9 ವರ್ಷದ RR ಪ್ರಯಾಣ ಅಂತ್ಯ; ಡೆಲ್ಲಿ ಕ್ಯಾಪಿಟಲ್ಸ್​ ಸೇರಿದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್​!

2011ರಲ್ಲಿ 4 ಕೋಟಿ ಕೊಟ್ಟು ರಹಾನೆಯನ್ನು ರಾಜಸ್ಥಾನ್ ಖರೀದಿ ಮಾಡಿತ್ತು. ಸದ್ಯ ಸತತ 9 ವರ್ಷದಿಂದ ರಾಯಲ್ಸ್​ ಪರ ಆಡಿದ್ದ ರಹಾನೆಯನ್ನು ಫ್ರಾಂಚೈಸಿ ಕೈಬಿಟ್ಟಿದೆ.

Vinay Bhat | news18-kannada
Updated:November 14, 2019, 2:26 PM IST
9 ವರ್ಷದ RR ಪ್ರಯಾಣ ಅಂತ್ಯ; ಡೆಲ್ಲಿ ಕ್ಯಾಪಿಟಲ್ಸ್​ ಸೇರಿದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್​!
ರಾಜಸ್ಥಾನ್ ರಾಯಲ್ಸ್
  • Share this:
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಹರಾಜು ಪ್ರಕ್ರಿಯೆ ಹತ್ತಿರ ಬರುತ್ತಿದೆ ಎಂಬುವಹೊತ್ತಿಗೆ ಎಲ್ಲಾ ಫ್ರಾಂಚೈಸಿಗಳಲ್ಲಿ ಮಹತ್ತರ ಬೆಳವಣಿಗೆಯಾಗುತ್ತಿದೆ. ಈಗಾಗಲೇ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್​ ಮುಂಬೈ ಇಂಡಿಯನ್ಸ್​ ಪಾಲಾಗಿದ್ದಾರೆ.

ಇಂಥಹ ಅಚ್ಚರಿಯ ಸಂಗತಿ ನಡೆಯುತ್ತಿರುವಾಗಲೇ ಟೀಂ ಇಂಡಿಯಾ ಸ್ಟಾರ್ ಆಟಗಾರ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಿಕೊಂಡಿದ್ದಾರೆ. ಭಾರತ ಟೆಸ್ಟ್​ ಕ್ರಿಕೆಟ್​ನ ಉಪ ನಾಯಕ ಅಜಿಂಕ್ಯ ರಹಾನೆ ರಾಜಸ್ಥಾನ್ ರಾಯಲ್ಸ್ ತಂಡ ಬಿಟ್ಟು ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಡೆಲ್ಲಿ ಪರ ಬ್ಯಾಟ್ ಬೀಸಲಿದ್ದಾರೆ.

IPL 2020: Ajinkya Rahane to leave Rajasthan Royals after 9 seasons joins Delhi Capitals
ಅಜಿಂಕ್ಯ ರಹಾನೆ


ಕಿಂಗ್ಸ್​​ ಪಾಲಾದ ಸ್ಟಾರ್ ಆಲ್ರೌಂಡರ್; ಪಂಜಾಬ್ ತಂಡದಲ್ಲಿದ್ದಾರೆ 6 ಜನ ಕನ್ನಡಿಗರು; ಯಾರೆಲ್ಲ ಗೊತ್ತಾ?

2011ರಲ್ಲಿ 4 ಕೋಟಿ ಕೊಟ್ಟು ರಹಾನೆಯನ್ನು ರಾಜಸ್ಥಾನ್ ಖರೀದಿ ಮಾಡಿತ್ತು. ಸದ್ಯ ಸತತ 9 ವರ್ಷದಿಂದ ರಾಯಲ್ಸ್​ ಪರ ಆಡಿದ್ದ ರಹಾನೆಯನ್ನು ಫ್ರಾಂಚೈಸಿ ಕೈಬಿಟ್ಟಿದೆ. ಈ ಮೂಲಕ ಡೆಲ್ಲಿ ಪರ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಶಿಖರ್ ಧವನ್, ಪೃಥ್ವಿ ಶಾ, ನಾಯಕ ಶ್ರೇಯಸ್ ಐಯರ್, ರಿಷಭ್ ಪಂತ್, ಹನುಮಾ ವಿಹಾರಿ ಸೇರಿ ಈಗ ಡೆಲ್ಲಿ ತಂಡ ಮತ್ತಷ್ಟು ಬಲಿಷ್ಠವಾಗಿದೆ.

ರಹಾನೆ ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಆರ್​ ಪರ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಆರಂಭದಲ್ಲಿ ರಹಾನೆ ನಾಯಕತ್ವದಲ್ಲಿ ಆರ್​ಆರ್​​ ಅನೇಕ ಪಂದ್ಯಗಳಲ್ಲಿ ಸೋಲುಂಡಿತ್ತು. ಬಳಿಕ ರಹಾನೆಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಸ್ಟೀವ್ ಸ್ಮಿತ್​ಗೆ ಕ್ಯಾಪ್ಟನ್ ಪಟ್ಟ ನೀಡಿತ್ತು. ರಹಾನೆ ಈವರೆಗೆ ಒಟ್ಟು 122 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 3,820 ರನ್ ಕಲೆಹಾಕಿದ್ದಾರೆ.

ಇನ್ನು ದೇಶೀಯ ಕ್ರಿಕೆಟ್​ನಲ್ಲಿ ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸ್ಟಾರ್ ಆಲ್ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಕಿಂಗ್ಸ್​​ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿದ್ದಾರೆ.India vs Bangladesh, Live: ಟೀಂ ಇಂಡಿಯಾ ಬೌಲರ್​ಗಳ ಮಾರಕ ದಾಳಿ; ಬಾಂಗ್ಲಾ 3 ವಿಕೆಟ್ ಪತನ

ಮುಂಬೈ ಇಂಡಿಯನ್ಸ್​ ತಂಡ ಎವಿನ್ ಲೆವಿಸ್​ರನ್ನು ಕೈಬಿಟ್ಟಿದೆ. ಪ್ರಮುಖ ವೇಗಿ ಧವಳ್ ಕುಲ್ಕರ್ಣಿ ಅವರು ರೋಹಿತ್ ತಂಡದ ಪಾಲಾಗಿದ್ದಾರೆ. ನವೆಂಬರ್ 15 ರಂದು ಆರ್​ಸಿಬಿ ತಂಡ ತನ್ನಲ್ಲೆ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ.

First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading