Vinay BhatVinay Bhat
|
news18 Updated:May 13, 2019, 10:40 PM IST
ಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಆದ ಬಗೆ
- News18
- Last Updated:
May 13, 2019, 10:40 PM IST
ನಿನ್ನೆಯಷ್ಟೆ ಮುಂಬೈ ಇಂಡಿಯನ್ಸ್ ತಂಡ 4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದು ಈಗಾಗಲೇ ಹಳೆ ಸುದ್ದಿಯಾಗಿ ಬಿಟ್ಟಿದೆ. ಆದರೆ ಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಕುರಿತಾದ ವಿವಾದ ಮಾತ್ರ ಇನ್ನೂ ಬಿಸಿ ಬಿಸಿ ಚರ್ಚೆಯಾಗೇ ಉಳಿದಿದೆ. ಧೋನಿ ರನೌಟ್ ಎಂದು ಒಂದು ವಿಭಾಗ ಹೇಳುತ್ತಿದ್ದರೆ, ಧೋನಿ ನಾಟೌಟ್ ಅಂತಾನೇ ಮತ್ತಷ್ಟು ಅಭಿಮಾನಿಗಳು ವಾದಿಸುತ್ತಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಫೈನಲ್ ಫೈಟ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನ 149 ರನ್ಗಳಿಗೆ ಕಟ್ಟಿ ಹಾಕಿತ್ತು. ಹಾಗಾಗಿ 150 ರನ್ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅಂದುಕೊಂಡಂತೆ ಒಳ್ಳೆಯ ಆರಂಭವನ್ನೇನೋ ಪಡೆಯಿತು.ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಮೊದಲ ವಿಕೆಟ್ಗೆ 33 ರನ್ ಜೊತೆಯಾಟ ನೀಡಿದರು.
ಆದರೆ 73 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಒತ್ತಡಕ್ಕೆ ಸಿಲುಕಿತ್ತು. ಕ್ರೀಸ್ನಲ್ಲಿ ಗ್ರೇಟ್ ಫಿನಿಷರ್ ಎಂಎಸ್ ಧೋನಿ ಇದಿದ್ದರಿಂದ ಮುಂಬೈ ಟೆನ್ಷನ್ ಹಾಗೇ ಇತ್ತು. ಆದರೆ ಆ ಒಂದು ರನೌಟ್ ಫಲಿತಾಂಶವನ್ನೇ ಅದಲು ಬದಲು ಮಾಡಿಬಿಟ್ಟಿತು.
ಇದನ್ನೂ ಓದಿ: ಸಚಿನ್-ಕೊಹ್ಲಿಯಲ್ಲಿ ಯಾರು ಗ್ರೇಟ್?: ವಿಶ್ವಕಪ್ಗೂ ಮೊದಲೆ ಶುರುವಾಯ್ತು ಚರ್ಚೆ
ಪಂದ್ಯದ ಗತಿಯನ್ನೇ ಬದಲಿಸಿದ್ದು ಆ ಒಂದು ರನೌಟ್. 8 ಎಸೆತಗಳಲ್ಲಿ 2 ರನ್ಗಳಿಸಿ ಕೂಲ್ ಆಗೇ ಆಡುತ್ತಿದ್ದ ಧೋನಿ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿದ್ದರು. ಪಂದ್ಯದ 13ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡಿದರು. ಈ ವೇಳೆ 4ನೇ ಎಸೆತದಲ್ಲಿ ಶೇನ್ ವ್ಯಾಟ್ಸನ್ ಸಿಂಗಲ್ ತೆಗೆದುಕೊಂಡರು. ಆದರೆ ಹಾರ್ದಿಕ್ ಪಾಂಡ್ಯಾ ಚೆಂಡನ್ನ ಹಿಡಿಯಲು ಎಡವಟ್ಟು ಮಾಡಿದ್ದರಿಂದ ಧೋನಿ 2ನೇ ರನ್ ಓಡಿದರು. ಈ ವೇಳೆ ರಾಹುಲ್ ಚಹಾರ್ ಡೈರೆಕ್ಟ್ ಹಿಟ್ ಮಾಡಿದರು. ಹಿಗಾಗಿ ಡಿಸಿಷನ್ ಥರ್ಡ್ ಅಂಪೈರ್ಗೆ ಶಿಫ್ಟ್ ಆಯಿತು.
ಒಂದು ಕ್ಯಾಮೆರಾ ಆ್ಯಂಗಲ್ನಲ್ಲಿ ಧೋನಿ ಬ್ಯಾಟ್ ಸ್ಟಂಪ್ಸ್ ಎಗರುವ ಹೊತ್ತಿಗೆ ಕ್ರೀಸ್ ದಾಟಿತ್ತು. ಈ ವೇಳೆ ಧೋನಿ ಅಪಾಯದಿಂದ ಪಾರಾದರು ಎಂದೇ ಭಾವಿಸಲಾಗಿತ್ತು. ಆದರೆ ಕೆಲ ಸೆಕೆಂಡ್ಗಳಲ್ಲೇ ಮತ್ತೊಂದು ಕ್ಯಾಮೆರಾ ಆ್ಯಂಗಲ್ನಲ್ಲಿ ನೋಡಿದಾಗ ಚೆಂಡು ಸ್ಟಂಪ್ಸ್ಗೆ ತಗುಲಿದಾಗ ಧೋನಿ ಬ್ಯಾಟ್ ಮಿಲಿ ಮೀಟರ್ನಲ್ಲಿ ಕ್ರೀಸ್ನಿಂದ ಹಿಂದೆ ಇತ್ತು. ಇದು ನೋಡುಗರನ್ನ ಅಷ್ಟೇ ಅಲ್ಲದೆ ವೀಕ್ಷಕ ವಿವರಣೆಗಾರರನ್ನೂ ಗೊಂದಲಕ್ಕೀಡು ಮಾಡಿತು. ಒಬ್ಬರು ಔಟ್ ಅಂದರೆ, ಮತ್ತೊಬ್ಬರು ನಾಟೌಟ್ ಅಂತಿದ್ದರು. ಥರ್ಡ್ ಅಂಪೈರ್ಕೂಡ ತೀರ್ಪು ನೀಡಲು ಸಾಕಷ್ಟು ಸಮಯ ತೆಗೆದುಕೊಂಡರು. ಆದರೆ ಅಂತಿಮವಾಗಿ ಬಂದ ತೀರ್ಪು ಪಂದ್ಯದ ಚಿತ್ರಣವನ್ನೇ ಬದಲಿಸಿತು.
ಟಿವಿಯಲ್ಲಿ ಧೋನಿ ರನೌಟ್ ಎಂದು ತೀರ್ಪು ನೀಡಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ರನೌಟ್ ಬಗ್ಗೆ ಭಾರೀ ಚರ್ಚೆಯೇ ನಡೆದು ಹೋಯಿತು. ಅದೇಗೆ ಧೋನಿ ರನೌಟ್ ಸಾಧ್ಯ. ರನೌಟ್ ಕುರಿತು ಅನುಮಾನ ಇದ್ದಾಗ ಬ್ಯಾಟ್ಸ್ಮನ್ಗೆ ಅವಕಾಶ ನೀಡಬೇಕಿತ್ತು ಎಂದು ಸೆಲೆಬ್ರೆಟಿಗಳು, ಅಭಿಮಾನಿಗಳು ಕಿಡಿಕಾರಿದರು. ಇನ್ನೂ ಕೆಲವರು ಥರ್ಡ್ ಅಂಪೈರ್ ನೀಡಿದ ತೀರ್ಮಾನ ಸರಿಯಾಗೇ ಇದೆ ಎಂದರು. ಅಷ್ಟೇ ಅಲ್ಲದೆ ಇನ್ನೂ ಕೆಲವರು ಐಪಿಎಲ್ ಅಂದ್ರೆ ಫಿಕ್ಸಿಂಗ್, ಈ ಮ್ಯಾಚ್ ಕೂಡ ಫಿಕ್ಸ್ ಆಗಿರಬೇಕು ಎಂದು ಟೀಕಿಸಿದರು.
ಇದನ್ನೂ ಓದಿ: IPL 2019: ಈ ಮೂರು ಸ್ಟಾರ್ ಆಟಗಾರರು ಬ್ಯಾಟ್ ಬೀಸಿದ್ದಕ್ಕಿಂತ ಬೆಂಚ್ ಕಾದಿದ್ದೇ ಹೆಚ್ಚು!
ಇಷ್ಟೆಲ್ಲಾ ವಾದ-ವಿವಾದಗಳ ನಡುವೆಯೇ ಮುಂಬೈ ಇಂಡಿಯನ್ಸ್ 1 ರನ್ಗಳ ರೋಚಕ ಜಯದೊಂದಿಗೆ 4ನೇ ಬಾರಿಗೆ ಐಪಿಎಲ್ ಕಿರೀಟವನ್ನ ತೊಟ್ಟಿದೆ. ನಾಲ್ಕನೇ ಬಾರಿ ಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರೆ ಇನ್ನೂ ಕೂಡ ಧೋನಿ ರನೌಟ್ ಕುರಿತು ಸಾಮಾಜಿಕ ತಾಣಗಳಲ್ಲಿ ಚರ್ಚೆ ಮಾತ್ರ ಮುಂದುವರೆತ್ತಿದೆ.
First published:
May 13, 2019, 10:12 PM IST