HOME » NEWS » Sports » CRICKET IPL 2019 MI VS KXIP MATCH AT WANKHEDE CAPTAIN POLLARD STARS AS MUMBAI WIN A THRILLER

MI vs KXIP: ರಾಹುಲ್ ಶತಕ ವ್ಯರ್ಥ; ಕ್ಯಾಪ್ಟನ್​​ ಪೊಲ್ಲಾರ್ಡ್​ ಆರ್ಭಟದ ಮುಂದೆ ಮಕಾಡೆ ಮಲಗಿದ ಪಂಜಾಬ್

ಕೊನೆಯ ಓವರ್​ನಲ್ಲಿ ಮುಂಬೈಗೆ ಗೆಲ್ಲಲು 15 ರನ್​ಗಳ ಅವಶ್ಯಕತೆಯಿತ್ತು. ಅಂಕಿತ್​ರ ಮೊದಲ ಎಸೆತ ನೋ ಬಾಲ್ ಜೊತೆ ಸಿಕ್ಸ್​ ಸಿಡಿಸಿದ ಪೊಲ್ಲಾರ್ಡ್​​ ಎರಡನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು. ಆದರೆ 3ನೇ ಎಸೆತದಲ್ಲಿ ಔಟ್ ಆಗುವ ಮೂಲಕ ಆಘಾತ ನೀಡಿದು.

zahir | news18
Updated:April 11, 2019, 12:34 AM IST
MI vs KXIP: ರಾಹುಲ್ ಶತಕ ವ್ಯರ್ಥ; ಕ್ಯಾಪ್ಟನ್​​ ಪೊಲ್ಲಾರ್ಡ್​ ಆರ್ಭಟದ ಮುಂದೆ ಮಕಾಡೆ ಮಲಗಿದ ಪಂಜಾಬ್
ಕೀರೊನ್ ಪೊಲ್ಲಾರ್ಡ್​​ (ಮುಂಬೈ ಇಂಡಿಯನ್ಸ್​​)
  • News18
  • Last Updated: April 11, 2019, 12:34 AM IST
  • Share this:
ಮುಂಬೈ (ಏ. 10): ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್​​ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ ನಡುವಣ ರೋಚಕ ಪಂದ್ಯದಲ್ಲಿ ಮುಂಬೈ ತಂಡ 3 ವಿಕೆಟ್​​ಗಳ ಜಯ ಸಾಧಿಸಿದೆ. ಕೆ ಎಲ್ ರಾಹುಲ್​ರ ಅಮೋಘ ಶತಕದ ಹೊತರಾಗಿಯು ಕೀರೊನ್ ಪೊಲ್ಲಾರ್ಡ್​​ರ ಸ್ಪೋಟಕ ಆಟ ಮುಂದೆ ಪಂಜಾಬ್ ಸೋಲು ಕಂಡಿದೆ.

ಟಾಸ್ ಸೋತರು ಮೊದಲು ಬ್ಯಾಟಿಂಗ್‌ ಅವಕಾಶ ಪಡೆದ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ಕೆ.ಎಲ್ ರಾಹುಲ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಆರಂಭದಲ್ಲಿ ರಾಹುಲ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ್ದರೆ, ಯುನಿರ್ವಸಲ್ ಬಾಸ್ ಗೇಲ್ ಬಿರುಸಿನ ಆಟದೊಂದಿಗೆ ಆರ್ಭಟಿಸಿದರು. ಪರಿಣಾಮ ಪವರ್​ ಪ್ಲೇ ಮುಕ್ತಾಯ ಆಗುವುದರೊಳಗೆ ತಂಡದ ಮೊತ್ತ 50ರ ಗಡಿ ದಾಟಿತು.

31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಗೇಲ್​ ಮೈದಾನ ಮೂಲೆ ಮೂಲೆಗೂ ಚೆಂಡನ್ನು ಸಿಡಿಸಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿದರು. 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್​ ಬಾರಿಸಿದ್ದ ಗೇಲ್ 63 ರನ್​ಗಳಿಸಿ ಜಾಸನ್​ಗೆ ವಿಕೆಟ್ ಒಪ್ಪಿಸಿ ಭರ್ಜರಿ ಇನಿಂಗ್ಸ್​ಗೆ ಅಂತ್ಯ ಹಾಡಿದರು.

ಮೊದಲ ವಿಕೆಟ್​ 116 ರನ್​​ ಜೊತೆಯಾಟ ಅದಾಗಲೇ ಮೂಡಿದ್ದರಿಂದ ಗೇಲ್​ ವಿಕೆಟ್​ ಪಂಜಾಬ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬಳಿಕ ಬಂದ ಮಿಲ್ಲರ್​(7) ರನ್​ಗಳಿಸಿ ಮುಂಬೈನ ಎರಡನೇ ಯಶಸ್ಸಾಗಿ ಹೊರ ನಡೆದರೂ, ಮತ್ತೊಂದೆಡೆ ರಾಹುಲ್ ತಮ್ಮ ರೌದ್ರವತಾರ ಪ್ರದರ್ಶನಕ್ಕೆ ನಿಂತಿದ್ದರು.

16ನೇ ಓವರ್ ಅಂತ್ಯಕ್ಕೆ ಕರುಣ್ ನಾಯರ್(5) ಔಟಾದರೆ, ಸ್ಯಾಮ್ ಕುರ್ರನ್ (8) ಕರುಣ್​ರನ್ನು ಹಿಂಬಾಲಿಸಿದರು. ಆದರೆ ಇದ್ಯಾವುದಕ್ಕೂ ತನಗೆ ಸಂಬಂಧವಿಲ್ಲ ಎಂಬಂತೆ ಮುಂಬೈ ಬೌಲರ್​ಗಳನ್ನು ದಂಡಿಸುವಲ್ಲಿ ರಾಹುಲ್​ ನಿರತರಾಗಿದ್ದರು. ಇದಕ್ಕೆ ಸಾಕ್ಷಿಯಂಬಂತೆ 19ನೇ ಓವರ್​ ಎಸೆದ ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಬರೋಬ್ಬರಿ 25 ರನ್​ಗಳನ್ನು ಸಿಡಿಸಿದ್ದರು. ಅದರಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಕೂಡ ಒಳಗೊಂಡಿತ್ತು.

ಪ್ರೇಕ್ಷಕರತ್ತ ಸಿಕ್ಸ್ ಫೋರ್​ಗಳ ಸುರಿಮಳೆಗೈದ ರಾಹುಲ್, ಕೊನೆಯ ಓವರ್​ನಲ್ಲಿ ಒಂಭತ್ತು ರನ್​ ತನ್ನ ಖಾತೆಗೆ ಸೇರಿಸುವ ಮೂಲಕ ಐಪಿಎಲ್​ನ ಚೊಚ್ಚಲ ಶತಕ ಸಿಡಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಈ ಶತಕದಲ್ಲಿ ರಾಹುಲ್ ಬ್ಯಾಟ್​ನಿಂದ ಭರ್ಜರಿ ಆರು ಸಿಕ್ಸರ್​ ಹಾಗೂ ಆರು ಬೌಂಡರಿಗಳು ಸಿಡಿದಿದ್ದವು. ಕೊನೆಯವರೆಗೂ ಅಜೇಯರಾಗುಳಿದ ರಾಹುಲ್​ ಅವರ ಅಮೂಲ್ಯ ಕಾಣಿಕೆಯೊಂದಿಗೆ ಮುಂಬೈ ಮುಂದೆ ಪಂಜಾಬ್ 198 ರನ್​ಗಳ ಕಠಿಣ ಸವಾಲು ನೀಡಿತು.

ಸನ್​ರೈಸರ್ಸ್​ ವಿರುದ್ದದ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸಿದ್ದ ಮುಂಬೈ ಬೌಲರ್​ಗಳ ಲೆಕ್ಕಾಚಾರಗಳು ಇಂದು ಸಂಪೂರ್ಣ ತಲೆಕೆಳಗಾಗಿತ್ತು. ಅದರಲ್ಲೂ ಕಳೆದ ಪಂದ್ಯದ 6 ವಿಕೆಟ್​ಗಳ ಸರ್ದಾರ ಅಲ್ಜಾರಿ ಇಂದು ಯಾವುದೇ ಜಾದು ಮಾಡಲು ಯಶಸ್ವಿಯಾಗಿಲ್ಲ. ಇನ್ನು ಮುಂಬೈ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್​ ಕಬಳಿಸಿದ್ದರೆ ಅದಕ್ಕಾಗಿ 4 ಓವರ್​ನಲ್ಲಿ 57 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು.198 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ಮುಂಬೈ ಆರಂಭದಲ್ಲೇ ಸಿದ್ದೇಶ್ ಲಾಡ್(15) ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್​ಗೆ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಗಿ ರನ್​​​ ಕಲೆಹಾಕಲು ಹೊರಟರಾದರು ಅಶ್ವಿನ್ ಇವರ ಆಟಕ್ಕೆ ಬ್ರೇಕ್ ಹಾಕಿದರು. ಡಿಕಾಕ್ 24 ಹಾಗೂ ಸೂರ್ಯಕುಮಾರ್ 21 ರನ್​ಗೆ ನಿರ್ಗಮಿಸಿದ ಆಘಾತ ನೀಡಿದರು.

IPL 2019 Live Cricket Score, MI vs KXIP: ಪೊಲ್ಲಾರ್ಡ್​​​ ಏಕಾಂಗಿ ಹೋರಾಟ; ಮುಂಬೈಗೆ ರೋಚಕ ಜಯ

ಈ ಸಂದರ್ಭ ಕ್ರೀಸ್​ಗೆ ಬಂದ ನಾಯಕ ಪೊಲ್ಲಾರ್ಡ್​​ ಇಶಾನ್ ಕೀಶನ್ ಜೊತೆಯಾದರು. ಆದರೆ ಅನಗತ್ಯ ರನ್ ಕಲೆಹಾಕಲೋಗಿ ಕಿಶನ್(7) ಕೂಡ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಆಟ 19 ರನ್​ಗೆ ಅಂತ್ಯವಾದರೆ, ಕ್ರುನಾಲ್ ಕೇವಲ 1 ರನ್​ಗೆ ಬ್ಯಾಟ್ ಕೆಳಗಿಟ್ಟರು. ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ನಾಯಕನ ಆಟವಾಡಿದ ಪೊಲ್ಲಾರ್ಡ್​​ ಬಿರುಸಿನ ಆಟ ಪ್ರದರ್ಶಿಸಿದರು. ಅದರಲ್ಲು ಕೊನೆ ಹಂತದಲ್ಲಿ ಗೆಲುವಿಗಾಗಿ ಎಲ್ಲಿಲ್ಲದ ಹೋರಾಟ ನಡೆಸಿದ ಪೊಲ್ಲಾರ್ಡ್​​ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಗೈದರು.

ಕೊನೆಯ ಓವರ್​ನಲ್ಲಿ ಮುಂಬೈಗೆ ಗೆಲ್ಲಲು 15 ರನ್​ಗಳ ಅವಶ್ಯಕತೆಯಿತ್ತು. ಅಂಕಿತ್​ರ ಮೊದಲ ಎಸೆತ ನೋ ಬಾಲ್ ಜೊತೆ ಸಿಕ್ಸ್​ ಸಿಡಿಸಿದ ಪೊಲ್ಲಾರ್ಡ್​​ ಎರಡನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು. ಆದರೆ 3ನೇ ಎಸೆತದಲ್ಲಿ ಔಟ್ ಆಗುವ ಮೂಲಕ ಆಘಾತ ನೀಡಿದು. ಹೀಗೆ ಪೊಲ್ಲಾರ್ಡ್​ 31 ಎಸೆತಗಳಲ್ಲಿ 3 ಬೌಂಡರಿ 10 ಸಿಕ್ಸ್​​ ಚಚ್ಚಿ 83 ರನ್​​ಗೆ ಔಟ್ ಆದರು. ಪರಿಣಾಮ ಕೊನೆಯ ಎಸೆತದಲ್ಲಿ ಮುಂಬೈಗೆ ಗೆಲ್ಲಲು 2 ರನ್​ಗಳು ಬೇಕಾಗಿತ್ತು. ಕ್ರೀಸ್​ನಲ್ಲಿದ್ದ ಜೋಸೆಫ್ 2 ರನ್ ಕಲೆಹಾಕುವ ಮೂಲಕ ಮುಂಬೈಗೆ ರೋಚಕ ಜಯ ತಂದಿಟ್ಟರು. ಪಂಜಾಬ್​​ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಅಂಕಿತ್ ರಜ್ಪೂತ್, ಅಶ್ವಿನ್ ಹಾಗೂ ಕುರ್ರನ್ ತಲಾ 1 ವಿಕೆಟ್ ಪಡೆದರು. ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಕೀರನ್​ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು.

ಹೀಗೆ 3 ವಿಕೆಟ್​ಗಳ ರೋಚಕ ಗೆಲುವಿನೊಂದಿಗೆ ಮುಂಬೈ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅದ್ಭುತ ಆಟ ಪ್ರದರ್ಶಿಸಿದ ಪೊಲ್ಲಾರ್ಡ್​ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

  

First published: April 10, 2019, 10:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories