zahirzahir
|
news18 Updated:March 29, 2019, 4:42 PM IST
@CricTracker.com
- News18
- Last Updated:
March 29, 2019, 4:42 PM IST
ಐಪಿಎಲ್ನ 7ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್ಗಳಿಂದ ವೀರೋಚಿತ ಸೋಲೊಪ್ಪಿಕೊಂಡಿದೆ. ಕೊನೆಯ ಓವರ್ಗಳಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಮೋಘ ಆಟ ರೋಹಿತ್ ಪಡೆಯ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂದರೆ ತಪ್ಪಾಗಲಾರದು.
ವಿರಾಟ್ ಕೊಹ್ಲಿಯ ರೆಡ್ ಬಾಯ್ಸ್ ಮುಂಬೈ ತಂಡವನ್ನು 165 ರನ್ಗಳೊಳಗೆ ಕಟ್ಟಿ ಹಾಕುವ ಎಲ್ಲ ಲಕ್ಷಣಗಳು ಕಂಡು ಬಂದಿದ್ದವು. ಆದರೆ ಕೊನೆಯ ಮೂರು ಓವರ್ನಲ್ಲಿ ಅಬ್ಬರಿಸಿದ್ದ ಪಾಂಡ್ಯ ಪ್ರೇಕ್ಷಕರಿಗೆ ಅಸಲಿ ಟಿ20 ಆಟದ ರಸದೌತಣ ಒದಿಸಿದ್ದರು. ಕೇವಲ 14 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ 2 ಆಕರ್ಷಕ ಬೌಂಡರಿಗಳೊಂದಿಗೆ 32 ರನ್ಗಳನ್ನು ಚಚ್ಚಿದ್ದರು.
ಬೆಂಗಳೂರು ಬೌಲರ್ಗಳ ವಿರುದ್ಧ ಪಾಂಡ್ಯ ತೋರಿದ ಪರಾಕ್ರಮದಲ್ಲಿ ಸಿಕ್ಸರ್ವೊಂದು ಸ್ಟೇಡಿಯಂ ಹೊರಗೆ ದಾಟಿತ್ತು. ಕೊನೆಯ ಓವರ್ನಲ್ಲಿ ಮನಮಹೋಕ ಸಿಕ್ಸರ್ ಸಿಡಿಸಿದಲ್ಲದೇ ತನ್ನ ಭುಜಬಲದ ಪರಾಕ್ರಮವನ್ನು ಪಾಂಡ್ಯ ಮೈದಾನದಲ್ಲೇ ಪ್ರದರ್ಶಿಸಿದರು. ಈ ಮೂಲಕ ಮತ್ತೊಮ್ಮೆ ತಾನು ಫಾರ್ಮ್ಗೆ ಮರಳಿರುವುದಾಗಿ ಇತರೆ ತಂಡಗಳ ಬೌಲರ್ಗಳಿಗೆ ಎಚ್ಚರಿಕೆ ನೀಡಿದರು. ಈ ಜಬರ್ದಸ್ತ್ ಹೊಡೆತದ ವಿಡಿಯೋ ಈಗ ಭಾರೀ ವೈರಲ್ ಆಗಿದ್ದು, ಪಾಂಡ್ಯ ಪವರ್ಗೆ ಅಭಿಮಾನಿಗಳು ತಲೆದೂಗಿದ್ದಾರೆ.
First published:
March 29, 2019, 3:25 PM IST