HOME » NEWS » Sports » CRICKET IPL 2019 DC VS SRH LATE BLOOMING DELHI LOOK FOR A FIRST EVER KNOCKOUT WIN

ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ vs ಡೆಲ್ಲಿ; ಎಸ್ಆರ್​​ಎಚ್​ಗೆ ಆರಂಭದಲ್ಲೇ ಆಘಾತ

IPL Eliminator Match: ಇಂದು ನಡೆಯುವ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಇಂದು ಸೋತ ತಂಡ ಗೇಟ್​ ಪಾಸ್​ ಪಡೆದುಕೊಳ್ಳಲಿದೆ. ಗೆದ್ದ ತಂಡ, ಮಂಗಳವಾರ ಮುಂಬೈ ವಿರುದ್ಧ ಸೋತ ಚೆನ್ನೈ ತಂಡದ ವಿರುದ್ಧ ಸೆಣೆಸಲಿದೆ.

Rajesh Duggumane | news18
Updated:May 8, 2019, 12:11 PM IST
ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ vs ಡೆಲ್ಲಿ; ಎಸ್ಆರ್​​ಎಚ್​ಗೆ ಆರಂಭದಲ್ಲೇ ಆಘಾತ
ಸನ್‌ರೈಸರ್ಸ್ ಹೈದರಾಬಾದ್
  • News18
  • Last Updated: May 8, 2019, 12:11 PM IST
  • Share this:
ವಿಶಾಖಪಟ್ಟಣ (ಮೇ 8): ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ನಡುವಣ ಎಲಿಮಿನೇಟರ್​ ಪಂದ್ಯಕ್ಕೆ ಇಂದು ವಿಶಾಖಪಟ್ಟಣ ಸಾಕ್ಷಿಯಾಗಲಿದೆ. ಡೆಲ್ಲಿ ನೀಡಲಿರುವ ಕಠಿಣ ಸವಾಲನ್ನು ಎದುರಿಸಲು ಹೈದರಾಬಾದ್​ ಸಿದ್ಧವಾಗಿದೆ.

ಐಪಿಎಲ್​ 12ನೇ ಆವೃತ್ತಿಯಲ್ಲಿ ಹೆಸರು ಬದಲಾಯಿಸಿಕೊಂಡು ಡೆಲ್ಲಿ ಅಖಾಡಕ್ಕೆ ಇಳಿದಿತ್ತು. ಒಂದರ ಮೇಲೊಂದರಂತೆ ಅಭೂತಪೂರ್ವ ಗೆಲುವು ದಾಖಲಿಸುವ ಮೂಲಕ ಡೆಲ್ಲಿ ಎಲ್ಲರ ಗಮನ ಸೆಳೆದಿದೆ. ಇಂದು ನಡೆಯುವ ಪಂದ್ಯದಲ್ಲಿ, ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಇಂದು ನಡೆಯುವ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಇಂದು ಸೋತ ತಂಡ ಗೇಟ್​ ಪಾಸ್​ ಪಡೆದುಕೊಳ್ಳಲಿದೆ. ಗೆದ್ದ ತಂಡ, ಮಂಗಳವಾರ ಮುಂಬೈ ವಿರುದ್ಧ ಸೋತ ಚೆನ್ನೈ ತಂಡದ ವಿರುದ್ಧ ಸೆಣೆಸಲಿದೆ.

ವಿಶ್ವಕಪ್​ ಶಿಬಿರದಲ್ಲಿ ಪಾಲ್ಗೊಳ್ಳಬೇಕಾದ ಕಾರಣ, ಡೇವಿಡ್​ ವಾರ್ನರ್​ ಹಾಗೂ ಜಾನಿ ಬೈರ್​ಸ್ಟೋವ್​ ತವರಿಗೆ ತೆರಳಿದ್ದಾರೆ. ಇದು ಹೈದರಾಬಾದ್​ ತಂಡಕ್ಕೆ ದೊಡ್ಡ ಹಿನ್ನಡೆ. ಹಾಗಾಗಿ ಪಂದ್ಯ ಆರಂಭಕ್ಕೂ ಮೊದಲೆ ದೊಡ್ಡ ಆಘಾತ ಅನುಭವಿಸಿರುವ ಹೈದಾರಾಬಾದ್​ ಶತಾಯ-ಗತಾಯ ಗೆಲ್ಲಲೇ ಬೇಕು ಎನ್ನುವ ಶಪಥ ಮಾಡಿದೆ.
ಈ ಮೊದಲ ಆವೃತ್ತಿಯಲ್ಲಿ ಡೆಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಉದಾಹರಣೆಗಳಿಲ್ಲ. ಇದೇ ಮೊದಲ ಬಾರಿಗೆ ಡೆಲ್ಲಿ ಪ್ಲೇಆಫ್ ಹಂತ ತಲುಪಿದೆ. ಆರಂಭಿಕ ಆಟಗಾರರಾದ ಶಿಖರ್​ ಧವನ್​, ಪೃಥ್ವಿ ಷಾ ನಾಯಕ ಶ್ರೇಯಸ್​ ಅಯ್ಯರ್​ ಡೆಲ್ಲಿ ತಂಡದ ಬೆನ್ನೆಲುಬು. ಇದೇ ರೀತಿ, ಹೈದರಾಬಾದ್​ ಪ್ರಮುಖರ ಅನುಪಸ್ಥಿತಿಯಲ್ಲೂ ಫೈನಲ್​ಗೆ ಏರುವ ಕನಸು ಕಾಣುತ್ತಿದೆ.

ಇದನ್ನೂ ಓದಿ: IPL 2019, Qualifier 1: ಚೆನ್ನೈ ನಾಡಲ್ಲೇ ದಾಖಲೆ ಬರೆದು ಫೈನಲ್​​ಗೆ ಭರ್ಜರಿ ಎಂಟ್ರಿ ಕೊಟ್ಟ ಮುಂಬೈ

ಎರಡು ತಂಡಗಳು ಈವರೆಗೆ 14 ಬಾರಿ ಮುಖಾಮುಖಿ ಆಗಿವೆ. 5 ಪಂದ್ಯಗಳಲ್ಲಿ ಡೆಲ್ಲಿ ಹಾಗೂ 9 ಪಂದ್ಯಗಳಲ್ಲಿ ಹೈದರಾಬಾದ್​ ಗೆಲುವು ಸಾಧಿಸಿದೆ. ಇಂದು 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
First published: May 8, 2019, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories