ಬೆಂಗಳೂರು (ಮೇ. 02): ಐಪಿಎಲ್ನಲ್ಲಿ ನಿನ್ನೆ ನಡೆದ ಡೆಲ್ಲಿ ಕ್ಯಾಪಿಲಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 80 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ತಂಡದ ಗೆಲುವಿನಲ್ಲಿ ಸ್ಪಿನ್ನರ್ಗಳ ಸಹಾಯ ಒಂದು ಕಡೆಯಾದರೆ, ಬ್ಯಾಟಿಂಗ್, ಸ್ಟಂಪಿಂಗ್ನಲ್ಲಿ ಮಿಂಚಿದ ತಂಡದ ನಾಯಕ ಧೋನಿ ಪಾತ್ರ ಮಹತ್ವದ್ದು.
ಧೋನಿ ನಾಯಕತ್ವದಲ್ಲಿ ಮಾತ್ರವಲ್ಲದೆ ಕೀಪಿಂಗ್ನಲ್ಲೂ ಎತ್ತಿದ ಕೈ ಎಂಬುದು ಹಿಂದೆಯಿಂದಲೂ ಅನೇಕ ಬಾರಿ ಸಾಭೀತಾಗಿದೆ. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ವಿಕೆಟ್ ಉರುಳಿಸುವ ಧೋನಿ ಚಾಕಚಕ್ಯತೆ ಎದುರಾಳಿ ಬ್ಯಾಟ್ಸ್ಮನ್ಗಳಲ್ಲಿ ನಡುಕ ಹುಟ್ಟಿಸುವುದಂತೂ ಸತ್ಯ.
ನಿನ್ನೆ ಕೂಡ ಧೋನಿಯ ಮಿಂಚಿನ ಸ್ಟಂಪಿಂಗ್ಗೆ ಡೆಲ್ಲಿಯ ಎರಡು ಪ್ರಮುಖ ವಿಕೆಟ್ಗಳು ಉರುಳಿದವು. ಇದುವೇ ಚೆನ್ನೈ ತಂಡ ಗೆಲುವಿನ ಟ್ರ್ಯಾಕ್ಗೆ ಮರಳಲು ಕಾರಣವಾಯಿತು. ಡೆಲ್ಲಿ ತಂಡದ ನಾಯಕ ಶ್ರೇಯಸ್ ಐಯರ್ ಮತ್ತು ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಮೊರೀಸ್ರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಧೋನಿ ಎದುರಾಳಿಗೆ ಶಾಕ್ ನೀಡಿದ್ದಾರೆ.
ವಿಕೆಟ್ ಕಳೆದುಕೊಂಡು ಸಂಕಷ್ಟದಲಿದ್ದ ಡೆಲ್ಲಿ ತಂಡಕ್ಕೆ ಶ್ರೇಯಸ್ ಐಯರ್ ಆಸರೆಯಾಗಿದ್ದರು. 12ನೇ ಓವರ್ನಲ್ಲಿ ಜಡೇಜಾಗೆ ಬೌಲಿಂಗ್ ನೀಡಿದ ಧೋನಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಮೂರನೇ ಎಸೆತಕ್ಕೆ ಮೊರೀಸ್ರನ್ನು ಧೋನಿ ಸ್ಟಂಪ್ ಜೌಟ್ ಮಾಡಿದರೆ, ಐದನೇ ಎಸೆತದಲ್ಲಿ ಮತ್ತೊಂದು ಸ್ಟಂಪ್ ಔಟ್ ಮಾಡಿ ಶ್ರೇಯಸ್ ಅಯ್ಯರ್ರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: Master Hirannaiah Passes Away: ಮಾಸ್ಟರ್ ಹಿರಣ್ಣಯ್ಯ ನಿಧನ: ಮುಖ್ಯಮಂತ್ರಿ ಚಂದ್ರು ಸಂತಾಪ
ಮಿಂಚಿನ ವೇಗದಲ್ಲಿ ಡೆಲ್ಲಿ ವಿಕೆಟ್ ಉರುಳಿಸಿದ ಧೋನಿ ಕೈಚಳಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಧೋನಿ ಮೋಡಿಗೆ ಕಮೆಂಟ್ಗಳ ಸುರಿಮಳೆ ಸುರಿಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ