀನ್ ತಾಂಬೆ ಸೇಲ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 20 ಲಕ್ಷ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. 2013 ರಲ್ಲಿ ಐಪಿಎಲ್​ಗೆ​ ಪದಾರ್ಪಣೆ ಮಾಡಿದ್ದ ತಾಂಬೆ, ನಾಲ್ಕು ಸೀಸನ್​ಗಳನ್ನು ಪ್ರತಿನಿಧಿಸಿದ್ದರು.

Vinay Bhat | news18-kannada
Updated:December 20, 2019, 11:19 AM IST
IPL 2020 Auction: ಹರಾಜಿನಲ್ಲಿ ಸೇಲ್ ಆಗದ ಅತಿ ಕಿರಿಯ ಆಟಗಾರ; ಮಾರಾಟವಾದ 48 ವರ್ಷದ ಪ್ಲೇಯರ್!
ಐಪಿಎಲ್ 2020
  • Share this:
13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಹಣದ ಹೊಳೆ ಹರಿಸಿದ ಫ್ರಾಂಚೈಸಿ ತಂಡಗಳು ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿ ಮಾಡಿದ್ದಾರೆ.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದ್ದು ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್​. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ಸೇರಿಸಿಕೊಂಡಿದ್ದಾರೆ. ನಂತರ ಗ್ಲೆನ್ ಮ್ಯಾಕ್ಸ್​ವೆಲ್​ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್​ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

 


IPL RCB Team 2020 Players List: ಆರ್​ಸಿಬಿ ತಂಡ ಸೇರಿದ ಹೊಸ 8 ಆಟಗಾರರು; ಒಬ್ಬ ಕನ್ನಡಿಗ!

ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಗಮನ ಸೆಳೆದಿದ್ದು 14 ವರ್ಷದ ಪೋರ ಹಾಗೂ 48 ವರ್ಷದ ಆಟಗಾರ. ಆದರೆ, ಅಚ್ಚರಿ ಎಂಬಂತೆ ಯುವ ಆಟಗಾರ ಖರೀದಿಯಾಗದೆ ಬಿಕಾರಿಯಾಗಿದ್ದು, 48 ವರ್ಷ ಪ್ರಾಯದ ಪ್ಲೇಯರ್ ಹರಾಜಿನಲ್ಲಿ ಸೇಲ್ ಆಗಿದ್ದಾರೆ.

ಅಫ್ಘಾನಿಸ್ತಾನ ಅಂಡರ್-19 ತಂಡದ 14 ವರ್ಷದ ಪೋರ ನೂರ್ ಅಹ್ಮದ್ ಈ ಬಾರಿಯ ಐಪಿಎಲ್​ನಲ್ಲಿ ಹರಾಜಿಗೆ ಮಭ್ಯವಿದ್ದ ಅತಿ ಕಿರಿಯ ಆಟಗಾರ. ಇವರ ಮೂಲಬೆಲೆ 20 ಲಕ್ಷ ಎಂದು ಘೋಷಿಸಲಾಗಿತ್ತು. ಆದರೆ, ಯಾವೊಂದು ಫ್ರಾಂಚೈಸಿ ಇವರನ್ನು ಖರೀದಿಸಲು ಮುಂದೆ ಬರಲಿಲ್ಲ.

ಬದಲಾಗಿ 48 ವರ್ಷ ಪ್ರಾಯದ ಪ್ರವೀನ್ ತಾಂಬೆ ಸೇಲ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇವರನ್ನು ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ 20 ಲಕ್ಷ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡಿದೆ. 2013 ರಲ್ಲಿ ಐಪಿಎಲ್​ಗೆ​ ಪದಾರ್ಪಣೆ ಮಾಡಿದ್ದ ತಾಂಬೆ, ನಾಲ್ಕು ಸೀಸನ್​ಗಳನ್ನು ಪ್ರತಿನಿಧಿಸಿದ್ದರು.

2020 IPL Players List: ಹರಾಜು ಪ್ರಕ್ರಿಯೆ ಮುಕ್ತಾಯ; 73 ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡಕ್ಕೆ; ಇಲ್ಲಿದೆ ಕಂಪ್ಲೀಟ್ ಲಿಸ್ಟ್​

ಹರಾಜಿನಲ್ಲಿ ಸೇಲ್ ಆದ ಬಗ್ಗೆ ಮಾತನಾಡಿದ ತಾಂಬೆ,
ನಾನು ಈಗಲೂ 20 ವರ್ಷದ ಯುವ ಆಟಗಾರನಾಗಿ ಆಡಲು ಬಯಸುತ್ತೇನೆ. ನನ್ನ ಅನುಭವ ಹಾಗೂ ಬಲ ಸಂಪೂರ್ಣವಾಗಿ ಕೆಕೆಆರ್ ತಂಡಕ್ಕೆ ನೀಡುತ್ತೇನೆ. ಅದು ಫೀಲ್ಡಿಂಗ್​ನಲ್ಲಾದರು ಸೈ, ಬೌಲಿಂಗ್​ನಲ್ಲಾದರು ನನ್ನ ಕಡೆಯಿಂದ ಎಷ್ಟು ಸಾಧ್ಯವೊ ಅಚ್ಟು ಪರಿಶ್ರಮ ಪಟ್ಟು ಆಡುತ್ತೇನೆ. ನನ್ನ ಕುಟುಂಬ ನನ್ನ ಬೆಂಬಲಕ್ಕಿದೆ. ನನ್ನಲ್ಲಿನ ಯಾವುದೊ ಅಂಶಕಂಡು ಕೆಕೆಆರ್ ಹರಾಜಿನಲ್ಲಿ ಕೊಂಡುಕೊಂಡಿದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ
ಎಂಬುದು ತಾಂಬೆ ಮಾತು.

ಕಾಪರ್ ಲೆಗ್ ಬ್ರೇಕ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ಇವರು ಈವರೆಗೆ 33 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 28 ವಿಕೆಟ್​ ಕಬಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು 61 ಟಿ- 20 ಪಂದ್ಯಗಳಿಂದ 67 ವಿಕೆಟ್ ಪಡೆದು ಮಿಂಚಿದ್ದಾರೆ. 2016 ರಲ್ಲಿ ಕೊನೆಯ ಬಾರಿ ಹೈದರಾಬಾದ್ ಪರ ಆಡಿದ್ದ ಪ್ರವೀಣ್ ತಾಂಬೆ, ಇತ್ತೀಚೆಗೆ ನಡೆದ ಟಿ-10 ಕ್ರಿಕೆಟ್​ನಲ್ಲಿ ಅದ್ಭುತ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಆರ್​ಸಿಬಿ ತಂಡಕ್ಕೆ 10 ಕೋಟಿಗೆ ಸೇಲ್ ಆದ ಖುಷಿಯಲ್ಲಿ ಕ್ರಿಸ್ ಮೊರೀಸ್ ಏನು ಮಾಡಿದ್ರು ನೋಡಿ!

ಈ ಪ್ರದರ್ಶನದಿಂದ 2020 ಐಪಿಎಲ್​ನಲ್ಲಿ ಇವರು ಹರಾಜಾಗಿದ್ದು, ಕೋಲ್ಕತ್ತಾ ಪರ ಯಾವರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುವುದು ಕಾದುನೋಡಬೇಕಿದೆ.

First published:December 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ