HOME » NEWS » Sports » CRICKET IPL 2019 HARDIK PANDYA CALLS MS DHONI HIS INSPIRATION FRIEND BROTHER LEGEND

ಧೋನಿ ನನ್ನ ಸ್ಫೂರ್ತಿ, ಗೆಳೆಯ, ಸೋದರ, ಲೆಜೆಂಡ್; ಹಾರ್ದಿಕ್ ಹಂಚಿಕೊಂಡ ಫೋಟೋ ಭಾರೀ ವೈರಲ್

IPL 2019, MS Dhoni-Hardik Pandya: ಐಪಿಎಲ್​​ನಲ್ಲಿ ಬೇರೆ ತಂಡದಲ್ಲಿರುವ ಧೋನಿ ಹಾಗೂ ಹಾರ್ದಿಕ್ ಬೆಸ್ಟ್​ ಫಿನಿಶರ್​ಗಳಾಗಿ ಗುರುತಿಸಿಕೊಂಡಿದ್ದು, ವಿಶ್ವಕಪ್​ನಲ್ಲಿ ಇವರ ಜೊತೆಯಾಟ ನೋಡಲು ಅಭಿಮಾನಿಗಳು ಎದುರುನೋಡುತ್ತಿದ್ದಾರೆ.

Vinay Bhat | news18
Updated:May 8, 2019, 4:58 PM IST
ಧೋನಿ ನನ್ನ ಸ್ಫೂರ್ತಿ, ಗೆಳೆಯ, ಸೋದರ, ಲೆಜೆಂಡ್; ಹಾರ್ದಿಕ್ ಹಂಚಿಕೊಂಡ ಫೋಟೋ ಭಾರೀ ವೈರಲ್
ಎಂಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ
  • News18
  • Last Updated: May 8, 2019, 4:58 PM IST
  • Share this:
ಬೆಂಗಳೂರು (ಮೇ. 08): ನಿನ್ನೆ ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್​​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ ಭರ್ಜರಿ ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಧೋನಿ ಪಡೆ ಸೋತಿರುವುದರಿಂದ ಇಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಮತ್ತೊಮ್ಮೆ ಹೋರಾಟ ನಡೆಸಲಿದೆ.

ಈ ಗೆಲುವಿನೊಂದಿಗೆ ಮುಂಬೈ 5ನೇ ಬಾರಿ ಐಪಿಎಲ್​​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ದಾಖಲೆ ಬರೆದಿದೆ. ಅಲ್ಲದೆ ಚೆನ್ನೈ ವಿರುದ್ಧ ನಾವೇ ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದೆ. ಲೀಗ್​ ಹಂತದಿಂದಲೂ ಮುಂಬೈ ವಿರುದ್ಧ ಒಂದೂ ಗೆಲುವನ್ನು ಕಾಣದ ಚೆನ್ನೈ, ಮತ್ತೊಮ್ಮೆ ಮಂಡಿ ಊರಿದೆ.

ಈ ಮಧ್ಯೆ ಪಂದ್ಯ ಮುಗಿದ ಬಳಿಕ ಎಂಎಸ್ ಧೋನಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪಾಂಡ್ಯ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: IPL 2019: ಮುಂದಿನ ಆವೃತ್ತಿಗೆ ಆರ್​ಸಿಬಿ ತಂಡದಲ್ಲಿರಲ್ಲ ಈ ಸ್ಟಾರ್ ಆಟಗಾರರು!

ಟ್ವಿಟ್ಟರ್​ನಲ್ಲಿ ಹಾರ್ದಿಕ್ ಅವರು ಧೋನಿ ಹಾಗೂ ತನ್ನ ಫೋಟೋವನ್ನು ಹಂಚಿಕೊಂಡು, 'ನನ್ನ ಸ್ಫೂರ್ತಿ, ನನ್ನ ಗೆಳೆಯ, ನನ್ನ ಸಹೋದರ, ನನ್ನ ಲೆಜೆಂಡ್' ಎಂದು ಬರೆದು ಧೋನಿಗೆ ಟ್ಯಾಗ್ ಮಾಡಿದ್ದಾರೆ. ಹಾರ್ದಿಕ್ ಹಂಚಿಕೊಂಡಿರುವ ಈ ಫೋಟೋಕ್ಕೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿವೆ.

 ಐಪಿಎಲ್​​ನಲ್ಲಿ ಸದ್ಯ ಬೇರೆಬೇರೆ ತಂಡದಲ್ಲಿರುವ ಇಬ್ಬರೂ ಆಟಗಾರರು, ಮುಂಬರುವ ವಿಶ್ವಕಪ್​ನಲ್ಲಿ ಒಂದೇ ತಂಡದಲ್ಲಿ ಆಡಲಿದ್ದಾರೆ. ಧೋನಿ ಹಾಗೂ ಹಾರ್ದಿಕ್ ಬೆಸ್ಟ್​ ಫಿನಿಶರ್​ಗಳಾಗಿ ಗುರುತಿಸಿಕೊಂಡಿದ್ದು, ವಿಶ್ವಕಪ್​ನಲ್ಲಿ ಇವರ ಜೊತೆಯಾಟ ನೋಡಲು ಅಭಿಮಾನಿಗಳು ಎದುರುನೋಡುತ್ತಿದ್ದಾರೆ.

First published: May 8, 2019, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories