HOME » NEWS » Sports » CRICKET IPL 2019 RCB VS KXIP MATCH AT CHINNASWAMY STADIUM RCB REGISTER 17 RUN WIN

RCB vs KXIP: ಅಬ್ಬರಿಸಿ ಬೊಬ್ಬಿರಿದ ಎಬಿಡಿ; ಆರ್​ಸಿಬಿ ಪ್ಲೇ ಆಫ್​ ಆಸೆ ಜೀವಂತ!

17 ರನ್​ಗಳ ಗೆಲುವಿನೊಂದಿಗೆ ಆರ್​ಸಿಬಿ ಹ್ಯಾಟ್ರಿಕ್ ಜಯದೊಂದಿಗೆ ಭರ್ಜರಿ ಕಮ್​​ಬ್ಯಾಕ್ ಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಒಂದು ಸಾಲು ಮೇಲೆ ಬಂದಿದ್ದು ಪ್ಲೇ ಆಫ್​ ಕನಸು ಜೀವಂತವಾಗಿರಿಸಿದೆ.

zahir | news18
Updated:April 25, 2019, 12:15 AM IST
RCB vs KXIP: ಅಬ್ಬರಿಸಿ ಬೊಬ್ಬಿರಿದ ಎಬಿಡಿ; ಆರ್​ಸಿಬಿ ಪ್ಲೇ ಆಫ್​ ಆಸೆ ಜೀವಂತ!
ಎಬಿ ಡಿವಿಲಿಯರ್ಸ್​​
  • News18
  • Last Updated: April 25, 2019, 12:15 AM IST
  • Share this:
ಬೆಂಗಳೂರು (ಏ. 24): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​​ ತಂಡ 17 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಎಬಿಡಿ ಅವರ ಸ್ಫೋಟಕ ಆಟ ಹಾಗೂ ಡೆತ್ ಓವರ್​​ನಲ್ಲಿ ಬೌಲರ್​ಗಳ ಉತ್ತಮ ಪ್ರದರ್ಶನದ ಫಲವಾಗಿ ಕೊಹ್ಲಿ ಟೀಂ ಪ್ಲೇ ಆಫ್​​ ಆಸೆಯನ್ನು ಜೀವಂತವಾಗಿರಿಸಿದೆ.

ಆರ್​ಸಿಬಿ ನೀಡಿದ್ದ 203 ರನ್​ಗಳ ಬೃಹತ್ ಸವಾಲು ಬೆನ್ನಟ್ಟಿದ ಪಂಜಾಬ್​​ಗೆ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಸ್ಫೋಟಕ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಆಟಕ್ಕೆ ಮುಂದಾದ ಗೇಲ್ 3 ಓವರ್​ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 40 ಗಡಿ ದಾಟಿಸಿ 23 ರನ್​ಗೆ ಔಟ್ ಆದರು. 2ನೇ ವಿಕೆಟ್​ಗೆ ಮಯಾಂಕ್ ಅಗರ್ವಾಲ್ ಜೊತೆಯಾದ ರಾಹುಲ್ ಅದೇ ರನ್​​ಗತಿಯಲ್ಲಿ ಬ್ಯಾಟ್ ಬೀಸಿದರು. ಭರ್ಜರಿ ಜೊತೆಯಾಟ ಆಡಿದ ಈ ಜೋಡಿ 10 ಓವರ್​ಗೂ ಮುನ್ನವೇ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು.

ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಸ್ಟಾಯಿನಿಸ್ ತನ್ನ ಮೊದಲ ಎಸೆತದಲ್ಲೇ 21 ಎಸೆತಗಳಲ್ಲಿ 35 ರನ್ ಬಾರಿಸಿದ್ದ ಅಗರ್ವಾಲ್​​ರನ್ನು ಪೆವಿಲಿಯನ್​ಗೆ ಅಟ್ಟಿದರು. ಇದಾದ ಮುಂದಿನ ಓವರ್​ನಲ್ಲಿ ಮೊಯೀನ್ ಅಲಿ ಅವರು ತಮ್ಮ ಮೊದಲ ಎಸೆತದಲ್ಲಿ 27 ಎಸೆತಗಳಲ್ಲಿ 42 ರನ್ ಗಳಿಸಿದ್ದ ರಾಹುಲ್​ರನ್ನೂ ಔಟ್ ಮಾಡಿದರು. ಹೀಗೆ ಪ್ರಮುಖ 3 ವಿಕೆಟ್ ಪಡೆದುಕೊಂಡು ಆರ್​ಸಿಬಿ ತನ್ನ ಗೆಲುವಿನ ಹಾದಿಗೆ ಮರಳಿತು.

ಆದರೆ, ಈ ಸಂದರ್ಭ ಕ್ರೀಸ್​ಗೆ ಬಂದ ನಿಕೋಲಸ್ ಪೂರನ್ ಸ್ಫೋಟಕ ಆಟಕ್ಕೆ ಮುಂದಾಗಿ ಆರ್​ಸಿಬಿ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ಸಿಕ್ಸರ್​ಗಳ ಸುರಿಮಳೆ ಗೈದ ಪೂರನ್ ಪಂಜಾಬ್ ಗೆಲುವನ್ನು ಹತ್ತಿರ ಮಾಡಿದರು. ಇತ್ತ ಪೂರನ್​ಗೆ ಡೇವಿಡ್ ಮಿಲ್ಲರ್ ಉತ್ತಮ ಸಾತ್ ನೀಡಿದರು. ಇನ್ನೇನು ಈ ಜೋಡಿ ಪಂಜಾಬ್​ಗೆ ಗೆಲುವು ತಂದುಕೊಡುತ್ತೆ ಎಂಬೊತ್ತಿಗೆ ಬೌಲಿಂಗ್ ಮಾಡಲು ಬಂದ ನವ್​ದೀಪ್ ಸೈನಿ ನಿಜಕ್ಕೂ ಆರ್​ಸಿಬಿ ಪಾಲಿನ ಆಪತ್ಬಾಂದವರಾದರು. ಭರ್ಜರಿ ಆಟ ಪ್ರದರ್ಶಿಸುತ್ತಿದ್ದ ಮಿಲ್ಲರ್(24) ಅನ್ನು 18ನೇ ಓವರ್​ನ ಮೊದಲ ಎಸೆತದಲ್ಲೇ ಸೈನಿ ಔಟ್ ಮಾಡಿದರೆ, ತನ್ನ ಕೊನೆಯ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್​ಮನ್​​ ಪೂರನ್​ರನ್ನು ನಿರ್ಗಮಿಸುವಲ್ಲಿ ಯಶಸ್ವಿಯಾದರು. ಪೂರನ್ ಕೇವಲ 28 ಎಸೆತಗಳಲ್ಲಿ 5 ಸಿಕ್ಸರ್​​ ಸಿಡಿಸಿ 46 ರನ್​ಗೆ ಬ್ಯಾಟ್ ಕೆಳಗಿಟ್ಟ ಪರಿಣಾಮ ಆರ್​ಸಿಬಿ ಗೆಲುವಿನ ಟ್ರ್ಯಾಕ್​​ಗೆ ಮರಳಲು ಸಹಕಾರಿ ಆಯಿತು.

IPL 2019 Live Score, RCB vs KXIP: ಡೆತ್ ಓವರ್​ನಲ್ಲಿ ಮಿಂಚಿದ ಸೈನಿ, ಉಮೇಶ್; ಆರ್​ಸಿಬಿಗೆ 17 ರನ್​ಗಳ ಭರ್ಜರಿ ಜಯ

ಕೊನೆಯ ಓವರ್​ನಲ್ಲಿ ಪಂಜಾಬ್ ಗೆಲುವಿಗೆ 27 ರನ್​ಗಳ ಅವಶ್ಯಕತೆಯಿತ್ತು. ಬೌಲಿಂಗ್ ಮಾಡಲು ಬಂದ ಉಮೇಶ್ ಯಾದವ್​ ಉತ್ತಮ ಲಯದಲ್ಲಿ ಬಾಲ್ ಎಸೆದು ಆರ್ ಅಶ್ವಿನ್(6) ಹಾಗೂ ವಿಲ್​ಜೋನ್​​(0) ರನ್  ಔಟ್ ಮಾಡುವ ಮೂಲಕ 9 ರನ್ ನೀಡಿದರು. ಇದರ ಪರಿಣಾಮ ಪಂಜಾಬ್ 20 ಓವರ್​ಗೆ 7 ವಿಕೆಟ್ ನಷ್ಟಕ್ಕೆ 185 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಆರ್​ಸಿಬಿ ಪರ ಉಮೇಶ್ ಯಾದವ್ 3 ವಿಕೆಟ್ ಕಿತ್ತರೆ, ಸೈನಿ 2, ಸ್ಟಾಯಿನಿಸ್ ಹಾಗೂ ಅಲಿ ತಲಾ 2 ವಿಕೆಟ್ ಪಡೆದರು.

17 ರನ್​ಗಳ ಗೆಲುವಿನೊಂದಿಗೆ ಆರ್​ಸಿಬಿ ಹ್ಯಾಟ್ರಿಕ್ ಜಯದೊಂದಿಗೆ ಭರ್ಜರಿ ಕಮ್​​ಬ್ಯಾಕ್ ಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಒಂದು ಸಾಲು ಮೇಲೆ ಬಂದಿದ್ದು ಪ್ಲೇ ಆಫ್​ ಕನಸು ಜೀವಂತವಾಗಿರಿಸಿದೆ. ಭರ್ಜರಿ ಆಟ ಪ್ರದರ್ಶಿಸಿದ ಎಬಿಡಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಪಡೆದ ಆರ್​ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಡಗೈ ದಾಂಡಿಗ ಪಾರ್ಥಿವ್ ಪಟೇಲ್ ಭರ್ಜರಿ ಆರಂಭ ಒದಗಿಸಿದರು. 3 ಓವರ್​ನಲ್ಲೇ 35 ರನ್‌ಗಳನ್ನು ಪೇರಿಸಿದ್ದ ಈ ಜೋಡಿಯನ್ನು ಮೊಹಮ್ಮದ್ ಶಮಿ ಬೇರ್ಪಡಿಸಿದರು. 13 ರನ್​ಗಳಿಸಿದ್ದ ಕೊಹ್ಲಿ ಮನ್​ದೀಪ್​ಗೆ ಕ್ಯಾಚ್ ನೀಡಿ ಹೊರ ನಡೆದರು.​

ಅತ್ತ ಪಾರ್ಥಿವ್ ಪಟೇಲ್ ಜತೆಗೂಡಿದ ಎಬಿ ಡಿವಿಲಿಯರ್ಸ್​ ತಂಡವನ್ನು ಸುಸ್ಥಿತಿಯತ್ತ ಕೊಂಡೊಯ್ದರು. ಇದರಿಂದಾಗಿ ಪವರ್ ಪ್ಲೇನಲ್ಲಿ ಆರ್​ಸಿಬಿ ಮೊತ್ತವು 70 ರಲ್ಲಿಗೆ ಬಂದು ನಿಂತಿತು. ಅಪಾಯಕಾರಿ ಬ್ಯಾಟ್​ ಬೀಸುತ್ತಿದ್ದ ಪಟೇಲರನ್ನು ಅಶ್ವಿನ್ ತನ್ನ ಸ್ಪಿನ್ ಮೋಡಿಗೆ ಬೀಳಿಸುವ ಮೂಲಕ ಹೊರದಬ್ಬಿದರು. 24 ಎಸೆತಗಳಲ್ಲಿ ಬಿರುಸಿನ 43 ರನ್​ಗಳಿಸಿದ ಪಾರ್ಥೀವ್ ಪಟೇಲ್ ಅರ್ಧಶತಕದಿಂದ ವಂಚಿತರಾದರು.

ಈ ವೇಳೆ ಬೌಲಿಂಗ್ ಮೇಲುಗೈ ಸಾಧಿಸಿದ ಪಂಜಾಬ್, ಮೊಯಿನ್ ಅಲಿ (4) ಹಾಗೂ ಯುವ ಆಟಗಾರ ಅಕ್ಷದೀಪ್ ನಾಥ್‌ಗೂ (3) ರನ್ನು ಪೆವಿಲಿಯನ್​ಗೆ ಕಳುಹಿಸಿ ಆಘಾತ ನೀಡಿದರು. ಈ ಹಂತದಲ್ಲಿ ಜೊತೆಗೂಡಿದ ಎಬಿಡಿ ಹಾಗೂ ಸ್ಟೊಯಿನಿಸ್ ಇನಿಂಗ್ಸ್​ ಕಟ್ಟುವ ಜವಾಬ್ದಾರಿವಹಿಸಿಕೊಂಡರು.

ಮೊದಲಿಗೆ ಎಚ್ಚರಿಕೆ ಆಟದತ್ತ ಮುಖಮಾಡಿದ್ದ ವಿದೇಶಿ ಆಟಗಾರರು ಒಮ್ಮೆಲೇ ಪಂಜಾಬ್ ಬೌಲರ್​ಗಳ ವಿರುದ್ಧ ತಿರುಗಿಬಿದ್ದರು. ಬಿರುಸಿನ ಆಟದ ಮೂಲಕ ಕಿಂಗ್ಸ್ ಇಲೆವೆನ್ ಬೌಲರ್​ಗಳನ್ನು ದಂಡಿಸಿ ಎಬಿಡಿ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೊರೈಸಿದರು.

ಕೊನೆಯ ಓವರ್​ಗಳಲ್ಲಿ ಭರ್ಜರಿ ಆಟಕ್ಕೆ ಇಳಿದ ಡಿವಿಲಿಯರ್ಸ್​ ರನ್​ಗಳ ಸುರಿಮಳೆ ಸುರಿಸಿದರು. ಅದರಲ್ಲೂ ಮೊಹಮ್ಮದ್ ಶಮಿ ಎಸೆದ 19ನೇ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಸ್ಟೇಡಿಯಂನಲ್ಲಿ ಸಂಚಲನ ಸೃಷ್ಟಿಸಿದರು. ಎಬಿಡಿಗೆ ಸಾಥ್ ನೀಡಿದ​ ಸಾಥ್ ನೀಡಿದ ಮಾರ್ಕಸ್ ಸ್ಟೊಯಿನಿಸ್ ಕೊನೆಯ ಓವರ್‌ನಲ್ಲಿ 27 ರನ್ ಬಾಚಿಕೊಂಡರು. ಈ ಮೂಲಕ ಆರ್‌ಸಿಬಿ ಮೊತ್ತವನ್ನು 4 ವಿಕೆಟ್ ನಷ್ಟಕ್ಕೆ 202 ಕ್ಕೆ ತಂದು ನಿಲ್ಲಿಸಿದರು.

  

First published: April 24, 2019, 10:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading