HOME » NEWS » Sports » CRICKET IPL 2019 MI VS KKR MATCH IN MUMBAI MUMBAI WIN BY 9 WICKETS KOLKATA KNOCKED OUT

KKR vs MI: ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸಿದ ಕೆಕೆಆರ್; ಮುಂಬೈಗೆ 9 ವಿಕೆಟ್​ಗಳ ಭರ್ಜರಿ ಜಯ

ಲೀಗ್​​ನ ಇಂದು ನಡೆದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​​ ಹೀನಾಯ ಸೋಲು ಕಂಡಿದ್ದು, ಪ್ಲೇ ಆಫ್ ಕನಸು ಭಗ್ನಗೊಂಡಿದೆ.

zahir | news18
Updated:May 5, 2019, 11:38 PM IST
KKR vs MI: ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸಿದ ಕೆಕೆಆರ್; ಮುಂಬೈಗೆ 9 ವಿಕೆಟ್​ಗಳ ಭರ್ಜರಿ ಜಯ
mi
  • News18
  • Last Updated: May 5, 2019, 11:38 PM IST
  • Share this:
ಐಪಿಎಲ್​​ನ ಲೀಗ್ ಹಂತದ ಎಲ್ಲ ಪಂದ್ಯಗಳು ಇಂದಿಗೆ ಮುಕ್ತಾಯಗೊಂಡಿದ್ದು, ಪ್ಲೇ ಆಫ್​ಗೆ​ ನಾಲ್ಕು ತಂಡಗಳು ಕಾಲಿಟ್ಟಿವೆ. ಮೊದಲ ಸ್ಥಾನದಲ್ಲಿ ಮುಂಬೈ, ಎರಡನೇ ಸ್ಥಾನದಲ್ಲಿ ಚೆನ್ನೈ, 3ನೇ ಸ್ಥಾನದಲ್ಲಿ ಡೆಲ್ಲಿ ಹಾಗೂ ನಾಲ್ಕನೇ ಸ್ಥಾನದಲ್ಲಿ ಹೈದರಾಬಾದ್ ತಂಡ ಅರ್ಹತೆ ಪಡೆದಿವೆ.

ಲೀಗ್​​ನ ಇಂದು ನಡೆದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​​ ಹೀನಾಯ ಸೋಲು ಕಂಡಿದ್ದು, ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಕೆಕೆಆರ್ ಸೋತಿದ್ದರಿಂದ ಸನ್​ರೈಸರ್ಸ್​​ 4ನೇ ಸ್ಥಾನಕ್ಕೇರಿದ್ದು, ಕ್ವಾಲಿಫೈಯರ್ ಆಗಿದೆ.

ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 12 ಅಂಕಗಳನ್ನು ಸಂಪಾದಿಸಿ ಪ್ಲೇ-ಆಫ್‌ಗೆ ಪ್ರವೇಶಿಸಿದ ಮೊದಲ ತಂಡವೆಂಬ ಹಿರಿಮೆಗೆ ಹೈದರಾಬಾದ್ ಪಾತ್ರವಾಗಿದೆ.

ಪ್ಲೇ ಆಫ್​ಗೇರಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಕೆಕೆಆರ್​ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.

ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್​ ಲಿನ್ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಗಿಲ್ ಈ ಬಾರಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹಾರ್ದಿಕ್ ಪಾಂಡ್ಯ ಎಸೆತವನ್ನು ಗುರುತಿಸಲು ಎಡವಿದ ಗಿಲ್ (9) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು.

ಇದರ ಬೆನ್ನಲ್ಲೇ ಹಾರ್ದಿಕ್ ಎಸೆದ ಮ್ಯಾಜಿಕ್ ಬಾಲ್​ಗೆ ಕೀಪರ್​ಗೆ ಕ್ಯಾಚಿತ್ತು ಕ್ರಿಸ್ ಲಿನ್ ವಿಕೆಟ್ ಒಪ್ಪಿಸಿದರು. 29 ಎಸೆತಗಳಲ್ಲಿ 2 ಬೌಂಡರಿ ಹಾಗೂ ನಾಲ್ಕು ಮನಮೋಹಕ ಸಿಕ್ಸರ್​ ಸಿಡಿಸಿದ್ದ ಲಿನ್ ಆಟ 41 ರನ್​ಗಳಿಗೆ ಸೀಮಿತವಾಯಿತು.

ತಂಡದ ಮೊತ್ತ 56 ಇದ್ದಾಗ ಜತೆಗೂಡಿದ ರಾಬಿನ್ ಉತ್ತಪ್ಪ ಹಾಗೂ ನಾಯಕ ದಿನೇಶ್ ಕಾರ್ತಿಕ್ ನಿಧಾಯಗತಿಯ ಆಟಕ್ಕೆ ಒತ್ತು ನೀಡಿದರು. ಪರಿಣಾಮ ರನ್​ ಗತಿಯಲ್ಲಿ ಇಳಿಕೆಯಾಗಿ ಮುಂಬೈ ಬೌಲರ್​ಗಳು ಮೇಲುಗೈ ಸಾಧಿಸಿದರು. ಪರಿಣಾಮ ಕೇವಲ 3 ರನ್​ಗಳಿಸಲು ಕಾರ್ತಿಕ್ 9 ಬಾಲ್​ಗಳನ್ನು ಎದುರಿಸಿದರು. ಅಲ್ಲದೆ ಮಾಲಿಂಗ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು.ನಾಯಕ ಔಟಾದ ಬೆನ್ನಲ್ಲೇ ಅಪಾಯಕಾರಿ ಆಟಗಾರ ರಸೆಲ್ ಸೊನ್ನೆ ಸುತ್ತುವ ಮೂಲಕ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಕೆಕೆಆರ್​ ಬ್ಯಾಟ್ಸ್​ಮನ್​ಗಳನ್ನು ಕಾಡುವಲ್ಲಿ ಮುಂಬೈ ಬೌಲರ್​ಗಳು ಯಶಸ್ವಿಯಾದರು. ಅದರಂತೆ ಎಚ್ಚರಿಕೆಯ ಆಟವಾಡಿದ ರಾಬಿನ್ ಉತ್ತಪ್ಪ ಹಾಗೂ ರಾಣಾ 5ನೇ ವಿಕೆಟ್​ಗೆ 47 ರನ್​ಗಳ ಜೊತೆಯಾಟದಲ್ಲಿ ಭಾಗಿಯಾದರು.

ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಯಾರ್ಕರ್​ ಮಾಂತ್ರಿಕ ಮಾಲಿಂಗ ಕೆಕೆರ್​ಗೆ ಐದನೇ ಶಾಕ್ ನೀಡಿದರು. 26 ರನ್​ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಣಾರ ವಿಕೆಟ್​ ಪಡೆಯುವಲ್ಲಿ ಲಸಿತ್ ಮಾಲಿಂಗ ಯಶಸ್ವಿಯಾದರು.

ಮತ್ತೊಂದೆಡೆ 47 ಎಸೆತಗಳಲ್ಲಿ 40 ರನ್​ ಬಾರಿಸಿದ್ದ ಉತ್ತಪ್ಪ 20ನೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್​ ಏಳು ವಿಕೆಟ್ ನಷ್ಟಕ್ಕೆ 133 ರನ್​ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಇಂಡಿಯನ್ಸ್ ಪರ ಉತ್ತಮ ದಾಳಿ ಸಂಘಟಿಸಿದ ಮಾಲಿಂಗ 3 ಹಾಗೂ ಬುಮ್ರಾ ಹಾಗೂ ಪಾಂಡ್ಯ 2 ಎರಡು ವಿಕೆಟ್​ಗಳನ್ನು ಪಡೆದು ಮಿಂಚಿದರು.

ಇದನ್ನೂ ಓದಿ: VIDEO: ಭರ್ಜರಿ ದಾಖಲೆಯೊಂದಿಗೆ ಐಪಿಎಲ್​ಗೆ ವಿದಾಯ ಹೇಳಿದ ಕನ್ನಡಿಗ ರಾಹುಲ್

134 ರನ್​​​ಗಳ ಸುಲಭ ಗುರಿ ಬೆನ್ನಟ್ಟಿದ ಮುಂಬೈಗೆ ಓಪನರ್​ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಭರ್ಜರಿ ಆರಂಭ ಒದಗಿಸಿದರು. ಡಿಕಾಕ್ ಆರ್ಭಟಿಸಿದರೆ, ರೋಹಿತ್ ಉತ್ತಮ ಸಾತ್ ನೀಡಿದರು. ಮೊದಲ ವಿಕೆಟ್​ಗೆ ಈ ಜೋಡಿ 46 ರನ್​ಗಳ ಕಾಣಿಕೆ ನೀಡಿತು. ಡಿಕಾಕ್ 23 ಎಸೆತಗಳಲ್ಲಿ 3 ಸಿಕ್ಸರ್, 1 ಬೌಂಡರಿ ಬಾರಿಸಿ 30 ರನ್​ಗೆ ಔಟ್ ಆದರು.

ಬಳಿಕ ರೋಹಿತ್ ಜೊತೆಯಾದ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಅಂತೆಯ ತಂಡಕ್ಕೆ ಗೆಲುವು ತಂದಿಟ್ಟರು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಇವರಿಬ್ಬರು 16.1 ಓವರ್​​​ಗಳಲ್ಲೆ ಜಯ ಸಾಧಿಸಲುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ 48 ಎಸೆತಗಳಲ್ಲಿ ಅಜೇಯ 55 ಹಾಗೂ ಸೂರ್ಯಕುಮಾರ್ 27 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸಿದರು. ಕೆಕೆಆರ್ ಪರ ಪ್ರಸಿದ್ಧ್​ ಕೃಷ್ಣ 1 ವಿಕೆಟ್ ಪಡೆದರು.

9 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರೆ, ಸೋತ ಕೆಕೆಆರ್ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ಕ್ವಾಲಿಫೈಯರ್ ಪಂದ್ಯ ಮೇ. 7 ರಂದು ನಡೆಯಲಿದ್ದು, ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​​ ತಂಡ ಮುಖಾಮುಖಿ ಆಗಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಅಂತೆಯೆ ಎಲಿಮಿನೇಟರ್ ಪಂದ್ಯ ಮೇ. 8 ರಂದು ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ಸೆಣೆಸಾಟ ನಡೆಸಲಿದೆ.

 

First published: May 5, 2019, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories