IPL FINAL CSK vs MI: ಐಪಿಎಲ್​ನಲ್ಲಿ ಮತ್ತೆ ಫಿಕ್ಸಿಂಗ್​ ಭೂತ?; ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಚರ್ಚೆ

ಐಪಿಎಲ್​ ಪಂದ್ಯಗಳು ಸ್ಕ್ರಿಪ್ಟ್​ ಆಧರಿಸಯೇ ನಡೆಯುತ್ತದೆ. ನಿನ್ನೆ ನಡೆದ ಮ್ಯಾಚ್​ ಕೂಡ ಹಾಗೆಯೇ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

Rajesh Duggumane | news18
Updated:May 13, 2019, 10:45 AM IST
IPL FINAL CSK vs MI: ಐಪಿಎಲ್​ನಲ್ಲಿ ಮತ್ತೆ ಫಿಕ್ಸಿಂಗ್​ ಭೂತ?; ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಚರ್ಚೆ
ರೋಹಿತ್ ಶರ್ಮಾ- ಎಂಎಸ್ ಧೋನಿ
  • News18
  • Last Updated: May 13, 2019, 10:45 AM IST
  • Share this:
ಅದು ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್​ ನಡುವಣ ಐಪಿಎಲ್​ 12ನೇ ಆವೃತ್ತಿಯ ಫೈನಲ್ ಪಂದ್ಯ. 150 ರನ್​ಗಳ ಚೇಸಿಂಗ್​ ಇಳಿದಿದ್ದ ಚೆನ್ನೈ ತಂಡಕ್ಕೆ ಕೊನೆಯ 6 ಎಸೆತಗಳಲ್ಲಿ ಬೇಕಿದ್ದದ್ದು ಕೇವಲ 9 ರನ್. ಫೈನಲ್​ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆದ್ದ ಖ್ಯಾತಿ ಚೆನ್ನೈಗೆ ಇದೆ. ಹೀಗಾಗಿ, ಈಬಾರಿಯೂ ಸಿಎಸ್​ಕೆ ಕಪ್​ ಎತ್ತಲಿದೆ ಎನ್ನುವ ಅಭಿಲಾಷೆಯಲ್ಲಿದ್ದರು ಧೋನಿ ಅಭಿಮಾನಿಗಳು. ಆದರೆ, ಎಲ್ಲಾ ಲೆಕ್ಕಾಚಾರ ಬದಲಾಗಿತ್ತು. ಕೊನೆಯಲ್ಲಿ ಮುಂಬೈ ಇಂಡಿಯನ್ಸ್​ ರೋಚಕವಾಗಿ ಗೆಲುವು ಸಾಧಿಸಿತ್ತು. ಪಂದ್ಯವೇನೋ ಮುಗಿದಿದೆ. ಆದರೆ, ಈ ಪಂದ್ಯದ ಕೊನೆಯ ಓವರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಐಪಿಎಲ್​ ಸ್ಕ್ರಿಪ್ಟ್​ ಆಧಾರಿತವಾಗಿಯೇ ನಡೆಯುತ್ತಿದೆ, ಈಪಿಎಲ್​ನಲ್ಲಿ ಫಿಕ್ಸಿಂಗ್​ ನಡೆದಿದೆ ಎಂದು ಅನುಮಾನಿಸಿ ಅನೇಕರು ಬರೆದುಕೊಂಡಿದ್ದಾರೆ!

ಕೆಲ ವರ್ಷಗಳ ಹಿಂದೆ ಫಿಕ್ಸಿಂಗ್ ಕಳಂಕ ಅಂಟಿಸಿಕೊಂಡಿದ್ದ ಐಪಿಎಲ್​ಗೆ ಸ್ಥಿತಿ ಇದೀಗ ‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬಂತಹ ಪರಿಸ್ಥಿತಿಗೆ ಒಳಗಾಗಿದೆ. ಐಪಿಎಲ್​ನಲ್ಲಿ ಫಿಕ್ಸಿಂಗ್ ಕರಿಛಾಯೆ ಹರಿದಾಡಿದಾಗಿನಿಂದ ಅನೇಕರಿಗೆ ಐಪಿಎಲ್​ ಮೇಲಿದ್ದ ನಂಬಿಕೆ ಮರೆಯಾಗಿದೆ! ಅದರಲ್ಲೂ ಸಿಎಸ್​ಕೆ ತಂಡವನ್ನು ಅನೇಕರು ಈಗಲೂ ನಂಬುವುದಿಲ್ಲ. ಈವರೆಗೂ ಯಾವುದೇ ಪಂದ್ಯ ರೋಚಕ ಹಂತ ತಲುಪಿದರೂ “ಅಯ್ಯೋ ಬಿಡಿ, ಮೊದಲೇ ಎಲ್ಲವೂ ಫಿಕ್ಸಿಂಗ್​ ಮಾಡಿಕೊಂಡಿರುತ್ತಾರೆ,” ಎನ್ನುವ ಮಾತುಗಳು ಕೇಳಿ ಬರುತ್ತವೆ.

ಇದನ್ನೂ ಓದಿ: IPL 2019 Final: 1 ರನ್ ​ರೋಚಕ ಜಯದೊಂದಿಗೆ 4ನೇ ಬಾರಿ ಟ್ರೋಫಿ ಗೆದ್ದು ಇತಿಹಾಸ ಬರೆದ ಮುಂಬೈ ಇಂಡಿಯನ್ಸ್​!

ನಿನ್ನೆ ನಡೆದ ಪಂದ್ಯದಲ್ಲಿ ಆಗಿದ್ದೂ ಇದೆ. ಮುಂಬೈ ನೀಡಿದ್ದ 150 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈಗೆ ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ಒದಗಿಸಿದ್ದರು. ಆದರೆ, ಕೆಲ ಪ್ರಮುಖ ಆಟಗಾರರು ಸಾಧಾರಣ ಪ್ರದರ್ಶನ ನೀಡಿ ನಿರ್ಗಮಿಸಿದ್ದು ಸಿಎಸ್​​ಕೆಗೆ ಹಿನ್ನಡೆಯಾಯಿತು.ಕೊನೆಯ ಓವರ್​ನಲ್ಲಿ 6 ಬಾಲ್​ಗೆ 9 ರನ್​ಗಳ ಅವಶ್ಯಕತೆ ಇತ್ತು. ಮಲಿಂಗಾ ಬೌಲಿಂಗ್​ನ ಮೊದಲ ಎಸೆತದಲ್ಲಿ ವಾಟ್ಸನ್​ 1 ರನ್ ಕಲೆಹಾಕಿದರೆ, 2ನೇ ಎಸೆತದಲ್ಲಿ ಜಡೇಜಾ 1 ರನ್ ಬಾರಿಸಿದರು. 3ನೇ ಎಸೆತದಲ್ಲಿ ವಾಟ್ಸನ್ 2 ರನ್​ ಕಲೆಹಾಕಿದರು. 4ನೇ ಎಸೆತದಲ್ಲೂ ಮತ್ತೆ 2 ರನ್ ಗಳಿಸಲು ಹೋಗಿ ವಾಟ್ಸನ್ ರನೌಟ್​ಗೆ ಬಲಿಯಾದರು.  ಶಾರ್ದೂಲ್ ಠಾಕೂರ್ 5ನೇ ಎಸೆತದಲ್ಲಿ 2 ರನ್ ಗಳಿಸಿದರೆ, ಕೊನೆಯ ಎಸೆತದಲ್ಲಿ ಎಲ್​ಬಿ ಬಲೆಗೆ ಸಿಲುಕಿದರು. ಈ ಮೂಲಕ ಗೆಲುವು ಮುಂಬೈ ಪಾಲಾಯಿತು.

ನಿನ್ನೆ ನಡೆದ ಪಂದ್ಯ ಭಾರೀ ರೋಚಕತೆ ನೀಡಿತ್ತು. ಇದೇ ಈಗ ಚರ್ಚೆಗೆ ಕಾರಣವಾಗಿದೆ. ಐಪಿಎಲ್​ ಪಂದ್ಯಗಳು ಸ್ಕ್ರಿಪ್ಟ್​ ಆಧರಿಸಯೇ ನಡೆಯುತ್ತದೆ. ನಿನ್ನೆ ನಡೆದ ಮ್ಯಾಚ್​ ಕೂಡ ಹಾಗೆಯೇ ಎಂದು ಅನೇಕರು ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಅಂಪೈರ್​ಗಳು ಕೂಡ ಕಳಪೆಯಾಗಿ ಕಾರ್ಯನಿರ್ವಹಿಸಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ: ದಾಖಲೆಗಳ ಸರಮಾಲೆಯೊಂದಿಗೆ ಅಂತ್ಯವಾಯಿತು 12ನೇ ಆವೃತ್ತಿಯ ಐಪಿಎಲ್!

First published:May 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ