IPL 2019: ಇಶಾಂತ್ vs ವಾಟ್ಸನ್, ರಬಡ vs ವಾಟ್ಸನ್; ಪಂದ್ಯದ ಮಧ್ಯ ಮಾತಿನ ಚಕಮಕಿ

IPL 2019: ಚೆನ್ನೈ ತಂಡದ ಮೊದಲ ವಿಕೆಟ್ ಅಂಬಟಿ ರಾಯುಡು ಔಟ್ ಆದ ಬೆನ್ನಲ್ಲೆ ವಾಟ್ಸನ್​ ಮೊದಲಿಗೆ ಇಶಾಂತ್ ಜೊತೆ ಮಾತಿಗಿಳಿದಿದ್ದಾರೆ. ನಂತರ, ರಬಾಡ ಜೊತೆಯಲ್ಲೂ ಮಾತಿನ ವಾಗ್ವಾದ ನಡೆಸಿದ್ದಾರೆ.

ಇಶಾಂತ್ ಮತ್ತು ವಾಟ್ಸನ್​ನ ಮಾತಿನ ಚಕಮಕಿ

ಇಶಾಂತ್ ಮತ್ತು ವಾಟ್ಸನ್​ನ ಮಾತಿನ ಚಕಮಕಿ

  • News18
  • Last Updated :
  • Share this:
ಡೆಲ್ಲಿ: ಕ್ರಿಕೆಟ್​ನಲ್ಲಿ​ ಗೆಲುವಿನ ಪರ ಹೋರಾಡುವ ಆಟಗಾರರ ಕೆಲ ನಡತೆಗಳು ವಿವಾದಕ್ಕೆ ಕಾರಣವಾಗುವುದು ಹೊಸತೇನಲ್ಲ. ಈ ಬಾರಿಯ ಐಪಿಎಲ್​ ಪಂದ್ಯದಲ್ಲೂ ಕೂಡ ಆಟಗಾರ ನಡತೆಗಳು ವಿವಾದ ಹುಟ್ಟಿಕೊಳ್ಳಲು ಕಾರಣವಾಗಿದೆ.

ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಚೆನೈ ಸೂಪರ್​ ಕಿಂಗ್ಸ್​ ತಂಡಗಳ ನಡುವಣ ಪಂದ್ಯದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಚೆನೈ ಸೂಪರ್​ ಕಿಂಗ್ಸ್​​​ ತಂಡದ ಅನುಭವಿ ಓಪನರ್​ ಆಟಗಾರ ಶೇನ್​ ವಾಟ್ಸನ್​ ಮತ್ತು ಡೆಲ್ಲಿ ತಂಡದ ಬೌಲರ್ ಇಶಾಂತ್ ಶರ್ಮಾ​​ ಹಾಗೂ ಕಗಿಸೋ ರಬಡ ಜತೆ ಮಾತಿನ ಚಕಮಕಿ ನಡೆಸಿದ್ದಾರೆ.

 



ಚೆನ್ನೈ ತಂಡದ ಮೊದಲ ವಿಕೆಟ್ ಅಂಬಟಿ ರಾಯುಡು ಔಟ್ ಆದ ಬೆನ್ನಲ್ಲೆ ವಾಟ್ಸನ್​ ಮೊದಲಿಗೆ ಇಶಾಂತ್ ಜೊತೆ ಮಾತಿಗಿಳಿದಿದ್ದಾರೆ. ನಂತರ, ರಬಡ ಜೊತೆಯಲ್ಲೂ ಮಾತಿನ ವಾಗ್ವಾದ ನಡೆಸಿದ್ದಾರೆ. ​ಈ ವೇಳೆ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಅಂಪೈರ್ ಮಧ್ಯ ಪ್ರವೇಶಿಸಿ ಬಿಗುವಿನ ವಾತಾವರಣವನ್ನು ಸಡಿಲ ಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ರಾಯಲ್ ಚಾಲೆಂಜರ್ಸ್​​; ಚಿನ್ನಸ್ವಾಮಿಯಲ್ಲಿ ಕಠಿಣ ಅಭ್ಯಾಸ

 



First published: