SRH vs CSK: ಶೇನ್ ವಾಟ್ಸನ್ ಅಬ್ಬರ: ಸೂಪರ್​ ಕಿಂಗ್ಸ್​ ಮುಂದೆ ಮಂಕಾದ ಸನ್​ರೈಸರ್ಸ್

35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾಟ್ಸನ್ ಬಳಿಕ ಬ್ಯಾಟಿಂಗ್ ರೌದ್ರವತಾರವನ್ನು ಪ್ರದರ್ಶಿಸಿದರು

zahir | news18
Updated:April 24, 2019, 12:25 AM IST
SRH vs CSK: ಶೇನ್ ವಾಟ್ಸನ್ ಅಬ್ಬರ: ಸೂಪರ್​ ಕಿಂಗ್ಸ್​ ಮುಂದೆ ಮಂಕಾದ ಸನ್​ರೈಸರ್ಸ್
35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾಟ್ಸನ್ ಬಳಿಕ ಬ್ಯಾಟಿಂಗ್ ರೌದ್ರವತಾರವನ್ನು ಪ್ರದರ್ಶಿಸಿದರು
zahir | news18
Updated: April 24, 2019, 12:25 AM IST
ಐಪಿಎಲ್​ನ 41ನೇ ಪಂದ್ಯದಲ್ಲಿ ಶೇನ್ ವಾಟ್ಸನ್ ಸ್ಪೋಟಕ ಅರ್ಧಶತಕದ (96) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಮಹೀ ಪಡೆ ಈ ಮೂಲಕ ಜಯದ ಲಯಕ್ಕೆ ಮರಳಿದೆ.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಸನ್​ರೈಸರ್ಸ್​ ಆರಂಭ ಈ ಬಾರಿ ಉತ್ತಮವಾಗಿರಲಿಲ್ಲ. 2ನೇ ಓವರ್​ನಲ್ಲೇ ಸ್ಪೋಟಕ ಆಟಗಾರ ಜಾನಿ ಬೇರ್​ಸ್ಟೊ(0) ರನ್ನು ಪೆವಿಲಿಯನ್​ಗೆ ಕಳುಹಿಸಿ ಹರ್ಭಜನ್ ಸಿಂಗ್ ಆರಂಭಿಕ ಆಘಾತ ನೀಡಿದ್ದರು.

ಈ ಹಂತದಲ್ಲಿ ಡೇವಿಡ್ ವಾರ್ನರ್ ಜೊತೆಗೂಡಿದ ಮನೀಶ್ ಪಾಂಡೆ ಭರ್ಜರಿ ಇನಿಂಗ್ಸ್ ಕಟ್ಟಿದರು. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಪಾಂಡೆ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ವಾರ್ನರ್​ ಬಿರುಸಿನ ಆಟಕ್ಕೆ ಸಾಥ್ ನೀಡಿದ ಪಾಂಡೆ ಪವರ್​ ಪ್ಲೇನಲ್ಲೇ ತಂಡದ ಮೊತ್ತವನ್ನು 50ರ ಗಡಿದಾಟಿಸಿದ್ದರು.

ಹಾಗೆಯೇ ಚೆನ್ನೈ ಬೌಲರ್​ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ ಮೊದಲ 10 ಓವರ್​ಗೆ 91 ರನ್​ಗಳನ್ನು ಕಲೆಹಾಕಿತು. ಈ ವೇಳೆ ಪಾಂಡೆ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಮಿಂಚಿದರು. ಇದರ ಬೆನ್ನಲ್ಲೇ ವಾರ್ನರ್ ಸಹ ತಮ್ಮ ಖಾತೆಗೆ ಮತ್ತೊಂದು ಫಿಫ್ಟಿಯನ್ನು ಸೇರಿಸಿಕೊಂಡರು.

ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಹರ್ಭಜನ್​ರ ದೂಸ್ರಾ ಎಸೆತವನ್ನು ಗುರುತಿಸಲು ಎಡವಿದ ವಾರ್ನರ್ (57) ಧೋನಿಯ ಮಿಂಚಿನ ಸ್ಟಂಪ್​ಗೆ ಬಲಿಯಾದರು. ಅಷ್ಟರಲ್ಲಾಗಲೇ ವಾರ್ನರ್ ಮತ್ತು ಮನೀಷ್ ಪಾಂಡೆಯಿಂದ 125 ರನ್​ಗಳ ಭರ್ಜರಿ ಜೊತೆಯಾಟ ಮೂಡಿತ್ತು.

ವಾರ್ನರ್ ವಿಕೆಟ್ ಪಡೆಯುತ್ತಿದ್ದಂತೆ ಮೇಲುಗೈ ಸಾಧಿಸಿದ ಚೆನ್ನೈ ಬೌಲರ್​ಗಳು ರನ್​ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರು. ಒಂದೆಡೆ ಬಳಲಿದ್ದ ಮನೀಷ್ ಪಾಂಡೆಯ ಬ್ಯಾಟ್​ನಿಂದ ಬಿರುಸಿನ ಹೊಡೆತಗಳು ಕಡಿಮೆಯಾದವು. ಇತ್ತ ವಿಜಯ್ ಶಂಕರ್ ಒಂದಷ್ಟು ಪ್ರಯತ್ನ ನಡೆಸಿದರೂ 20 ಎಸೆತಗಳಲ್ಲಿ 26 ರನ್​ಗಳಿಸಲು ಮಾತ್ರ ಶಕ್ತರಾದರು. ಇನ್ನು ಅಜೇಯರಾಗುಳಿದ ಪಾಂಡೆ 49 ಎಸೆತಗಳಲ್ಲಿ 83 ರನ್​ಗಳಿಸಿದರು. ಇದರಲ್ಲಿ ಏಳು ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಒಳಗೊಂಡಿದ್ದವು. ಇದರ ಪರಿಣಾಮ ಸನ್​ರೈಸರ್ಸ್​ ಮೂರು ವಿಕೆಟ್ ನಷ್ಟಕ್ಕೆ 175 ರನ್​ಗಳಿಸಲಷ್ಟೇ ಶಕ್ತವಾಯಿತು.
Loading...

ಈ ಸವಾಲಿನ ಮೊತ್ತ ಬೆನ್ನಟ್ಟಿದ ಸೂಪರ್ ಕಿಂಗ್ಸ್ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಶೇನ್ ವಾಟ್ಸನ್ ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ರನ್​ಗಾಗಿ 11 ಎಸೆತಗಳನ್ನು ಎದುರಿಸಿದ್ದರು. ತಂಡದ ಮೊತ್ತ ಕೇವಲ 3 ರನ್​ ಆಗಿದ್ದಾಗ ದೀಪಕ್ ಹೂಡರ ರನೌಟ್​ಗೆ ಬಲಿಯಾದ ಫಾಫ್ ಡು ಪ್ಲೆಸಿಸ್ (1) ಸನ್​ರೈಸರ್ಸ್​ನ ಮೊದಲ ಯಶಸ್ಸಿಗೆ ಕಾರಣರಾದರು.

ಒನ್​ಡೌನ್ ಬಳಿಕ ಕ್ರೀಸಿಳಿದ ಸುರೇಶ್ ರೈನಾ ರನ್​ ಗತಿಯ ವೇಗವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಸುರೇಶ್ ರೈನಾ ಸಂದೀಪ್ ಶರ್ಮಾ ಓವರ್​ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್​ ಸೇರಿದಂತೆ 22 ರನ್​ಗಳನ್ನು ಚಚ್ಚಿದರು. ಇದರಿಂದಾಗಿ ಪವರ್​ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ಆರಂಭಿಕ ಆಘಾತದಿಂದ ಪಾರಾಗುವಂತಾಯಿತು.

ದ್ವಿತೀಯ ವಿಕೆಟ್​ಗೆ 77 ರನ್​ಗಳ ಜೊತೆಯಾಟ ನೀಡಿದ ರೈನಾ-ವಾಟ್ಸನ್ ಜೋಡಿ ಸಿಎಸ್​ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ವೇಳೆ ರಶೀದ್ ಖಾನ್​ ಗೂಗ್ಲಿಗೆ  ರೈನಾ(38) ಸ್ಟಂಪ್ ಔಟ್ ಆಗುವ ಮೂಲಕ ಹೊರ ನಡೆದರು.

ಇನ್ನು ನಿಧಾನಗತಿಯಲ್ಲಿ ಬ್ಯಾಟ್​ ಬೀಸುತ್ತಿದ್ದ ವಾಟ್ಸನ್ ಅದಾಗಲೇ ಫಾರ್ಮ್​ಗೆ ಮರಳಿದ್ದರು. ಈ ಹಂತದಲ್ಲಿ 60 ಎಸೆತಗಳಲ್ಲಿ ಗುರಿ ಮುಟ್ಟಲು 96 ರನ್​ಗಳ ಬೇಕಾಗಿತ್ತು. ಈ ವೇಳೆ ಲೀಲಾಜಾಲವಾಗಿ ಬ್ಯಾಟ್ ಬೀಸಿದ ವಾಟ್ಸನ್ ಸನ್​ರೈಸರ್ಸ್​ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು.

35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾಟ್ಸನ್ ಬಳಿಕ ಬ್ಯಾಟಿಂಗ್ ರೌದ್ರವತಾರವನ್ನು ಪ್ರದರ್ಶಿಸಿದರು. ಒಂದೆಡೆ ಅಂಬಟಿ ರಾಯುಡು ಒಂದಂಕಿ ರನ್​ಗಳನ್ನು ಕಲೆ ಹಾಕುತ್ತಿದ್ದರೆ, ಇತ್ತ ವಾಟ್ಸನ್​ ಚೆಂಡನ್ನು ಸ್ಟೇಡಿಯಂನತ್ತ ನುಗ್ಗಿಸುವ ಕಾಯಕಕ್ಕೆ ಕೈ ಹಾಕಿದ್ದರು.

53 ಎಸೆತಗಳನ್ನು ಎದುರಿಸಿದ ವಾಟ್ಸನ್ 6 ಭರ್ಜರಿ ಸಿಕ್ಸರ್ ಹಾಗೂ 9 ಆಕರ್ಷಕ ಬೌಂಡರಿಗಳನ್ನು ಸಿಡಿಸಿದರು. ಆದರೆ ಗೆಲುವಿನತ್ತ ತಂಡವನ್ನು ಮುನ್ನಡೆಸಿದ್ದ ವಾಟ್ಸನ್ ಶತಕದಂಚಿನಲ್ಲಿ ಎಡವಿದರು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಕೀಪರ್ ಜಾನಿ ಬೇರ್​ಸ್ಟೊ ಹಿಡಿದ ಅತ್ಯದ್ಭುತ ಕ್ಯಾಚ್​ಗೆ ವಾಟ್ಸನ್ ಬಲಿಯಾದರು. ಅದರಂತೆ 96 ರನ್​ಗಳಿಸಿದ್ದ ವಾಟ್ಸನ್ ಭಾರದ ಹೆಜ್ಜೆಯೊಂದಿಗೆ ಪೆವಿಲಿಯನ್​ಗೆ ಮರಳಿದರು.

ಅಂತಿಮ ಓವರ್‌ನಲ್ಲಿ ಚೆನ್ನೈಗೆ 9 ರನ್‌ಗಳ ಅವಶ್ಯಕತೆಯಿತ್ತು. ಆದರೆ ಸಂದೀಪ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಕೇದರ್ ಜಾಧವ್ ತಂಡವನ್ನು ಗೆಲುವನ್ನು ಖಾತ್ರಿಪಡಿಸಿದರು. ಅಂತಿಮವಾಗಿ ಇನ್ನು ಒಂದು ಬಾಲ್ ಉಳಿದಿರುವಂತೆ ಚೆನ್ನೈ ಸೂಪರ್ ಕಿಂಗ್ಸ್​ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. 53 ಎಸೆತಗಳಲ್ಲಿ ಬಿರುಸಿನ 96 ರನ್​ಗಳನ್ನು ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶೇನ್​ ವಾಟ್ಸನ್​ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

First published:April 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626