zahirzahir
|
news18 Updated:March 25, 2019, 5:47 PM IST
ಪೊಲಾರ್ಡ್
- News18
- Last Updated:
March 25, 2019, 5:47 PM IST
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೆರಿಬಿಯನ್ ಆಟಗಾರರ ಅಬ್ಬರ ಶುರುವಾಗಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ಮೂಲಕ ಕೆಕೆಆರ್ ತಂಡದ ಆ್ಯಂಡ್ರೆ ರಸೆಲ್ ಮಿಂಚಿದರೆ, ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕೀರನ್ ಪೊಲಾರ್ಡ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಅದ್ಭುತ ಫೀಲ್ಡಿಂಗ್ ಮೂಲಕ ಮಿಂಚಿನ ಸಂಚಲನ ಸೃಷ್ಟಿಸಿದರು.
ಭಾನುವಾರ ನಡೆದ ಐಪಿಎಲ್ನ ಮೂರನೇ ಮ್ಯಾಚ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಹೊಡೆತವನ್ನು ಡೈವ್ ಮಾಡಿ ಹಿಡಿಯುವ ಮೂಲಕ ಪೊಲಾರ್ಡ್ ಜಾದು ಪ್ರದರ್ಶಿಸಿದರು. ಆರಂಭಿಕ ಆಟಗಾರನಾಗಿರುವ ಶ್ರೇಯಸ್ ವಿಕೆಟ್ ಅಮೂಲ್ಯವಾಗಿತ್ತು. ಮಿಚೆಲ್ ಮೆಕ್ಲೆನಘನ್ ಅವರ 4ನೇ ಓವರ್ನಲ್ಲಿ ಸೂಪರ್ ಕ್ಯಾಚ್ ಮೂಲಕ ವಿಕೆಟ್ ಉರುಳಿಸುವಲ್ಲಿ ಪೊಲಾರ್ಡ್ ಸಫಲರಾದರು. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮುಂಬೈ ಇಂಡಿಯನ್ಸ್ ತಂಡ ಫೀಲ್ಡಿಂಗ್ನಲ್ಲಿ ಬಲಿಷ್ಠವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ನಡೆದ 2ನೇ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಸಹ ಮಿಂಚಿನ ಕ್ಯಾಚ್ನ ಮೂಲಕ ಮಿಂಚಿದ್ದರು. ಅಮೋಘ 85 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸನ್ರೈಸರ್ಸ್ ತಂಡದ ಆಟಗಾರ ಡೇವಿಡ್ ವಾರ್ನರ್ ಬಾರಿಸಿದ ಚೆಂಡನ್ನು ಕೆಕೆಆರ್ ತಂಡದ ರಾಬಿನ್ ಉತ್ತಪ್ಪ ಡೈವ್ ಹೊಡೆದು ತಮ್ಮ ಕೈಯಲ್ಲಿ ಬಂದಿಸಿದ್ದರು. ಈ ಕ್ಯಾಚ್ ಕೂಡ ವೈರಲ್ ಆಗಿತ್ತು.
ಕ್ಯಾಚ್ ಹಿಡಿದರೆ ಮ್ಯಾಚ್ ಎಂಬುದು ಕ್ರಿಕೆಟ್ ಅಂಗಳದ ಪ್ರಸಿದ್ಧ ನಾಣ್ಣುಡಿ. ಅದರಂತೆ ಈ ಬಾರಿಯ ಐಪಿಎಲ್ ಆರಂಭದಲ್ಲೇ ಅದ್ಭುತ ಕ್ಯಾಚ್ಗಳಿಗೆ ಸಾಕ್ಷಿಯಾಗುತ್ತಿದೆ. ಹೀಗಾಗಿ ಪ್ರಸಕ್ತ ಸಾಲಿನ ಅತ್ಯುತ್ತಮ ಕ್ಯಾಚ್ ಪ್ರಶಸ್ತಿಗೆ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು.
First published:
March 25, 2019, 5:43 PM IST