LIVE NOW

IPL 2019 Live Score, SRH vs CSK: ಬೇರ್​ಸ್ಟೊ-ವಾರ್ನರ್ ಭರ್ಜರಿ ಅರ್ಧಶತಕ: ಚೆನ್ನೈ ವಿರುದ್ದ ಹೈದರಾಬಾದ್​ಗೆ ಸುಲಭ ಜಯ

Kannada.news18.com | April 17, 2019, 11:23 PM IST
facebook Twitter google Linkedin
Last Updated 5 days ago
auto-refresh

Highlights

ಹೈದರಾಬಾದ್​ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್​ನ 33ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯಾಗುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಎದುರುಗೊಳ್ಳುತ್ತಿದ್ದು, ಹೀಗಾಗಿ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.

ಈ ಆವೃತ್ತಿಯನ್ನು ಉತ್ತಮವಾಗಿಯೇ ಆರಂಭಿಸಿದ್ದ ಹೈದರಾಬಾದ್ ಇದೀಗ ಸತತ 3 ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ವಿರುದ್ಧದ ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿದೆ ಕೇನ್​ ವಿಲಿಯಮ್ಸನ್ ಪಡೆ.

ಇನ್ನು ಹಾಲಿ ಚಾಂಪಿಯನ್ ಸೂಪರ್ ಕಿಂಗ್ಸ್​ ಜಯದ ನಾಗಾಲೋಟವನ್ನು ಮುಂದುವರೆಸಿದ್ದು, ಈ ಪಂದ್ಯದಲ್ಲೂ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ. ತವರಿನಲ್ಲಿ ನಡೆದ ಕಳೆದೆರಡು ಪಂದ್ಯಗಳಲ್ಲಿ ಹೀನಾಯ ಸೋಲುಂಡಿದ್ದ ಹೈದರಾಬಾದ್​ಗೆ ಮತ್ತೊಮ್ಮೆ ಇದೇ ಅಂಗಳದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದ್ದು, ಮಹೀ ಪಡೆಯನ್ನು ಮಣಿಸಲು ಸಾಕಷ್ಟು ಬೆವರಿಳಿಸಬೇಕಾಗಬಹುದು.
Load More