HOME » NEWS » Sports » CRICKET IPL 2019 MI LOST MATCH AGAINST CSK AND MS DHONI SAID FAILURE OF BATS MAN IS THE REASON FOR LOOSING THE MATCH

IPL 2019: ಕೂಲ್ ಕ್ಯಾಪ್ಟನ್​​​ನನ್ನೇ ರೊಚ್ಚಿಗೆಬ್ಬಿಸಿದ ಹಿಟ್​ಮ್ಯಾನ್​; ಸಿಡಿದೆದ್ದ ಧೋನಿ ಹೇಳಿದ್ದೇನು?

IPL 2019, MI vs CSK: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ಲೆಕ್ಕಾಚಾರಗಳೆಲ್ಲಾ ಆರಂಭದಲ್ಲೇ  ತಲೆಕೆಳಗಾಗಿ ಮಾಡಿದ ಹಿಟ್​ಮ್ಯಾನ್ ಟೀಂ, ಸ್ಪಿನ್​  ಅಸ್ತ್ರದಿಂದಲೇ ಚಿದಂಬರಂ ಸ್ಟೇಡಿಯಂ ರಹಸ್ಯ ಅರಿತಿದ್ದ ಸಿಎಸ್​ಕೆ ಎದುರಾಳಿ ಸ್ಪಿನ್ನರ್​ಗಳ ದಾಳಿಗೆ ತತ್ತರಿಸಿ ಹೋಯಿತು.

Vinay Bhat | news18
Updated:May 8, 2019, 3:21 PM IST
IPL 2019: ಕೂಲ್ ಕ್ಯಾಪ್ಟನ್​​​ನನ್ನೇ ರೊಚ್ಚಿಗೆಬ್ಬಿಸಿದ ಹಿಟ್​ಮ್ಯಾನ್​; ಸಿಡಿದೆದ್ದ ಧೋನಿ ಹೇಳಿದ್ದೇನು?
ಇಲ್ಲಿ ಗೆಲುವಿನ ಪರ್ಸೆಂಟೇಜ್ ಲೆಕ್ಕಚಾರದಲ್ಲಿ ಐಪಿಎಲ್​ನ ಅತ್ಯುತ್ತಮ ನಾಯಕರ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಶೇ. 60 ಪಂದ್ಯಗಳನ್ನು ಗೆದ್ದಿದ್ದಾರೆ.
  • News18
  • Last Updated: May 8, 2019, 3:21 PM IST
  • Share this:
ಚೆನ್ನೈ (ಮೇ. 08): ಮೂರು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಐಪಿಎಲ್​ 12ನೇ ಆವೃತ್ತಿಯಲ್ಲಿ​​​ ಫೈನಲ್​ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನ ಅವರದ್ದೇ ನೆಲದಲ್ಲಿ ಬಗ್ಗು ಬಡಿದ ರೋಹಿತ್​ ಟೀಂ​ ಸುಲಭವಾಗಿ ಫೈನಲ್​​​ ಪ್ರವೇಶಿಸಿದೆ. ಅತ್ತ ಹಾಲಿ ಚಾಂಪಿಯನ್​ ಸಿಎಸ್​ಕೆ ತವರಲ್ಲೇ ಬ್ಯಾಟಿಂಗ್ ವೈಫಲ್ಯ ಕಂಡು ಭಾರೀ ಅವಮಾನ ಎದುರಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ಲೆಕ್ಕಾಚಾರಗಳೆಲ್ಲಾ ಆರಂಭದಲ್ಲೇ  ತಲೆಕೆಳಗಾಗಿ ಮಾಡಿದ ಹಿಟ್​ಮ್ಯಾನ್ ಟೀಂ, ಸ್ಪಿನ್​  ಅಸ್ತ್ರದಿಂದಲೇ ಚಿದಂಬರಂ ಸ್ಟೇಡಿಯಂ ರಹಸ್ಯ ಅರಿತಿದ್ದ ಸಿಎಸ್​ಕೆ ಎದುರಾಳಿ ಸ್ಪಿನ್ನರ್​ಗಳ ದಾಳಿಗೆ ತತ್ತರಿಸಿ ಹೋಯಿತು.

ಮುಂಬೈ ಯಂಗ್ ಸ್ಪಿನ್ನರ್​​ ರಾಹುಲ್​ ಚಹಾರ್ ಹಾಗೂ, ಜಯಂತ್ ಯಾದವ್​ ಸ್ಪಿನ್​ ದಾಳಿಗೆ ತತ್ತರಿಸಿದ ಸಿಎಸ್​ಕೆ ಓಪನರ್​ಗಳು​ ಪವರ್​ಪ್ಲೇ ಓವರ್​​​ಗಳಲ್ಲೇ ​ ಪೆವಿಲಿಯನ್ ಸೇರಿಬಿಟ್ಟರು. ಮೊದಲಿಗೆ ಫಾಫ್ ಡುಪ್ಲೆಸಿಸ್​​ ಔಟಾದ ಬೆನ್ನಲ್ಲೇ ಸುರೇಶ್​ ರೈನಾ ವಿಕೆಟ್ ಒಪ್ಪಿಸಿದರು. ಶೇನ್ ವ್ಯಾಟ್ಸನ್​ ಮತ್ತೊಮ್ಮೆ ಫ್ಲಾಪ್ ಶೋ ತೋರಿದರು. ನಂತರದಲ್ಲಿ 4ನೇ ವಿಕೆಟ್​ಗೆ ಜೊತೆಯಾದ ಮುರಳಿ ವಿಜಯ್ ಹಾಗೂ ನಾಯಕ ಧೋನಿ ಕುಸಿದ ತಂಡಕ್ಕೆ ಆಧಾರವಾದರು.

ಇದನ್ನೂ ಓದಿ: ಜೀವಾಳನ್ನು ಅಪಹರಿಸಲಿದ್ದೇನೆ…ಟೀಮ್ ಇಂಡಿಯಾ ಮಾಜಿ ನಾಯಕ ಧೋನಿಗೆ ಹೀಗೊಂದು ಎಚ್ಚರಿಕೆ ನೀಡಿದ ಆ ವ್ಯಕ್ತಿ ಯಾರು..?

ತನ್ನ ಪಿಚ್​​ನಲ್ಲೇ ರನ್​ಗಳಿಸಲು ತಡಬಡಾಯಿಸಿದ ಚೆನ್ನೈ 4 ವಿಕೆಟ್​ ಕಳೆದುಕೊಂಡು 20 ಓವರ್​​ಗಳಲ್ಲಿ ಗಳಿಸಿದ್ದು 131ರನ್​ಗಳು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರಂಭವೂ ಉತ್ತಮವಾಗಿರಲಿಲ್ಲ. ರೋಹಿತ್​, ಕ್ವಿಂಟನ್ ಡಿ ಕಾಕ್​ ಸಿಂಗಲ್​ ಡಿಜಿಟ್​​ಗೆ ಔಟಾದರು. ಆದರೆ, 4ನೇ ವಿಕೆಟ್​ಗೆ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಇಶನ್ ಕಿಶನ್​ ತಂಡವನ್ನ ಗೆಲುವಿನ ದಡ ತಲುಪಿಸಿದರು. ಅದರಲ್ಲೂ ಸೂರ್ಯಕುಮಾರ್  ಅಜೇಯ 71ರನ್​ ಸಿಡಿಸಿ ತಂಡವನ್ನ ಫೈನಲ್​ಗೆ ಕೊಂಡೊಯ್ಯುವನ್ನು ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನ ಮೂಲಕ ಮುಂಬೈ 5ನೇ ಬಾರಿಗೆ ಐಪಿಎಲ್​ ಫೈನಲ್​ ಪ್ರವೇಶಿಸಿದೆ.

ಇನ್ನು ಮುಂಬೈ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಅವಕಾಶವಿದ್ದು, ಇಂದು ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ 2ನೇ ಕ್ವಾಲಿಫೈಯರ್​ ಪಂದ್ಯವನ್ನಾಡಲಿದೆ. ಆ ಪಂದ್ಯದಲ್ಲಿ ಗೆದ್ದರೆ ಫೈನಲ್​ ಪ್ರವೇಶಿಸಬಹುದಾಗಿದೆ. ಎಲಿಮಿನೇಟರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಇಂದು ಕಾದಾಟ ನಡೆಸಲಿವೆ.

ಇದನ್ನೂ ಓದಿ: ಬೂಮ್ರಾ ನೋ ಬಾಲ್​ ಎಸೆತದಲ್ಲಿ ಧೋನಿ ಕೈಯಿಂದ ಜಾರಿದ ಬ್ಯಾಟ್​ಪಂದ್ಯ ಮುಗಿದ ಬಳಿಕ ತಂಡದ ಕಳಪೆ ಬ್ಯಾಟಿಂಗ್​​ ಪ್ರದರ್ಶನದ ಬಗ್ಗೆ ಧೋನಿ ರೊಚ್ಚಿಗೆದ್ದಿದ್ದು, ಬ್ಯಾಟ್ಸಮನ್​ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಟ್ಸ್​ಮನ್​ಗಳು ಕೆಲವೊಂದು ಕೆಟ್ಟ ಹೊಡೆತಕ್ಕೆ ಮುಂದಾಗಿ ವಿಕೆಟ್​ ಕಳೆದುಕೊಳ್ಳುವಂತಾಯಿತು ಎಂದು ತಿಳಿಸಿರುವ ಧೋನಿ, ಸೋಲಿಗೆ ಬ್ಯಾಟ್ಸ್​ಮನ್​ಗಳೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

First published: May 8, 2019, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories