ಯುವರಾಜ್ ಸಿಂಗ್​ರ ಜೆರ್ಸಿ ಬಿಡುಗಡೆಗೊಳಿಸಿದ ಮುಂಬೈ; ನೀಲಿ ಕಲರ್ಸ್​​ನಲ್ಲಿ ಮಿಂಚಿದ ಯುವಿ

ಕಳೆದ ಐಪಿಎಲ್ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದ ಯುವಿಯನ್ನು ಈಬಾರಿ ಕಳಪೆ ಫಾರ್ಮ್​​ನಲ್ಲಿರುವ ಹಿನ್ನಲೆಯಲ್ಲಿ ತಂಡ ಕೈಬಿಟ್ಟಿದೆ. ಹೀಗಾಗಿ ಹರಾಜಿನಲ್ಲಿ ಇವರನ್ನು ಮುಂಬೈ ಇಂಡಿಯನ್ಸ್​ ತಂಡ 1 ಕೋಟಿ ಕೊಟ್ಟು ಖರೀದಿ ಮಾಡಿತ್ತು.

Vinay Bhat | news18
Updated:March 13, 2019, 5:11 PM IST
ಯುವರಾಜ್ ಸಿಂಗ್​ರ ಜೆರ್ಸಿ ಬಿಡುಗಡೆಗೊಳಿಸಿದ ಮುಂಬೈ; ನೀಲಿ ಕಲರ್ಸ್​​ನಲ್ಲಿ ಮಿಂಚಿದ ಯುವಿ
ಯುವರಾಜ್ ಸಿಂಗ್​ರ ಹೊಸ ಜೆರ್ಸಿ
Vinay Bhat | news18
Updated: March 13, 2019, 5:11 PM IST
ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲು ಹರಸಾಹಸ ಪಡುತ್ತಿರುವ ಸಿಕ್ಸ್​ರ್​​ಗಳ ಸರದಾರ ಯುವರಾಜ್ ಸಿಂಗ್​ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಕಳೆದ ಐಪಿಎಲ್ ಸೀಸನ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದ ಯುವಿಯನ್ನು ಈಬಾರಿ ಕಳಪೆ ಫಾರ್ಮ್​​ನಲ್ಲಿರುವ ಹಿನ್ನಲೆಯಲ್ಲಿ ತಂಡ ಕೈಬಿಟ್ಟಿದೆ. ಹೀಗಾಗಿ ಹರಾಜಿನಲ್ಲಿ ಇವರನ್ನು ಮುಂಬೈ ಇಂಡಿಯನ್ಸ್​ ತಂಡ 1 ಕೋಟಿ ಕೊಟ್ಟು ಖರೀದಿ ಮಾಡಿತ್ತು.

ರೋಹಿತ್ ಶರ್ಮಾ ತಂಡ ಸೇರಿರುವ ಯುವರಾಜ್ ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಹೀಗಿರುವಾಗಲೆ ಯುವಿ ಅಭಿಮಾನಿಗಳಿಗೆ ಮುಂಬೈ ಇಂಡಿಯನ್ಸ್​​ ಖುಷಿಯ ವಿಚಾರವೊಂದನ್ನು ಹೊತ್ತು ತಂದಿದೆ.

ಇದನ್ನೂ ಓದಿ: ಕೊಹ್ಲಿಅಲ್ಲ; ವಿಜಯ್ ಶಂಕರ್​​ಗೆ 50ನೇ ಓವರ್ ಬೌಲಿಂಗ್ ಮಾಡಲು ಹೇಳಿದ್ದು ಯಾರು?

ಮುಂಬೈ ಪರ ಕಣಕ್ಕಿಳಿಯಲಿರುವ ಯುವರಾಜ್​ಗೆ ತಂಡ ಹೊಸ ಜೆರ್ಸಿಯನ್ನು ಸಿದ್ಧಗೊಳಿಸಿದೆ. ಯುವಿ ಲಕ್ಕಿ ನಂಬರ್ 12 ಅನ್ನು ಒಳಗೊಂಡ ಜೆರ್ಸಿ ಇದಾಗಿದ್ದು, ನೀಲಿ ಕಲರ್​​ನಲ್ಲಿ ಯುವಿ ಮಿಂಚುತ್ತಿದ್ದಾರೆ. ಮುಂಬೈ ಇಂಡಿಯನ್ಸ್​ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಈ ಜೆರ್ಸಿಯನ್ನು ಬಿಡುಗಡೆಗೊಳಿಸಲಾಗಿದೆ. ಯುವಿ ಜೊತೆ ರೋಹಿತ್ ಶರ್ಮಾ ಕೂಡ ಫೋಟೋ ಶೂಟ್ ನಡೆಸಿದ್ದು, ಈ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮುಂಬೈ ಇಂಡಿಯನ್ಸ್​ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್​ 24 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಲಿದೆ.
Loading...

 First published:March 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...