HOME » NEWS » Sports » CRICKET IPL 2019 MI VS RCB MATCH AT WANKHEDE MUMBAI REGISTER FIVE WICKET WIN

MI vs RCB: ಮುಂಬೈಗೆ ಭರ್ಜರಿ; ಆರ್​ಸಿಬಿ ಪ್ಲೇ ಆಫ್ ಕನಸು ಭಗ್ನ

ಮೊದಲ ಓವರ್​ನಿಂದಲೇ ಚೆಂಡನ್ನು ಬೌಂಡರಿ-ಸಿಕ್ಸ್​ಗೆ ಅಟ್ಟಿದ ರೋಹಿತ್-ಡಿಕಾಕ್ ಪವರ್ ಪ್ಲೇ ಮುಗಿವ ಹೊತ್ತಿಗೆನೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿ ಬಿಟ್ಟರು

zahir | news18
Updated:April 16, 2019, 12:04 AM IST
MI vs RCB: ಮುಂಬೈಗೆ ಭರ್ಜರಿ; ಆರ್​ಸಿಬಿ ಪ್ಲೇ ಆಫ್ ಕನಸು ಭಗ್ನ
ಹಾರ್ದಿಕ್ ಪಾಂಡ್ಯ
  • News18
  • Last Updated: April 16, 2019, 12:04 AM IST
  • Share this:
ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ರಾಯಲ್ ಚಾಲೆಂಜರ್ಸ್​​ ಬೆಂಗಲೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಗೆಲುವಿನ ಲಯಕ್ಕೆ ಮರಳಿದ್ದ ಆರ್​ಸಿಬಿ ಮತ್ತದೆ ಕಳಪೆ ಬೌಲಿಂಗ್​​ನಿಂದ ಸೋಲುಂಡಿದ್ದು, ಬಹುತೇಕ ಟೂರ್ನಿಯಿಂದಲೇ ಹೊರ ಬಿದ್ದಿದೆ.

ಆರ್​ಸಿಬಿ ನೀಡಿದ್ದ 172 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟರ್ ಡಿಕಾಕ್ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್​ನಿಂದಲೇ ಚೆಂಡನ್ನು ಬೌಂಡರಿ-ಸಿಕ್ಸ್​ಗೆ ಅಟ್ಟಿದ ಈ ಜೋಡಿ ಪವರ್ ಪ್ಲೇ ಮುಗಿವ ಹೊತ್ತಿಗೆನೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿ ಬಿಟ್ಟರು. ಹೀಗಾಗಿ ತಂಡದ ಗೆಲುವು ಮತ್ತಷ್ಟು ಸುಲಭವಾಯಿತು.

ಆದರೆ ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಮೊಯೀನ್ ಅಲಿ ಮುಂಬೈಗೆ ಶಾಕ್ ಮೇಲೆ ಶಾಕ್ ನೀಡಿದರು. ಬೊಂಬಾಟ್ ಆಟ ಪ್ರದರ್ಶಿಸುತ್ತಿದ್ದ ರೋಹಿತ್ ಶರ್ಮಾ(28) ಅಲಿ ಎಸೆತದಲ್ಲಿ ಕ್ಲೀನ್ ಬೌಲ್ಡ್​ ಆದರು. ಹೀಗೆ ಮೊದಲ ವಿಕೆಟ್​ಗೆ ಈ ಜೋಡಿಯ 70 ರನ್​ಗಳ ಸ್ಫೋಟಕ ಜೊತೆಯಾಟಕ್ಕೆ ಬ್ರೇಕ್ ಬಿತ್ತು. ಇದಾದ ಬೆನ್ನಲ್ಲೆ 40 ರನ್​ ಗಳಿಸಿದ್ದ ಡಿಕಾಕ್​​ರನ್ನೂ ಅಲಿ ಪೆವಿಲಿಯನ್​ಗೆ ಅಟ್ಟಿದರು.

ಈ ಸಂದರ್ಭ ಆರ್​ಸಿಬಿ ಕಡೆ ವಾಲಿದ್ದ ಪಂದ್ಯವನ್ನು ಸೂರ್ಯಕುಮಾರ್ ಯಾದವ್(29) ಹಾಗೂ ಇಶಾನ್ ಕಿಶನ್(21) ಬಿರುಸಿನ ಬ್ಯಾಟಿಂಗ್ ನಡೆಸಿ ಮುಂಬೈ ಜಯವನ್ನು ಮತ್ತಷ್ಟು ಹತ್ತಿರ ಮಾಡಿ ನಿರ್ಗಮಿಸಿದರು. ಕೊನೆಯಲ್ಲಿ ಬಂದ ಹಾರ್ದಿಕ್ ಪಾಂಡ್ಯ ಎಂದಿನಂತೆ ತಮ್ಮ ಶೈಲಿಯಲ್ಲಿ ಬಿರುಗಾಳಿಯಂತೆ ಬ್ಯಾಟಿಂಗ್ ನಡೆಸಿ ಕೇವಲ 16 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸ್​ನೊಂದಿಗೆ ಅಜೇಯ 37 ರನ್ ಚಚ್ಚಿ ವಿನ್ನಿಂಗ್ ಶಾಟ್ ಹೊಡೆದರು. ಈ ಮೂಲಕ ಮುಂಬೈ ಇನ್ನೂ 1 ಓವರ್ ಬಾಕಿ ಇರುವಂತೆಗೆ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕುವ ಮೂಲಕ ಗೆಲುವಿನ ನಗೆ ಬೀರಿತು. ಆರ್​ಸಿಬಿ ಪರ ಚಹಾಲ್ ಹಾಗೂ ಅಲಿ ತಲಾ 2 ವಿಕೆಟ್ ಕಿತ್ತರೆ, ಸಿರಾಜ್ 1 ವಿಕೆಟ್ ಪಡೆದರು.

IPL 2019 Live Score, MI vs RCB: ಮಿಂಚಿದ ಹಾರ್ದಿಕ್; ಮತ್ತೆ ಸೋಲುಂಡ ಆರ್​ಸಿಬಿ

ಟಾಸ್​ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಭರ್ಜರಿ ಇನಿಂಗ್ಸ್​ ಕಟ್ಟುವ ಯೋಜನೆಯೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತೊಮ್ಮೆ ಆರಂಭಿಕ ಆಘಾತಕ್ಕೆ ಒಳಗಾಯಿತು. ತಂಡಕ್ಕೆ ಕೇವಲ 12 ರನ್​ ಸೇಪರ್ಡೆಯಾಗುವಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ(8) ಕೀಪರ್​ಗೆ ಕ್ಯಾಚಿತ್ತು ಔಟಾದರು.

ಈ ವೇಳೆ ಪಾರ್ಥೀವ್ ಪಟೇಲ್ ಜತೆಗೂಡಿದ ಎಬಿ ಡಿವಿಲಿಯರ್ಸ್ ತಂಡವನ್ನು ಆರಂಭಿಕ ಹೊಡೆತದಿಂದ ಪಾರು ಮಾಡಲು ಪಣತೊಟ್ಟರು. ಅದರಂತೆ ಲೀಲಾಜಾಲವಾಗಿ ಬ್ಯಾಟ್​ ಬೀಸಿದ ಎಬಿಡಿ ಪವರ್​ ಪ್ಲೇ ಮುಕ್ತಾಯ ವೇಳೆ ತಂಡವನ್ನು 40 ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಬಿರುಸಿನ ಹೊಡೆತಗಳ ಮೂಲಕ ಗಮನ ಸೆಳೆದ ಪಾರ್ಥೀವ್ 28 ರನ್​ಗಳಿಸಿ ಹೊರ ನಡೆದರು.ಈ ಹಂತದಲ್ಲಿ ಎಬಿಡಿಯೊಂದಿಗೆ ಕೂಡಿಕೊಂಡ ಮೊಯೀನ್ ಅಲಿ ನಿಧಾನಗತಿಯಲ್ಲಿದ್ದ ಆರ್​ಸಿಬಿಯ ರನ್​ ವೇಗವನ್ನು ಹೆಚ್ಚಿಸಿದರು. ಮುಂಬೈ ಬೌಲರ್​ಗಳನ್ನು ಮನಸೊ ಇಚ್ಛೆ ದಂಡಿಸಿದ ಅಲಿ ಸ್ಫೋಟಕ ಆಟಕ್ಕೆ ಒತ್ತು ನೀಡಿದರು. ಅಲ್ಲದೆ ಡಿವಿಲಿಯರ್ಸ್​ ಜತೆ 95 ರನ್​ಗಳ ಉಪಯುಕ್ತ ಜೊತೆಯಾಟಕ್ಕೆ ಸಾಥ್ ನೀಡಿದರು.

ಅರ್ಧಶತಕ ಸಿಡಿಸಿ ಬ್ಯಾಟ್​ ಮೇಲೆತ್ತಿದ್ದ ಮೊಯೀನ್ ಅಲಿ, ನಂತರದ ಬಾಲ್​ನಲ್ಲಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಬೌಂಡರಿಯಲ್ಲಿ ಕ್ಯಾಚಿತ್ತರು. ಕೇವಲ 31 ಎಸೆತಗಳಲ್ಲಿ ಐದು ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ್ದ ಅಲಿಯು ಹೊರ ನಡೆಯುವಾಗ ಆರ್​ಸಿಬಿ ಮೊತ್ತ 17 ಓವರ್​ಗೆ 144/3.

ನಂತರ ಬಂದ ಮಾರ್ಕಸ್​ ಸ್ಟೊಯಿನಿಸ್ ಕ್ರೀಸ್​ಗೆ ಆಗಮಿಸಿದ್ದ ವೇಗದಲ್ಲೇ ಹಿಂತಿರುಗಿದರು. ಇನ್ನೊಂದೆಡೆ ಏಕಾಂಗಿಯಾಗಿ ತಂಡ ಮೊತ್ತ ಹೆಚ್ಚಿಸಲು ಹೋರಾಡಿದ ಎಬಿ ಡಿವಿಲಿಯರ್ಸ್ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿ ಒಳಗೊಂಡ 75 (51) ರನ್​ಗಳಿಸಿದರು. ಆದರೆ ಕೊನೆಯ ಓವರ್​ನಲ್ಲಿ ಪೊಲಾರ್ಡ್​ ಅವರ ಫೀಲ್ಢಿಂಗ್ ಚಮತ್ಕಾರಕ್ಕೆ ಔಟಾಗಿ ಹೊರ ನಡೆದು ಎಬಿಡಿ ನಿರಾಸೆ ಮೂಡಿಸಿದರು. ಅಂತಿಮ ಓವರ್​ನಲ್ಲಿ ಕೇವಲ 8 ರನ್​ ನೀಡಿ ಎರಡು ವಿಕೆಟ್​ ಉರುಳಿಸಿದ ಮಾಲಿಂಗ ಆರ್​ಸಿಬಿಯ ಮೊತ್ತವನ್ನು 171 ಕ್ಕೆ ನಿಯಂತ್ರಿಸಲು ಯಶಸ್ವಿಯಾದರು.

ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದ ಲಸಿತ್ ಮಾಲಿಂಗ್ ಕಂಬ್ಯಾಕ್ ಪಂದ್ಯದ ಮೂಲಕವೇ ಮತ್ತೊಮ್ಮೆ ಘರ್ಜಿಸಿದರು. ಅದ್ಭುತ ಯಾರ್ಕರ್​ ಎಸೆತಗಳೊಂದಿಗೆ 4 ಓವರ್​ನಲ್ಲಿ ಕೇವಲ 31 ರನ್​ 4 ವಿಕೆಟ್ ಪಡೆದು ಮುಂಬೈ ಪರ ಯಶಸ್ವಿ ಬೌಲರ್ ಎನಿಸಿಕೊಂಡು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

 

First published: April 15, 2019, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories