VIDEO: ಧೋನಿ ನೋಡಲು ಚೆನ್ನೈ ಸ್ಟೇಡಿಯಂಗೆ ಬಂದಿದ್ದು 12 ಸಾವಿರ ಮಂದಿ; ಅಭ್ಯಾಸ ಪಂದ್ಯವೇ ಹೌಸ್​ಫುಲ್​​

ಮಾರ್ಚ್​​ 23 ರಂದು ಐಪಿಎಲ್ 12ನೇ ಆವೃತ್ತಿಗೆ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಅಭ್ಯಾಸ ಮಾಡಲು ಮೈದಾನಕ್ಕಿಳಿದ ಎಂಎಸ್ ಧೋನಿ

ಅಭ್ಯಾಸ ಮಾಡಲು ಮೈದಾನಕ್ಕಿಳಿದ ಎಂಎಸ್ ಧೋನಿ

  • News18
  • Last Updated :
  • Share this:
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಹೊಡಿಬಡಿ ಆಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ರೀಡಾಭಿಮಾನಿಗಳಂತು ಈ ಮಿಲಿಯನ್ ಡಾಲರ್ ಟೂರ್ನಿ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮಾರ್ಚ್​​ 23 ರಂದು ಐಪಿಎಲ್ 12ನೇ ಆವೃತ್ತಿಗೆ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಹೀಗಾಗಿಯೆ ಸಿಎಸ್​​ಕೆ ತಂಡ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಭಾನುವಾರದಂದು ಚೆನ್ನೈನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ತಂಡದ ನಾಯಕ ಎಂಎಸ್ ಧೋನಿ ಸೇರಿದಂತೆ ಪ್ರಮುಖ ಆಟಗಾರರು ಅಭ್ಯಾಸಕ್ಕೆ ಕಣಕ್ಕಿಳಿದಿದ್ದರು. ವಿಶೇಷ ಎಂದರೆ ಕೇವಲ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಸ್ಟೇಡಿಯಂ ಪೂರ್ತಿ ಅಭಿಮಾನಿಗಳು ತುಂಬಿದ್ದರು.

ಬರೋಬ್ಬರಿ 12 ಸಾವಿರ ಮಂದಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಬಂದಿದ್ದರು. ಸ್ಟೇಡಿಯಂನಲ್ಲಿ ಅಭಿಮಾನಿಗಳ ಕೂಗು ಐಪಿಎಲ್ ಪಂದ್ಯ ನಡೆಯುವ ವೇಳೆ ಹೇಗಿರುತ್ತೊ ಅದೇ ರೀತಿಯಲ್ಲಿತ್ತು. ಅದರಲ್ಲು ಧೋನಿ ಅಭ್ಯಾಸ ಮಾಡಲು ಮೈದಾನಕ್ಕೆ ಬಂದವೇಳೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತೆಂದು ನೀವೆ ನೋಡಿ…

ಇದನ್ನೂ ಓದಿ: ಈ ಸಲವೂ ಆರ್​ಸಿಬಿ ಕಪ್​ ಗೆಲ್ಲುವುದು ಡೌಟ್ ಅಂತಿದೆ ಈ ಬೆಳವಣಿಗೆ

 ಮಾರ್ಚ್​ 23 ರಂದು ಐಪಿಎಲ್​​ಗೆ ಚಾಲನೆ ಸಿಗಲಿದ್ದು, ಮೊದಲ ಪಂದ್ಯಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಸಿಎಸ್​​ಕೆ ಹಾಗೂ ಆರ್​ಸಿಬಿ ನಡುವಣ ಪಂದ್ಯದ ಟಿಕೆಟ್ ಭರ್ಜರಿ ಆಗಿಯೆ ಮಾರಾಟವಾಗುತ್ತಿದೆ.

 First published: