ಕ್ರೀಡೆ

  • associate partner

IPL 2020: ಐಪಿಎಲ್​ನಿಂದ ನಿತೀಶ್ ರಾಣ ಬ್ಯಾನ್ ಆದ್ರೆ ಕೆಕೆಆರ್ ತಂಡಕ್ಕೆ ಬದಲಿ ಆಟಗಾರ ಯಾರು ಗೊತ್ತಾ?

ನಿತೀಶ್ ರಾಣಾ ಈ ಹಿಂದೆ 2015ರಲ್ಲಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದರು. ಆಗ ಮಂಡಳಿಯಿಂದ ಶಿಕ್ಷೆಗೆ ಗುರಿಯಾದ 22 ಕ್ರಿಕೆಟಿಗರ ಪೈಕಿ ರಾಣಾ ಕೂಡ ಒಬ್ಬರಾಗಿದ್ದರು.

Vinay Bhat | news18-kannada
Updated:January 6, 2020, 7:52 AM IST
IPL 2020: ಐಪಿಎಲ್​ನಿಂದ ನಿತೀಶ್ ರಾಣ ಬ್ಯಾನ್ ಆದ್ರೆ ಕೆಕೆಆರ್ ತಂಡಕ್ಕೆ ಬದಲಿ ಆಟಗಾರ ಯಾರು ಗೊತ್ತಾ?
ನಿತೀಶ್ ರಾಣಾ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ಪರ ಆಡುತ್ತಿದ್ದು, ತಮ್ಮ ಆಲ್​ರೌಂಡರ್ ಆಟದ ಮೂಲಕ ಈ ಹಿಂದೆ ಕೂಡ ಕೆಕೆಆರ್​ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ಗಮನ ಸೆಳೆದಿದ್ದರು.
  • Share this:
ಬೆಂಗಳೂರು (ಜ. 06): ನಿಜವಾದ ವಯಸ್ಸನ್ನು ಮುಚ್ಚಿಟ್ಟು, ನಕಲಿ ದಾಖಲೆ ಪತ್ರದೊಂದಿಗೆ ಅದಕ್ಕಿಂತ ಕಡಿಮೆ ವಯೋಮಿತಿಯ ಕ್ರಿಕೆಟ್​ನಲ್ಲಿ ಆಡುವ ಆಟಗಾರರ ವಿರುದ್ಧ ಬಿಸಿಸಿಐ ಈಗಾಗಲೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಕಳೆದ ಅಂಡರ್ -19 ವಿಶ್ವಕಪ್ ಫೈನಲ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಮಂಜೋತ್ ಕಾಲ್ರ ವಯಸ್ಸಿನ ವಂಚನೆ ಪ್ರಕರಣದಿಂದ ಇತ್ತೀಚೆಗಷ್ಟೆ ಒಂದು ವರ್ಷ ಅಮಾನತುಗೊಂಡಿದ್ದರು.

ದೆಹಲಿ ಪರ ರಣಜಿ ಟ್ರೋಫಿ ಆಡುತ್ತಿದ್ದ ಮಂಜೋತ್ ಏಜ್ ಫ್ರಾಡ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಕ್ರಿಕೆಟ್ ಸಂಸ್ಥೆ ಇವರನ್ನು ಅಮಾನತು ಮಾಡಿತ್ತು. ಸದ್ಯ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಸ್ಟಾರ್ ಆಟಗಾರರಾಗಿರುವ ನಿತೀಶ್ ರಾಣ ವಯೋಮಿತಿ ಮೋಸ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಬಿಗ್​ಬ್ಯಾಷ್​ನಲ್ಲಿ ಹೊಸ ಆರ್​​ಸಿಬಿ ಆಟಗಾರನ ಸಿಡಿಲಬ್ಬರದ ಬ್ಯಾಟಿಂಗ್; ಸ್ಫೋಟಕ ಆಟ ಹೇಗಿತ್ತು ಗೊತ್ತಾ?

ನಿತೀಶ್ ರಾಣ ನೀಡಿರುವುದು ಸುಳ್ಳು ಪ್ರಮಾಣ ಪತ್ರ ಎಂದಾದರೆ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಕೆಕೆಆರ್ ಫ್ರಾಂಚೈಸಿಗೆ ಅಲಭ್ಯರಾಗಲಿದ್ದಾರೆ. ಹಾಗಾದ್ರೆ ಇವರ ಬದಲು ಯಾವ ಆಟಗಾರ ಕೆಕೆಆರ್ ತಂಡ ಸೇರಬಹುದು ಎಂಬುವುದನ್ನು ನೋಡುವುದಾದರೆ..

ಯೂಸುಫ್ ಪಠಾಣ್: ಆಲ್ರೌಂಡರ್ ಯೂಸುಫ್ ಈ ಬಾರಿಯ ಹರಾಜಿನಲ್ಲಿ ಸೇಲ್ ಆಗದೆ ಉಳಿದಿದ್ದಾರೆ. ಅನುಭವದ ಆಧಾರದ ಮೇಲೆ ಪಠಾಣ್ ಅವರನ್ನು ರಾಣ ಬದಲು ಸೇರಿಸಿಕೊಳ್ಳಬಹುದು.

ಹನುಮಾ ವಿಹಾರಿ: ಕೆಕೆಆರ್ ತಂಡ ಹೆಚ್ಚು ಬಿರುಸಿನಿಂದ ಬ್ಯಾಟ್ ಬೀಸುವ ಆಟಗಾರರನ್ನೇ ಹೊಂದಿದೆ. ಎಲ್ಲಾದರು ತಂಡ ದಿಢೀರ್ ಕುಸಿತ ಕಂಡರೆ ನಿತ್ತು ಆಡುವ ಬ್ಯಾಟ್ಸ್​ಮನ್​ನ ಅವಶ್ಯಕತೆಯಿದೆ. ಹೀಗಾಗಿ ಈ ಜಾಗಕ್ಕೆ ಹನುಮಾ ವಿಹಾರಿ ಸೂಕ್ತ.

Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!ಶಾರುಖ್ ಖಾನ್: ದೇಶೀಯ ಟೂರ್ನಿಯಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಶಾರುಖ್ ಅದ್ಯಾಕೊ ಈ ಬಾರಿಯ ಹರಾಜಿನಲ್ಲಿ ಸೇಲ್ ಆಗದೆ ಉಳಿದರು. ಆದರೆ, ಇವರಿಗೆ ಉತ್ತಮ ಬ್ಯಾಟಿಂಗ್ ಕೌಶಲ್ಯವಿದೆ. ಹೀಗಾಗಿ ರಾಣ ನಿಷೇಧಕ್ಕೆ ಒಳಪಟ್ಟರೆ ಇವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಬಹುದು.

ನಿತೀಶ್ ರಾಣಾ ಈ ಹಿಂದೆ 2015ರಲ್ಲಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದರು. ಆಗ ಮಂಡಳಿಯಿಂದ ಶಿಕ್ಷೆಗೆ ಗುರಿಯಾದ 22 ಕ್ರಿಕೆಟಿಗರ ಪೈಕಿ ರಾಣಾ ಕೂಡ ಒಬ್ಬರಾಗಿದ್ದರು.

Published by: Vinay Bhat
First published: January 6, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading