IPL 2019: ಮೈದಾನದ ಹೊರಗೂ ಹೊಸ ದಾಖಲೆ ಬರೆದ 12ನೇ ಐಪಿಎಲ್..!

ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ತಂಡದ ಆಟಗಾರರು ತಮಿಳಿನಲ್ಲಿ ಟ್ವೀಟ್​ ಮಾಡಿ ಗಮನ ಸೆಳೆದಿದ್ದರು. ಅದರಲ್ಲೂ ಹರ್ಭಜನ್ ಸಿಂಗ್ ಸಂಪೂರ್ಣ ತಮಿಳಿನಲ್ಲೇ ಟ್ವೀಟ್ ಮಾಡಿ ಸ್ಥಳೀಯ ಭಾಷೆಯನ್ನು ವಿಶ್ವದ ಮುಂದಿಟ್ಟಿದ್ದರು.

@readscoops.com

@readscoops.com

  • News18
  • Last Updated :
  • Share this:
ರೋಚಕ ಹೋರಾಟದ ಫೈನಲ್​ನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್​ನ 12ನೇ ಆವೃತ್ತಿ ಮುಕ್ತಾಯಗೊಂಡಿದೆ. ಕೇವಲ 1 ರನ್ನಿನ ಅಂತರದಿಂದ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದೆ. ಆರಂಭದಿಂದಲೇ ಹಲವು ದಾಖಲೆಗೆ ಕಾರಣವಾಗಿದ್ದ ಐಪಿಎಲ್​ 2019, ಕ್ರಿಕೆಟ್ ಹೊರತಾಗಿಯು ವಿಶಿಷ್ಟ ದಾಖಲೆಯೊಂದಕ್ಕೆ ಸಾಕ್ಷಿಯಾಗಿರುವುದು ಈ ಬಾರಿಯ ವಿಶೇಷ.

ಐಪಿಎಲ್​ನ ರೋಚಕ ಹೋರಾಟಕ್ಕೆ ಕಿಚ್ಚು ಹತ್ತಿಸುವಲ್ಲಿ ಈ ಬಾರಿ ಸಾಮಾಜಿಕ ಜಾಲತಾಣಗಳು ಮುಂಚೂಣಿಯಲ್ಲಿದ್ದವು.  ಟ್ರೋಲ್​ಗೆ ಪ್ರತಿ ಟ್ರೋಲ್​ ಎಂಬಂತೆ  ಹಲವು ಪೇಜ್​ಗಳು ಕೊನೆಯವರೆಗೂ ಅಭಿಮಾನಿಗಳನ್ನು ಮನರಂಜಿಸಿದ್ದವು. ಹಾಗೆಯೇ ಮೈದಾನದ ಹೋರಾಟದ ಬಗ್ಗೆ ವಾದ ಪ್ರತಿವಾದವನ್ನು ಅಭಿಮಾನಿಗಳು ತಮ್ಮ ತಂಡದ ಟ್ವಿಟರ್​ ಪೇಜ್​ಗಳಲ್ಲಿ ವ್ಯಕ್ತಪಡಿಸುತ್ತಿದ್ದರು. ಅದರಂತೆ ಈ ಬಾರಿ ಐಪಿಎಲ್​ನಲ್ಲಿ ಮೂಡಿ ಬಂದಿರುವ ಟ್ವೀಟ್​ಗಳು 2 ಕೋಟಿ 70 ಲಕ್ಷ. ಅಂದರೆ 2018ರ ಐಪಿಎಲ್​ಗಿಂತಲೂ 44% ಅಧಿಕ. ಇದು ಐಪಿಎಲ್​ ಇಲ್ಲಿವರೆಗಿನ ಸೀಸನ್​ನಲ್ಲೇ ಅತೀ ಹೆಚ್ಚು ಎಂಬ ದಾಖಲೆ ಸೃಷ್ಟಿಸಿದೆ.

ಭಾರತದ ವಿವಿಧ ಕ್ರೀಡಾಂಗಣದಲ್ಲಿ ನಡೆದ 60 ಪಂದ್ಯಗಳ ಮೂಲಕ ಕ್ರಿಕೆಟ್​ ಪ್ರೇಮಿಗಳಿಗೆ ಭರ್ಜರಿ ರಸದೌತಣ ಒದಗಿಸುವಲ್ಲಿ ಐಪಿಎಲ್​ ತಂಡಗಳು ಯಶಸ್ವಿಯಾಗಿದ್ದವು. ಎಲ್ಲಾ ತಂಡಗಳ ಟ್ವೀಟ್​ಗಳು ರಿ ಟ್ವೀಟ್ ಆಗಿದ್ದರೂ, ಮತ್ತೊಂದು ದಾಖಲೆಗೆ ಕಾರಣವಾಗಿದ್ದು ಮುಂಬೈ ಆಟಗಾರ ಹಾರ್ದಿಕ್ ಪಾಂಡ್ಯ ಮಾಡಿದ ಟ್ವೀಟ್.


ನನ್ನ ಸ್ಪೂರ್ತಿ, ನನ್ನ ಗೆಳೆಯ, ನನ್ನ ಸಹೋದರ, ನನ್ನ ಲೆಜೆಂಡ್​ ಎಂದು ಧೋನಿ ಫೋಟೋ ಹಾಕಿ ಪಾಂಡ್ಯ ಮಾಡಿದ ಸ್ಫೂರ್ತಿದಾಯಕ ಟ್ವೀಟ್ 17 ಸಾವಿರ ರಿ ಟ್ವೀಟ್​ ಆಗಿದೆ. ಈ ಮುಖಾಂತರ ಅತೀ ಹೆಚ್ಚು ರಿ ಟ್ವೀಟ್​ ಆದ ಐಪಿಎಲ್ ಟ್ವೀಟ್​ ಎಂಬ ದಾಖಲೆ ಬರೆದಿದೆ.

ಇನ್ನು ಪ್ರಶಸ್ತಿ ವಿಜೇತ ಮುಂಬೈ ಇಂಡಿಯನ್ಸ್​ ತಂಡದ ಫೈನಲ್ ಫೋಟೋಗೆ ಮೂಡಿ ಬಂದಂತಹ 63% ರಷ್ಟು ಟ್ಯಾಗ್​ನಲ್ಲಿ ಶೇ.37 ರಷ್ಟು ಟ್ಯಾಗ್​ಗಳು ಚೆನ್ನೈ ಸೂಪರ್ ಕಿಂಗ್ಸ್ ಪರ ಮೂಡಿ ಬಂದಿರುವುದು ಚೆನ್ನೈ ತಂಡಕ್ಕಿರುವ ಅಭಿಮಾನಿಗಳನ್ನು ಸೂಚಿಸಿದೆ.ಇನ್ನು ಐಪಿಎಲ್​ ವೇಳೆ ಅತೀ ಹೆಚ್ಚು ಟ್ವೀಟ್​ಗಳು ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಮೂಡಿ ಬಂದಿದ್ದು, ನಂತರದ ಸ್ಥಾನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹರ್ಭಜನ್ ಸಿಂಗ್ ಹಾಗೂ ಆಂಡ್ರೆ ರಸೆಲ್ ಅವರ ಪಾಲಾಗಲಿದೆ.

ಐಪಿಎಲ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಈ ಬಾರಿ ಅತೀ ಹೆಚ್ಚು ವಿಡಿಯೋಗಳನ್ನು ಅಪ್​ಲೋಡ್ ಮಾಡಲಾಗಿದೆ. ಎಂಟು ತಂಡಗಳ ವಿಡಿಯೋಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಅಕೌಂಟ್​ನಲ್ಲಿ ಶೇರ್​ ಮಾಡಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 130% ರಷ್ಟು ಹೆಚ್ಚು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಹಾಗೆಯೇ ಮುಂಬೈ ಹಾಗೂ ಚೆನ್ನೈ ವಿರುದ್ಧದ ರೋಚಕ ಫೈನಲ್​ ಪಂದ್ಯದ ವಿಡಿಯೋಗೆ ಅತೀ ಹೆಚ್ಚಿನ ಟ್ವೀಟ್​ಗಳು ವ್ಯಕ್ತವಾಗಿವೆ.
ಹಾಗೆಯೇ ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ತಂಡದ ಆಟಗಾರರು ತಮಿಳಿನಲ್ಲಿ ಟ್ವೀಟ್​ ಮಾಡಿ ಗಮನ ಸೆಳೆದಿದ್ದರು. ಅದರಲ್ಲೂ ಹರ್ಭಜನ್ ಸಿಂಗ್ ಸಂಪೂರ್ಣ ತಮಿಳಿನಲ್ಲೇ ಟ್ವೀಟ್ ಮಾಡಿ ಸ್ಥಳೀಯ ಭಾಷೆಯನ್ನು ವಿಶ್ವದ ಮುಂದಿಟ್ಟಿದ್ದರು. ಅದೇ ರೀತಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್​ ವಿದಾಯದ ಟ್ವೀಟ್​ನಲ್ಲಿ 'ನೀವು ಇಲ್ಲಾಂದ್ರೆ ನಾವು ಏನೂ ಅಲ್ಲಾ' ಎಂದು ಟ್ವೀಟ್​ ಮಾಡುವ ಮಾಡಿ ಕನ್ನಡದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ್ದರು.First published: