‘ಧೋನಿ ಔಟೆ ಅಲ್ಲ, ನಾನು ನೇಣ್ ಹಾಕ್ಕೋತೀನಿ’; ತಮಿಳುನಾಡಿನಲ್ಲಿ ವೈರಲ್ ಆಗುತ್ತಿದೆ ಈ ಹುಡುಗನ ವಿಡಿಯೋ..!

MS Dhoni: 73 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಒತ್ತಡಕ್ಕೆ ಸಿಲುಕಿತ್ತು. ಕ್ರೀಸ್​ನಲ್ಲಿ ಗ್ರೇಟ್ ಫಿನಿಷರ್ ಎಂಎಸ್​ ಧೋನಿ ಇದಿದ್ದರಿಂದ ಮುಂಬೈ ಟೆನ್ಷನ್​ ಹಾಗೇ ಇತ್ತು. ಆದರೆ ಆ ಒಂದು ರನೌಟ್​​​ ಫಲಿತಾಂಶವನ್ನೇ ಅದಲು ಬದಲು ಮಾಡಿಬಿಟ್ಟಿತು.

ಎಂ ಎಸ್ ಧೋನಿ

ಎಂ ಎಸ್ ಧೋನಿ

  • News18
  • Last Updated :
  • Share this:
ಮಳೆ ನಿಂತರೂ ಮರದ ಹನಿ ನಿಂತಿಲ್ಲ ಅನ್ನೋ ಹಾಗೆ ಐಪಿಎಲ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಸೋತರೂ ನಾಯಕ ದೋನಿ ರನೌಟ್ ವಿವಾದ ಮಾತ್ರ ಇನ್ನೂ ಬಗೆಹರಿಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಅಲ್ಲದೆ ಈ ಕುರಿತ ಮೂರನೇ ತರಗತಿ ಹುಡುನ ವಿಡಿಯೋ ಒಂದು ತಮಿಳುನಾಡು ಸೇರಿದಂತೆ ಎಲ್ಲೆಡೆ ವೈರಲ್ ಆಗುತ್ತಿದೆ.

ಎಲ್ಲರಿಗೂ ತಿಳಿದಂತೆ ಐಪಿಎಲ್​ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್. ಅಲ್ಲದೆ ನಾಯಕ ಮಹೇಂದ್ರ ಸಿಂಗ್ ದೋನಿಗೆ ದೇಶ-ವಿದೇಶಗಳಲ್ಲೂ ಪ್ರತ್ಯೇಕ ಅಭಿಮಾನಿಗಳ ದೊಡ್ಡ ದಂಡೆ ಇದೆ. ಇಂತಿಪ್ಪ ಚೆನ್ನೈ ತಂಡ ಮೊನ್ನೆ ಮುಂಬೈ ಎದುರು ಸೋಲನುಭವಿಸಿತ್ತು. ಇದು ಸಾಮಾನ್ಯವಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಕುರಿತು ಅನೇಕ ವಿಡಿಯೋಗಳು ಹೊರಬರುತ್ತಿದ್ದು, ಈ ಹುಡುಗನ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಐಪಿಎಲ್ 12ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಮುಂಬೈ ನೀಡಿದ 150 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಒಂದು ಹಂತದಲ್ಲಿ ಒಂಟಿ ರನ್​ ಗಳಿಸಲು ಸಹ ತಿಣುಕಾಡುತ್ತಿತ್ತು. ಈ ಸಂದರ್ಭದಲ್ಲಿ 12.4 ನೇ ಓವರ್​ನಲ್ಲಿ ಇಶಾನ್​ ಕಿಶನ್ ಅವರ ಡೈರೆಕ್ಟ್​ ಹಿಟ್​ಗೆ ದೋನಿ ರನೌಟ್ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದರು. ಮುಂಬೈ ಪಂದ್ಯ ಗೆಲ್ಲಲು ಈ ರನೌಟ್ ಸಹಕಾರಿಯಾಗಿತ್ತು. ಆದರೆ, ದೋನಿ ರನೌಟ್ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

 ಒಂದೆಡೆ ಈ ಕುರಿತು ಸಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ದೋನಿ ರನೌಟ್ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮೂರನೇ ತರಗತಿ ಹುಡುಗನ ವಿಡಿಯೋ ಒಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆತ, “ದೋನಿ ರನೌಟೆ ಇಲ್ಲ.. ಆತನಿಗೆ ಮೋಸ ಮಾಡಿ ಔಟ್​ ಮಾಡಿದ್ದಾರೆ. ನಾನು ನೇಣ್ ಹಾಕ್ಕೋತೀನಿ” ಎಂದು ಮುಗ್ಧತೆಯಿಂದ ಅಳುತ್ತಾ ಆತನಾಡಿರುವ ಮಾತು ಇದೀಗ ತಮಿಳುನಾಡು ನೆಟ್ಟಿಗರ ಹಾಟ್ ಫೇವರಿಟ್ ಎನಿಸಿಕೊಂಡಿದೆ.12ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ 150 ರನ್​ ಬೆನ್ನಟ್ಟಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಕೇವಲ 1 ರನ್​ ಅಂತರದಲ್ಲಿ ಸೋಲನುಭವಿಸಿತ್ತು.
First published: