HOME » NEWS » Sports » CRICKET IPL 2019 VIDEO DESPITE DEFEAT DHONI OBLIGES ELDERLY FAN WITH SELFIE

IPL 2019-VIDEO: ಕೂಲ್ ಕ್ಯಾಪ್ಟನ್ ಧೋನಿಗೆ ಈ ವಯಸ್ಸಿನ ಅಭಿಮಾನಿಗಳು ಕೂಡ ಇದ್ದಾರೆ..!

ಧೋನಿಯ ಜನಪ್ರಿಯತೆಗೆ ವಯಸ್ಸಿಗೂ ಮಿತಿಯಿಲ್ಲ ಎಂಬುದಕ್ಕೆ ನೈಜ ಉದಾಹಣೆಯಾಗಿ ಇದೀಗ ಹೊಸ ವಿಡಿಯೋವೊಂದು ಹೊರಬಿದ್ದಿದೆ.

zahir | news18
Updated:April 4, 2019, 5:43 PM IST
IPL 2019-VIDEO: ಕೂಲ್ ಕ್ಯಾಪ್ಟನ್ ಧೋನಿಗೆ ಈ ವಯಸ್ಸಿನ ಅಭಿಮಾನಿಗಳು ಕೂಡ ಇದ್ದಾರೆ..!
ಮಹೇಂದ್ರ ಸಿಂಗ್ ಧೋನಿ (ನಾಯಕ) -15 ಕೋಟಿ ರೂ.
  • News18
  • Last Updated: April 4, 2019, 5:43 PM IST
  • Share this:
ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿಗೆ ಇರುವಂತಹ ಅಭಿಮಾನಿ ಬಳಗ ಇತರೆ ಯಾವ ಕ್ರಿಕೆಟಿಗನಿಗೂ ಇಲ್ಲ ಎಂದರೆ ತಪ್ಪಾಗಲಾರದು. ಇದಕ್ಕೆ  ನಿರ್ದಶನ ಎಂಬಂತೆ ಹಲವು ಬಾರಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಧೋನಿಯ ಕಾಲಿಗೆರಗಿರುವುದೇ ಸಾಕ್ಷಿ.

ಧೋನಿಯ ಜನಪ್ರಿಯತೆಗೆ ವಯಸ್ಸಿಗೂ ಮಿತಿಯಿಲ್ಲ ಎಂಬುದಕ್ಕೆ ನೈಜ ಉದಾಹಣೆಯಾಗಿ ಇದೀಗ ಹೊಸ ವಿಡಿಯೋವೊಂದು ಹೊರಬಿದ್ದಿದೆ. ಅದು ಕೂಡ ಹಿರಿಯ ಮಹಿಳೆಯೊಬ್ಬರು ಎಂಬುದು ವಿಶೇಷ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬುಧವಾರ ನಡೆದ ಚೆನ್ನೈ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಧೋನಿ ಪಡೆ ಸೋಲನುಭವಿಸಿತು.

ಆದರೆ ಧೋನಿಗಾಗಿಯೇ ಈ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಪಂದ್ಯದ ಬಳಿಕ ಕೂಲ್ ಕ್ಯಾಪ್ಟನ್​ನನ್ನು ಭೇಟಿಯಾಗುವ ಇರಾದೆ ವ್ಯಕ್ತಪಡಿಸಿದ್ದರು. ಅದರಂತೆ ಹಿರಿಯಜ್ಜಿಯನ್ನು ಭೇಟಿಯಾದ ಎಂಎಸ್​ಡಿ ಸೆಲ್ಫಿ ಕ್ಲಿಕ್ಕಿಸಿದರು. ಹಾಗೆಯೇ ಕೆಲ ಹೊತ್ತು ಚಿಟ್​ ಚಾಟ್ ನಡೆಸಿ, ಚೆನ್ನೈ ತಂಡದ ಜೆರ್ಸಿಗೆ ಹಸ್ತಾಕ್ಷರ ಹಾಕಿ ಅವರಿಗೆ ಗಿಫ್ಟ್ ಮಾಡಿದರು.
ಹೃದಯ ವೈಶಾಲ್ಯತೆ ಮೆರೆದ ಧೋನಿಯ ಈ ವಿಡಿಯೋ ಈಗ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಲ್ಲದೆ ಈ ಹಿರಿ ವಯಸ್ಸಿನಲ್ಲೂ ಧೋನಿಯ ಫ್ಯಾನ್​ ಎಂದುಕೊಂಡು ಪಂದ್ಯ ನೋಡಲು ಆಗಮಿಸಿದ ಹಿರಿಯಜ್ಜಿಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಒಟ್ಟಾರೆ ತಾನೇಕೆ ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ ಈ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: IPL 2019-VIDEO: ಸೂಪರ್​​ ಮ್ಯಾನ್ ಕ್ಯಾಚ್: ಪೊಲಾರ್ಡ್​ ಪರಾಕ್ರಮದ ವಿಡಿಯೋ ಫುಲ್ ವೈರಲ್



 
First published: April 4, 2019, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories