IPL 2019: ಆರ್​ಸಿಬಿ ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿ ನೀಡಿದ ಕಾರಣ ಏನು ಗೊತ್ತಾ?

ಈವರೆಗೆ ಒಂದು ಬಾರಿಯು ಪ್ರಶಸ್ತಿಗೆ ಮುತ್ತಿಕ್ಕದ ಆರ್​​ಸಿಬಿ ಈಬಾರಿ ಹೇಗಾದರು ಮಾಡಿ ಟ್ರೋಫಿ ಎತ್ತಿಡಿಯಬೇಕು ಎಂದು ನಿರ್ಧರಿಸಿದೆ. ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ ನಮ್ಮ ತಂಡ ಇಷ್ಟರವರೆಗೆ ಕಪ್ ಗೆಲ್ಲದಿರಲು ಏನು ಕಾರಣ ಎಂಬುದನ್ನು ಹೇಳಿದ್ದಾರೆ.

Vinay Bhat | news18
Updated:March 17, 2019, 11:53 AM IST
IPL 2019: ಆರ್​ಸಿಬಿ ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿ ನೀಡಿದ ಕಾರಣ ಏನು ಗೊತ್ತಾ?
ಕಳೆದ ಮೂರು ಸೀಸನ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಆರ್ಸಿಬಿ, ಈ ಬಾರಿ ಕಮ್ಬ್ಯಾಕ್ ಮಾಡಲೇ ಬೇಕಾದ ಒತ್ತಡದಲ್ಲಿದೆ.
  • News18
  • Last Updated: March 17, 2019, 11:53 AM IST
  • Share this:
ಇಂಡಿಯನ್ ಪ್ರೀಮಿಯಲ್ ಲೀಗ್​​​ 12ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ತಂಡವನ್ನು ಎದುರಿಸಲಿದೆ.

ಈವರೆಗೆ ಒಂದು ಬಾರಿಯು ಪ್ರಶಸ್ತಿಗೆ ಮುತ್ತಿಕ್ಕದ ಆರ್​​ಸಿಬಿ ಈಬಾರಿ ಹೇಗಾದರು ಮಾಡಿ ಟ್ರೋಫಿ ಎತ್ತಿಡಿಯಬೇಕು ಎಂದು ನಿರ್ಧರಿಸಿದೆ. ಈ ಮಧ್ಯೆ ನಾಯಕ ವಿರಾಟ್ ಕೊಹ್ಲಿ ನಮ್ಮ ತಂಡ ಇಷ್ಟರವರೆಗೆ ಕಪ್ ಗೆಲ್ಲದಿರಲು ಏನು ಕಾರಣ ಎಂಬುದನ್ನು ಹೇಳಿದ್ದಾರೆ.

'ಯಾವುದೇ ವಿಷಯದಲ್ಲಿ ತಪ್ಪು ನಿರ್ಧಾರ ಕೈಗೊಂಡರೆ ಅದು ಸೋಲಿಗೆ ನಮ್ಮನ್ನು ದೂಡುತ್ತದೆ. ಅಂತೆಯೆ ಐಪಿಎಲ್​​ನಲ್ಲಿ ನಾವು ಕೆಲವು ತಪ್ಪು ನಿರ್ಣಯಗಳಿಂದ ವೈಫಲ್ಯ ಅನಭವಿಸಿದ್ದೇವೆ. ನಿರ್ಧಾರಗಳು ಸರಿಯಾಗಿದ್ದಲ್ಲಿ ಅವುಗಳಿಗೆ ಜಯ ಸಿಗುತ್ತದೆ. ಪ್ರಮುಖ ಪಂದ್ಯಗಳಲ್ಲಿ ಕೆಲವು ನಿರ್ಧಾರಗಳು ಮಹತ್ವದ ಪಾತ್ರ ವಹಿಸುತ್ತದೆ' ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಈ ಸ್ಟಾರ್ ಆಟಗಾರ..!

'ಈಗಾಗಲೇ ಐಪಿಎಲ್​ನಲ್ಲಿ ನಾವು ಮೂರು ಬಾರಿ ಫೈನಲ್​​​​ಗೇರಿದ್ದರು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಎರಡು ಬಾರಿ ಸೆಮಿ ಫೈನಲ್ ಹಂತಕ್ಕೂ ತಲುಪಿದ್ದೆವು. ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿಲ್ಲ. ನಾವು ಅಪಾರ ಅಭಿಮಾನಿಗಳನ್ನು ಹೊಂದಿದ್ದೇವೆ. ಈಬಾರಿ ಯಶಸ್ಸು ಸಾಧಿಸುತ್ತೇವೆ' ಎಂದು ಹೇಳಿದ್ದಾರೆ.

First published: March 17, 2019, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading