ಕ್ರೀಡೆ

  • associate partner

IPL 2020 Auction: ಐಪಿಎಲ್ ಹರಾಜಿನಲ್ಲಿ ಒಟ್ಟು ಎಷ್ಟು ಆಟಗಾರರು?; ಇಲ್ಲಿದೆ ಸಂಪೂರ್ಣ ಮಾಹಿತಿ

IPL 2020: 971 ಆಟಗಾರರ ಪೈಕಿ 332 ಆಟಗಾರರು ಈ ಬಾರಿಯ ಹರಾಜಿಗೆ ಲಭ್ಯರಿದ್ದಾರೆ. 16 ಆಟಗಾರರು ಈಗಾಗಲೇ ಕೋಟಿ ಲೆಕ್ಕದಲ್ಲಿ ಮೂಲ ಬೆಲೆ ಪ್ರಕಟಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 73 ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ.

Vinay Bhat | news18-kannada
Updated:December 12, 2019, 1:19 PM IST
IPL 2020 Auction: ಐಪಿಎಲ್ ಹರಾಜಿನಲ್ಲಿ ಒಟ್ಟು ಎಷ್ಟು ಆಟಗಾರರು?; ಇಲ್ಲಿದೆ ಸಂಪೂರ್ಣ ಮಾಹಿತಿ
ಆದರೆ, ಮೋಹಿತ್ ಅಹ್ವಾವತ್ ಅವರನ್ನು 2017 ಐಪಿಎಲ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿ ಮಾಡಲಿಲ್ಲ. ಅನ್ಸೋಲ್ಡ್ ಆಗಿ ಉಳಿದರು.
  • Share this:
ಬೆಂಗಳೂರು (ಡಿ. 12): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜಿಗೆ ಕೇವಲ 7 ದಿನವಷ್ಟೆ ಬಾಕಿಯಿದೆ. ಡಿ. 19 ರಂದು ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ ಇದಕ್ಕಾಗಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.

ಈ ಬಾರಿಯ ಐಪಿಎಲ್​ನಲ್ಲಿ ಆಡಲು ಒಟ್ಟು 971 ಆಟಗಾರರಿಂದ ಅರ್ಜಿ ಬಂದಿವೆ. ಇದನ್ನು ಶಾರ್ಟ್​​ ಲಿಸ್ಟ್​ ಮಾಡಿ, 332 ಆಟಗಾರರನ್ನು ಫೈನಲ್ ಮಾಡಲಾಗಿದೆ. 73 ಸ್ಥಾನವಷ್ಟೆ ಕಾಲಿಯಿದ್ದು, ಈ ಜಾಗಕ್ಕಾಗಿ 332 ಆಟಗಾರರು ಹರಾಜಿನಲ್ಲಿ ಕಾದಾಟ ನಡೆಸಲಿದ್ದಾರೆ. ಈ ಪೈಕಿ 24 ಹೊಸ ಆಟಗಾರರು ಹಾಗೂ 19 ಭಾರತೀಯ ಆಟಗಾರರಿದ್ದಾರಂತೆ.

Ranji Trophy: ಅಸ್ಸಾಂನಲ್ಲಿ ಬಿಗುವಿನ ಪರಿಸ್ಥಿತಿ; ರಣಜಿ ಟ್ರೋಫಿ ಪಂದ್ಯಗಳು ರದ್ದು

ಈಗಾಗಲೇ 16 ಆಟಗಾರರು ತಮ್ಮ ಗರಿಷ್ಠ ಬೇಸ್ ಪ್ರೈಸ್ ಪ್ರಕಟಿಸಿದ್ದು, ಅದರಲ್ಲಿ ಬೃಹತ್ ಮೊತ್ತವನ್ನು ಡಿಮ್ಯಾಂಡ್ ಮಾಡಿರುವುದು ಏಕೈಕ ಭಾರತೀಯ ಕ್ರಿಕೆಟಿಗ ಎಂಬುದು ವಿಶೇಷ. 7 ವಿದೇಶಿ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ತಿಳಿಸಿದ್ದಾರೆ. ಇನ್ನು 9 ಆಟಗಾರರು 1.5 ಕೋಟಿಗೆ ತಮ್ಮ ಬೆಲೆಯನ್ನು ನಿಗದಿ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಕ್ರಿಸ್‌ ಲಿನ್‌, ಮಿಚೆಲ್‌ ಮಾರ್ಷ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಮತ್ತು ಶ್ರೀಲಂಕಾದ ಏಂಜಲೊ ಮ್ಯಾಥ್ಯೂಸ್‌ 2 ಕೋಟಿ ಲಿಸ್ಟ್‌ನಲ್ಲಿರುವ ಆಟಗಾರರು.

ಇನ್ನು 1.5 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌ ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಟ್‌ ಈ ಪಟ್ಟಿಯತಲ್ಲಿ ಇರುವ ಸ್ಟಾರ್‌ ಆಟಗಾರರಾಗಿದ್ದಾರೆ.

Happy Birthday Yuvraj Singh: 38ನೇ ವಸಂತಕ್ಕೆ ಕಾಲಿಟ್ಟ ಯುವರಾಜ; ಸಿಕ್ಸರ್ ಕಿಂಗ್​ನ ಅಪರೂಪದ ಚಿತ್ರಪಟಗಳು ಇಲ್ಲಿದೆ!ಒಟ್ಟಾರೆ 971 ಆಟಗಾರರ ಪೈಕಿ 332 ಆಟಗಾರರು ಈ ಬಾರಿಯ ಹರಾಜಿಗೆ ಲಭ್ಯರಿದ್ದಾರೆ. 16 ಆಟಗಾರರು ಈಗಾಗಲೇ ಕೋಟಿ ಲೆಕ್ಕದಲ್ಲಿ ಮೂಲ ಬೆಲೆ ಪ್ರಕಟಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 73 ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ. ಹೀಗಾಗಿ ಇದರಲ್ಲಿ ಯಾರು ಉಳಿಯಲಿದ್ದಾರೆ, ಯಾರಿಗೆ ಫ್ರಾಂಚೈಸಿ ಮಣೆ ಹಾಕಲಿದ್ದಾರೆ ಎಂಬುದು ಡಿ. 19 ರಂದು ತಿಳಿದು ಬರಲಿದೆ.

Published by: Vinay Bhat
First published: December 12, 2019, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading