IPL 2019: ಭಾವನಾತ್ಮಕ ಮಾತುಗಳೊಂದಿಗೆ ಐಪಿಎಲ್​​​ಗೆ ಗುಡ್​ಬೈ ಹೇಳಿದ ಡೇವಿಡ್ ವಾರ್ನರ್!

David Warner: ಕಳೆದೊಂದು ವರ್ಷವನ್ನು ನೋವಿನಲ್ಲಿ ಕಳೆದ ವಾರ್ನರ್​​​ಗೆ ಐಪಿಎಲ್ 12 ಆವೃತ್ತಿ ತುಂಬಾ ಭಾವನಾತ್ಮಕವಾಗಿತ್ತು. ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಡೇವಿಡ್ ವಾರ್ನರ್ ಇದೀಗ ಆಸ್ಟ್ರೇಲಿಯಾಗೆ ಮರಳಿದ್ದಾರೆ.

Vinay Bhat | news18
Updated:May 1, 2019, 4:15 PM IST
IPL 2019: ಭಾವನಾತ್ಮಕ ಮಾತುಗಳೊಂದಿಗೆ ಐಪಿಎಲ್​​​ಗೆ ಗುಡ್​ಬೈ ಹೇಳಿದ ಡೇವಿಡ್ ವಾರ್ನರ್!
ಡೇವಿಡ್ ವಾರ್ನರ್
  • News18
  • Last Updated: May 1, 2019, 4:15 PM IST
  • Share this:
ತಾನಾಡಿದ ಕೊನೆಯ ಪಂದ್ಯ ಗೆಲ್ಲಿಸಿ,ಪ್ರಸಕ್ತ ಸಾಲಿನ ಐಪಿಎಲ್​ ಆವೃತ್ತಿಗೆ ಗುಡ್​ಬೈ ಹೇಳಿದ ಡೇವಿಡ್ ವಾರ್ನರ್​ ಭಾವನಾತ್ಮಕ ಸಂದೇಶದೊಂದಿಗೆ ತವರಿಗೆ ಮರಳಿದ್ದಾರೆ. 12ನೇ ಐಪಿಎಲ್ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ವಾರ್ನರ್​​​ ತನ್ನ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಪ್ರಸಕ್ತ ಐಪಿಎಲ್ ಸೀಸನ್​ನಲ್ಲಿ ವಾರ್ನರ್​ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲನೇ ಪಂದ್ಯದಿಂದಲೇ ಬೌಲರ್​​ಗಳನ್ನ ದಂಡಿಸಿದ ಆಸೀಸ್ ಸೂಪರ್​ಸ್ಟಾರ್​ ಬೌಂಡರಿ, ಸಿಕ್ಸರ್​ಗಳ ಮಳೆಯನ್ನೇ ಸುರಿಸಿದರು. ಇದೀಗ ಟೂರ್ನಮೆಂಟ್​​ ಕೊನೆಯ ಹಂತದಲ್ಲಿ ತವರಿಗೆ ಮರಳಿರುವ ವಾರ್ನರ್​ ಈಗಲೂ ಗರಿಷ್ಠ ರನ್ ಕಲೆಹಾಕಿದ ಆಟಗಾರರಾಗಿದ್ದಾರೆ.

ವಾರ್ನರ್​​ ಬ್ಯಾಟಿಂಗ್ ವೈಭವ​​​:






















ಪಂದ್ಯ12
ರನ್ 692
ಸರಾಸರಿ 69.20
ಸ್ಟ್ರೈಕ್​ರೇಟ್​ 143.86
50/100 8/1

ಐಪಿಎಲ್​ 12ನೇ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿರುವ ವಾರ್ನರ್​ 69.20 ಬ್ಯಾಟಿಂಗ್ ಸರಾಸರಿಯಲ್ಲಿ ಭರ್ಜರಿ 692 ರನ್ ಕಲೆಹಾಕಿ ಆರೆಂಜ್ ಕ್ಯಾಪ್​ ತೊಟ್ಟಿದ್ದಾರೆ. 143ಕ್ಕಿಂತಲೂ ಹೆಚ್ಚಿನ ಸ್ಟ್ರೈಕ್​ರೇಟ್ ಹೊಂದಿರೋ ವಾರ್ನರ್​​ 8 ಹಾಫ್ ಸೆಂಚುರಿ, ಹಾಗೂ 1 ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ.

ಇದನ್ನೂ ಓದಿ: IPL 2019: ಮೊದಲ ಕ್ವಾಲಿಫೈಯರ್​​ನಲ್ಲಿ ಆಡಲು ಇಂದು ಚೆನ್ನೈ-ಡೆಲ್ಲಿ ನಡುವೆ ಹೋರಾಟ

ಡೇವಿಡ್​ ವಾರ್ನರ್​ ಚೆಂಡು ವಿರೂಪಗೊಳಿಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ, ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​​ನಿಂದ 1 ವರ್ಷ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿಷೇಧಕ್ಕೊಳಗಾಗಿದ್ದರು. ಅಷ್ಟೇ ಅಲ್ಲದೆ ಇಡೀ ಕ್ರಿಕೆಟ್​​ ಲೋಕದ ಟೀಕೆ ಎದುರಿಸಿದ್ದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಾರ್ನರ್ ಮತ್ತೆ ಐಪಿಎಲ್​​​ಗೆ ವಾಪಸ್ಸಾಗಿ ತನ್ನ ಹಳೆಯ ಬ್ಯಾಟಿಂಗ್ ವೈಭವವನ್ನೇ ಮುಂದುವರಿಸಿ ಸಾಮರ್ಥ್ಯ ಪ್ರದರ್ಶಿಸಿದರು. ಆ ಮೂಲಕ ಟೀಕಿಸಿದವರೇ ವಾರ್ನರ್​​​ ಬ್ಯಾಟಿಂಗ್​​ ನೋಡಿ ವಾವ್ ಅಂದಿದ್ದು ಮಾತ್ರ ಸುಳ್ಳಲ್ಲ.

ಇನ್ನು ಕಳೆದೊಂದು ವರ್ಷವನ್ನು ನೋವಿನಲ್ಲಿ ಕಳೆದ ವಾರ್ನರ್​​​ಗೆ ಐಪಿಎಲ್ 12 ಆವೃತ್ತಿ ತುಂಬಾ ಭಾವನಾತ್ಮಕವಾಗಿತ್ತು. ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಡೇವಿಡ್ ವಾರ್ನರ್ ಇದೀಗ ಆಸ್ಟ್ರೇಲಿಯಾಗೆ ಮರಳಿದ್ದಾರೆ. ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುವ ಸಲುವಾಗಿ ಆಸಿಸ್ ತಂಡ ಕೂಡಿಕೊಳ್ಳುವ ಉದ್ದೇಶದಿಂದ ವಾರ್ನರ್ ತವರಿಗೆ ಮರಳಿದ್ದು, ಭಾವನಾತ್ಮಕ ಸಂದೇಶದೊಂದಿಗೆ ಐಪಿಎಲ್​ಗೆ ಗುಡ್​ಬೈ ಹೇಳಿದ್ದಾರೆ.

 




ವಾರ್ನರ್​ ಭಾವನಾತ್ಮಕ ಸಂದೇಶ

 

ಸನ್​ರೈಸರ್ಸ್​ ಹೈದ್ರಾಬಾದ್​ ಕುಟುಂಬಕ್ಕೆ ಹಾಗೂ ಅವರ ಬೆಂಬಲಕ್ಕೆ ಎಷ್ಟು ಧನ್ಯವಾದ ಹೇಳಿದರು ಸಾಲದು. ನನ್ನ ಪ್ರಸಕ್ತ ಆವೃತ್ತಿ ಮಾತ್ರವಲ್ಲದೇ ಕಳೆದ ವರ್ಷವೂ ನನ್ನ ಬೆಂಬಲಕ್ಕೆ ನಿಂತ ಸನ್'ರೈಸರ್ಸ್ ಕುಟುಂಬಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ದೀರ್ಘಕಾಲದ ಕಾಯುವಿಕೆಯ ಬಳಿಕ ತಂಡವನ್ನು ಕೂಡಿಕೊಂಡರೂ ಅವಿಸ್ಮರಣೀಯ ಕ್ಷಣಗಳು ನನಗೆ ಸಿಕ್ಕವು. ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ ತಂಡದ ಮಾಲೀಕರಿಗೆ, ಸಹಾಯಕ ಸಿಬ್ಬಂದಿಗಳಿಗೆ, ಸಹ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಅನಂತ ವಂದನೆಗಳು. ಈ ಆವೃತ್ತಿಯನ್ನು ನಾನು ನಿಜಕ್ಕೂ ಆನಂದಿಸಿದೆ. ಉಳಿದ ಪಂದ್ಯಗಳಲ್ಲೂ ತಂಡಕ್ಕೆ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.


ಡೇವಿಡ್ ವಾರ್ನರ್​​, ಸನ್​ರೈಸರ್ಸ್​ ಹೈದರಾಬಾದ್​​​ ಆಟಗಾರ


ಇದು ಡೇವಿಡ್ ವಾರ್ನರ್ ತವರಿಗೆ ತೆರಳುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ತನ್ನ ಮನದಾಳದ ಮಾತು ಬಿಚ್ಚಿಟ್ಟ ವಿಚಾರ. ಕಳೆದ ಐಪಿಎಲ್​ ಆವೃತ್ತಿಯಲ್ಲಿ ಹೊರಬಿದ್ದಿದ್ದ ವಾರ್ನರ್ ಈ ಸೀಸನ್​ನಲ್ಲಿ ನೋವನ್ನೆಲ್ಲಾ ಮರೆತು ಮತ್ತೆ ತನ್ನ ಬ್ಯಾಟಿಂಗ್ ವೈಭವ ಪ್ರದರ್ಶಿಸಿದರು. ಈ ವೇಳೆ ಸನ್​​ರೈಸರ್ಸ್ ಹೈದ್ರಾಬಾದ್ ಟೀಂ ಹಾಗೂ ಅಭಿಮಾನಿಗಳು ತೋರಿದ ಪ್ರೀತಿಗೆ ಧನ್ಯವಾದ ತಿಳಿಸಿ ತವರಿಗೆ ಮರಳಿದ್ದಾರೆ.

- ಸಾಗರ್​ ಕನ್ನೆಮನೆ

 

First published: May 1, 2019, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading