KXIP vs RR: ಹ್ಯಾಟ್ರಿಕ್ ಸೋಲಿನಿಂದ ಪಾರಾದ ಪಂಜಾಬ್; ರಾಜಸ್ಥಾನಕ್ಕೆ ಮತ್ತೆ ಹಿನ್ನಡೆ

ನಾಯಕ ಅಜಿಂಕ್ಯ ರಹಾನೆಗೆ ಆಸ್ಟನ್ ಟರ್ನರ್(0) ಹಾಗೂ ಜೋಫ್ರಾ ಆರ್ಚೆರ್(1) ಸಾತ್ ನೀಡಲಿಲ್ಲ. ಪರಿಣಾಮ ಆರ್​ಆರ್​ ಗೆಲುವು ತುಂಬಾ ಕಠಿಣವಾಯಿತು. ಕೊನೆ ಹಂತದಲ್ಲಿ ಸ್ಟುವರ್ಟ್​ ಬಿನ್ನಿ ಹಾಗೂ ರಹಾನೆ ಗೆಲುವಿಗಾಗಿ ಹೋರಾಟ ನಡೆಸಿದಾರು ಯಶಸ್ವಿಯಾಗಲಿಲ್ಲ.

zahir | news18
Updated:April 16, 2019, 11:57 PM IST
KXIP vs RR: ಹ್ಯಾಟ್ರಿಕ್ ಸೋಲಿನಿಂದ ಪಾರಾದ ಪಂಜಾಬ್; ರಾಜಸ್ಥಾನಕ್ಕೆ ಮತ್ತೆ ಹಿನ್ನಡೆ
ವಿಕೆಟ್ ಕಿತ್ತ ಸಂಭ್ರಮದಲ್ಲಿ ಆರ್ ಅಶ್ವಿನ್
zahir | news18
Updated: April 16, 2019, 11:57 PM IST
ಮೊಹಾಲಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್​​ ವಿರುದ್ಧದ ಇಂದಿನ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 12 ರನ್​ಗಳ ಜಯ ಸಾಧಿಸಿದೆ. ಮಂಕಡಿಂಗ್ ವಿಚಾರದಲ್ಲಿ ಸೋಲುಣಿಸಬೇಕೆಂದು ಪಣತೊಟ್ಟಿದ್ದ ರಹಾನೆ ಪಡೆಗೆ ಮತ್ತೆ ಹಿನ್ನಡೆಯಾಗಿದೆ.

ಪಂಜಾಬ್ ನೀಡಿದ್ದ 183 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ರಾಜಸ್ಥಾನಕ್ಕೆ ಜಾಸ್ ಬಟ್ಲರ್ ಹಾಗೂ ರಾಹುಲ್ ತ್ರಿಪಾಠಿ ಸ್ಪೋಟಕ ಆರಂಭ ಒದಗಿಸಿದರು. 17 ಎಸೆತಗಳಲ್ಲಿ 1 ಬೌಂಡರಿ 2 ಸಿಕ್ಸರ್​ ಚಚ್ಚಿ ಬಿರುಸಿನ ಬ್ಯಾಟಿಂಗ್ ನಡೆಸಿದ ಬಟ್ಲರ್ ಅಷ್ಟೇ ವೇಗವಾಗಿ ಔಟ್ ಆದರು. 2ನೇ ವಿಕೆಟ್​ಗೆ ತ್ರಿಪಾಠಿ ಜೊತೆಯಾದ ಸಂಜು ಸ್ಯಾಮ್ಸನ್ ಅದೆ ಸ್ಫೋಟಕ ಆಟ ಮುಂದುವರಿಸಿದರು. ಉತ್ತಮ ಆಟ ಪ್ರದರ್ಶಿಸಿದ ಈ ಜೋಡಿ 59 ರನ್​ಗಳ ಕಾಣಿಕೆ ನೀಡಿತು. 27 ರನ್ ಗಳಿಸಿರುವಾಗ ಸಂಜು ಅಶ್ವಿನ್ ಎಸೆತದಲ್ಲಿ ಬೌಲ್ಡ್​ ಆದರೆ, ಇತ್ತ ಅರ್ಧಶತಕ ಬಾರಿಸಿ ತ್ರಿಪಾಠಿ ಕೂಡ ನಿರ್ಗಮಿಸಿದರು.

ಬಳಿಕ ಬಂದ ನಾಯಕ ಅಜಿಂಕ್ಯ ರಹಾನೆಗೆ ಆಸ್ಟನ್ ಟರ್ನರ್(0) ಹಾಗೂ ಜೋಫ್ರಾ ಆರ್ಚೆರ್(1) ಸಾತ್ ನೀಡಲಿಲ್ಲ. ಪರಿಣಾಮ ಆರ್​ಆರ್​ ಗೆಲುವು ತುಂಬಾ ಕಠಿಣವಾಯಿತು. ಕೊನೆ ಹಂತದಲ್ಲಿ ಸ್ಟುವರ್ಟ್​ ಬಿನ್ನಿ ಹಾಗೂ ರಹಾನೆ ಗೆಲುವಿಗಾಗಿ ಹೋರಾಟ ನಡೆಸಿದಾರು ಯಶಸ್ವಿಯಾಗಲಿಲ್ಲ. ರಹಾನೆ(26) ಕೊನೆ ಹಂತದಲ್ಲಿ ನಿರ್ಗಮಿಸಿದರೆ, 11 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸ್​ ಸಿಡಿಸಿ 33 ರನ್ ಗಳಿಸಿ ಬಿನ್ನಿ ಅಜೇಯರಾಗಿ ಉಳಿದರು. ಅಂತಿಮವಾಗಿ ರಾಜಸ್ಥಾನ್ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ಪಂಜಾಬ್ ಪರ ಅರ್ಷದೀಪ್ ಸಿಂಗ್, ಆರ್ ಅಶ್ವಿನ್ ಹಾಗೂ ಶಮಿ ತಲಾ 2 ವಿಕೆಟ್ ಕಿತ್ತು ಮಿಂಚಿದರು.

ಪಂಜಾಬ್ 12 ರನ್​ಗಳ ಗೆಲುವಿನೊಂದಿಗೆ ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ 4ನೇ ಸ್ಥಾನಕ್ಕೇರಿದರೆ ರಾಜಸ್ಥಾನ್ 7ನೇ ಸ್ಥಾನದಲ್ಲೇ ಉಳಿದುಕೊಂಡಿದೆ.

IPL 2019 Live Score, KXIP vs RR: ಸೇಡು ತೀರಿಸಿಕೊಳ್ಳುವಲ್ಲಿ ರಾಜಸ್ಥಾನ್ ವಿಫಲ; ಪಂಜಾಬ್​ಗೆ 12 ರನ್​ಗಳ ಜಯ

ಇದಕ್ಕೂ ಮುನ್ನ ಟಾಸ್​ ಗೆದ್ದ ರಾಯಲ್ಸ್ ನಾಯಕ ರಹಾನೆ ಅಶ್ವಿನ್​ ಪಡೆಗೆ ಬ್ಯಾಟಿಂಗ್ ಅವಕಾಶ ನೀಡಿದರು. ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ನಿಧಾನ ಗತಿಯಲ್ಲಿ ಆರಂಭವಾಗಿದ್ದ ಬ್ಯಾಟಿಂಗ್​​ಗೆ ಬಿರುಸಿನ ವೇಗವನ್ನು ನೀಡಲು ಹೋದ ಗೇಲ್ 22 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್​ ಒಳಗೊಂಡ 30 ರನ್​ಗಳಿಸಿ ಮೊದಲ ವಿಕೆಟ್ ಆಗಿ ಹೊರ ನಡೆದರು.
Loading...

ಬಳಿಕ ಕ್ರೀಸಿಗಿಳಿದ ಮಯಾಂಕ್ ಅಗರ್ವಾಲ್ (26) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೊಂದೆಡೆ ಎಚ್ಚರಿಕೆಯ ಆಟಕ್ಕೆ ಹೊತ್ತು ನೀಡಿದ ಕನ್ನಡಿಗ ರಾಹುಲ್ ಇನಿಂಗ್ಸ್ ಕಟ್ಟುವ ಪ್ರಯತ್ನ ಕೈ ಹಾಕಿದರು. ಅದರಂತೆ ಡೇವಿಡ್ ಮಿಲ್ಲರ್ ಜತೆಗೂಡಿ ಮೊದಲ 10 ಓವರ್​ ಮುಕ್ತಾಯದ ವೇಳೆಗೆ 2 ವಿಕೆಟ್ ನಷ್ಟಕ್ಕೆ 75 ರನ್​ ಸೇರಿಸಿದರು.

ಈ ವೇಳೆ ಸ್ಪೋಟಕ ಆಟಕ್ಕೆ ಒತ್ತು ನೀಡಿದ ಮಿಲ್ಲರ್-ರಾಹುಲ್ ಮೈದಾನ ಎಲ್ಲ ಭಾಗಗಳಿಗೂ ಚೆಂಡನ್ನು ತಲುಪಿಸುವ ಯತ್ನ ಮಾಡಿದರು. ಉತ್ತಮ ಜತೆಯಾಟದೊಂದಿಗೆ ರಾಹುಲ್ ಆಕರ್ಷಕ ಅರ್ಧಶತಕ ಸಿಡಿಸಿದರು. 45 ಎಸೆತಗಳಲ್ಲಿ ಎರಡು ಸಿಕ್ಸರ್, ಮೂರು ಬೌಂಡರಿ ಬಾರಿಸಿದ ರಾಹುಲ್ ಮತ್ತೆರಡು ಎಸೆತಗಳನ್ನು ಎದುರಿಸಿ 52 ರನ್​ಗೆ ಬ್ಯಾಟ್ ಕೆಳಗಿಟ್ಟರು.

ರಾಹುಲ್ ಔಟಾದರೂ ರನ್​ಗತಿ ಕುಗ್ಗದಂತೆ ನೋಡಿಕೊಂಡ ಡೇವಿಡ್ ಮಿಲ್ಲರ್ ರಾಜಸ್ಥಾನ್ ಬೌಲರ್​ಗಳನ್ನು ಮನಸೊ ಇಚ್ಛೇ ದಂಡಿಸಿದರು. ಆದರೆ ಈ ಹಂತದಲ್ಲಿ ಇತರೆ ಆಟಗಾರರಿಂದ ಉತ್ತಮ ಕಾಣಿಕೆ ಹೊರ ಬರಲಿಲ್ಲ. ಪೂರನ್​ (5) ರನ್​ಗಳಿಸಿ ಹೊರ ನಡೆದರೆ, ಮನ್​ದೀಪ್ ಸಿಂಗ್ ಸೊನ್ನೆ ಸುತ್ತಿ ಔಟಾದರು.

ಅಂತಿಮ ಓವರ್​ ವೇಳೆ ಕ್ರೀಸ್​ಗಾಮಿಸಿದ ನಾಯಕ ಅಶ್ವಿನ್ ಭರ್ಜರಿ ಹೊಡೆತಗಳ ಮೂಲಕ ಗಮನ ಸೆಳೆದರು. 27 ಎಸೆತಗಳಲ್ಲಿ 40 ರನ್​ಗಳಿಸಿ ಮಿಲ್ಲರ್ ವಿಕೆಟ್ ಒಪ್ಪಿಸಿದರೆ, ಅಶ್ವಿನ್ ಕೇವಲ 4 ಎಸೆತಗಳಲ್ಲಿ 17 ರನ್​ ಬಾರಿಸಿ ಮಿಂಚಿದರು. ಇದರಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಒಳಗೊಂಡಿತ್ತು. ಕೊನೆಯಲ್ಲಿ ನಾಯಕನ ಉಪಯುಕ್ತ ಕಾಣಿಕೆಯಿಂದ ಪಂಜಾಬ್ 182 ರನ್​ಗಳನ್ನು ಪೇರಿಸಿತು. ಇನ್ನು ಉತ್ತಮ ದಾಳಿ ನಡೆಸಿದ ಜೋಫ್ರಾ ಆರ್ಚರ್ 4 ಓವರ್​ನಲ್ಲಿ ಕೇವಲ 15 ರನ್​ ನೀಡಿ ಪ್ರಮುಖ 3 ವಿಕೆಟ್​ಗಳನ್ನು ಪಡೆದು ಯಶಸ್ವಿ ಬೌಲರ್​ ಎನಿಸಿಕೊಂಡರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ನಾಯಕ ಅಶ್ವಿನ್​ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

 

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626