LIVE NOW

IPL 2019 Live Score, CSK vs SRH: ಸನ್​ರೈಸರ್ಸ್​ ವಿರುದ್ಧ ಸೂಪರ್​ ಕಿಂಗ್ಸ್​ಗೆ 6 ವಿಕೆಟ್​ಗಳ ಭರ್ಜರಿ ಜಯ

ಉಭಯ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಮಹೀ ಪಡೆ ಗೆದ್ದು ಬೀಗುವ ಮೂಲಕ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಮುಂದಿದೆ.

Kannada.news18.com | April 23, 2019, 11:38 PM IST
facebook Twitter google Linkedin
Last Updated April 23, 2019
auto-refresh

Highlights

ಚೆನ್ನೈ: ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 41ನೇ​ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ಸೆಣಸಲಿದೆ. ಧೋನಿ ನೇತೃತ್ವದ ಚೆನ್ನೈ ಈ ಪಂದ್ಯವನ್ನು ತನ್ನದಾಗಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿದೆ. ಇತ್ತ 4ನೇ ಸ್ಥಾನದಲ್ಲಿರುವ ಹೈದರಾಬಾದ್ ಪ್ಲೇ ಆಫ್​ ಸ್ಥಾನವನ್ನು ಸುಗಮಗೊಳಿಸುವ ಯೋಜನೆಯಲ್ಲಿದೆ.

ಉಭಯ ತಂಡಗಳು ಸಮಬಲದಿಂದ ಕೂಡಿದ್ದರೂ, ಕಳೆದೆರಡು ಪಂದ್ಯಗಳ ಸತತ ಸೋಲಿನಿಂದ ಚೆನ್ನೈ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿದೆ. ಇನ್ನು ಈ ಪಂದ್ಯ ತವರಿನಲ್ಲಿ ನಡೆಯುತ್ತಿರುವುದು ಹಳದಿ ಪಡೆಗೆ ಪ್ಲಸ್ ಪಾಯಿಂಟ್ ಆಗಲಿದೆ. ಚೆನ್ನೈ ತಂಡಕ್ಕೆ  ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಸತತ ವೈಫಲ್ಯದ ಚಿಂತೆಯಾದರೆ, ಮಧ್ಯಕ್ರಮಾಂಕದ ಆಟಗಾರರಿಂದ ರನ್​ ಸಿಡಿಯದಿರುವುದು ಸನ್​ರೈಸರ್ಸ್​ ತಂಡದ ತಲೆನೋವಿಗೆ ಕಾರಣವಾಗಿದೆ.

ಉಭಯ ತಂಡಗಳು 11 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಮಹೀ ಪಡೆ ಗೆದ್ದು ಬೀಗುವ ಮೂಲಕ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಮುಂದಿದೆ. ಇನ್ನು 3 ಪಂದ್ಯಗಳಲ್ಲಿ ಸನ್​ರೈಸರ್ಸ್​ ಗೆದ್ದಿದ್ದು, ಸೂಪರ್ ಕಿಂಗ್ಸ್​ ವಿರುದ್ಧದ ಕೊನೆಯ ಪಂದ್ಯದಲ್ಲಿ  ಹೈದರಾಬಾದ್​ ಗೆದ್ದಿರುವುದು ಆಟಗಾರರ ಆತ್ಮ ವಿಶ್ವಾಸ ಹೆಚ್ಚಿಸಿದೆ. ಇನ್ನು ಈ ಪಂದ್ಯಕ್ಕೆ ಎಸ್​ಆರ್​ಎಚ್ ನಾಯಕ ಕೇನ್​ ವಿಲಿಯಮ್ಸನ್ ಅಲಭ್ಯರಾಗಿದ್ದು, ತಂಡವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂತಿದೆ:
ಎಂಎಸ್ ಧೋನಿ (ನಾಯಕ) ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಟಿ ರಾಯುಡು, ಕೇದರ್ ಜಾಧವ್, , ಡ್ವೇನ್ ಬ್ರಾವೋ, ರವೀಂದ್ರ ಜಡೇಜ, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್ 

ಸನ್​ರೈಸರ್ಸ್​ ಹೈದರಾಬಾದ್ ತಂಡ ಇಂತಿದೆ:
ಭುವನೇಶ್ವರ ಕುಮಾರ್ (ನಾಯಕ), ಡೇವಿಡ್ ವಾರ್ನರ್, ಜಾನಿ ಬೇರ್​ಸ್ಟೊ, ಮನೀಷ್ ಪಾಂಡೆ, ವಿಜಯ್ ಶಂಕರ್, ಶಕೀಬ್ ಅಲ್ ಹಸನ್, ಯೂಸುಫ್ ಪಠಾಣ್, ದೀಪಕ್ ಹೂಡಾ, ರಶೀದ್ ಖಾನ್, ಸಂದೀಪ್ ಶರ್ಮಾ,  ಖಲೀಲ್ ಅಹ್ಮದ್ 
11:37 pm (IST)
Load More