ವಿಜ್ಞಾನಕ್ಕೆ ಸವಾಲು..! ಒಂದೇ ಕೈಯಲ್ಲಿ ಕಣ್ಮುಚ್ಚಿ ಸಿಕ್ಸರ್ ಹೊಡೆದ ಎಬಿಡಿ..! ವೈರಲ್ ಆಯ್ತು ವಿಡಿಯೋ

ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್​ಮನ್ ಎಂದು ಕರೆಯಲಾಗುವ ಎಬಿ ಡೀವಿಲಿಯರ್ಸ್ ಅವರ ಬ್ಯಾಟಿಂಗ್ ನೋಡುವುದೇ ಒಂದು ರಸದೌತಣ. ಒಂದೇ ಕೈಯಲ್ಲಿ ಅವರು ಹೊಡೆದ ಚೆಂಡು ಸ್ಟೇಡಿಯಂ ಟಾಪ್​ಗೆ ಹೋಗಿ ಬಿದ್ದಿತ್ತು.

Vijayasarthy SN | news18
Updated:April 25, 2019, 12:25 PM IST
ವಿಜ್ಞಾನಕ್ಕೆ ಸವಾಲು..! ಒಂದೇ ಕೈಯಲ್ಲಿ ಕಣ್ಮುಚ್ಚಿ ಸಿಕ್ಸರ್ ಹೊಡೆದ ಎಬಿಡಿ..! ವೈರಲ್ ಆಯ್ತು ವಿಡಿಯೋ
ಎಬಿ ಡೀವಿಲಿಯರ್ಸ್
  • News18
  • Last Updated: April 25, 2019, 12:25 PM IST
  • Share this:
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ಎಬಿ ಡೀವಿಲಿಯರ್ಸ್ ಅವರ ಬ್ಯಾಟಿಂಗ್ ಚಾರ್ಮ್ ಒಂಚೂರೂ ಕಡಿಮೆ ಆಗಿಲ್ಲ ಎಂದು ನಿನ್ನೆಯ ಮ್ಯಾಚ್ ನೋಡಿದಾಗ ಖಚಿತವಾಗುತ್ತದೆ. ದಕ್ಷಿಣ ಆಫ್ರಿಕಾದ ಈ ಬ್ಯಾಟುಗಾರ ಲಯದಲ್ಲಿದ್ದರೆ ಅವರ ಬ್ಯಾಟಿಂಗ್ ನೋಡಲು ಬಲು ಸೊಗಸಲು. ಎದುರಾಳಿಗಳೂ ಕೂಡ ಎಂಜಾಯ್ ಮಾಡುತ್ತಾರೆ. ಅವರ ಕ್ರಿಕೆಟ್ ಶಾಟ್​ಗಳಂತೂ ಬಹಳ ಫೇಮಸ್. ಯಾವ ಕಡೆಗಾದರೂ ಸಿಕ್ಸರ್ ಭಾರಿಸಬಲ್ಲರು. ಅದಕ್ಕೆ ಅವರನ್ನು 360 ಡಿಗ್ರೀ ಬ್ಯಾಟ್ಸ್​ಮನ್ ಎಂದು ಕರೆಯುತ್ತಾರೆ.





ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ವರ್ಸಸ್ ಕಿಂಗ್ಸ್ ಇಲವೆನ್ ಐಪಿಎಲ್ ಪಂದ್ಯದ ವೇಳೆ ಅವರು ಹೊಡೆದ ಒಂದು ಸಿಕ್ಸರ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್​ಸಿಬಿ ಇನ್ನಿಂಗ್ಸ್​ನ 19ನೇ ಓವರ್​ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಡೀವಿಲಿಯರ್ಸ್ ಹೊಡೆದ ಸತತ 3ನೇ ಸಿಕ್ಸರ್ ಎಲ್ಲರನ್ನೂ ಬೆರಗುಗೊಳಿಸಿತು. ಚೆಂಡಿನತ್ತ ನೋಡದೇ ಎಬಿಡಿ ಒಂದೇ ಕೈಯಲ್ಲಿ ಹೊಡೆದ ಶಾಟ್​ಗೆ ಚೆಂಡು ಚಿನ್ನಸ್ವಾಮಿ ಸ್ಟೇಡಿಯಮ್​ನ ಅಂಚಿನ ಮೇಲೆ ಹೋಗಿ ಕೂತಿತು.



ಶಮಿ ಎಸೆದ ಫುಲ್ ಟಾಸ್​ನಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಚೆಂಡು ಎಬಿಡಿ ಅವರ ಬ್ಯಾಟಿಗೆ ತಗುಲಿ ಸಿಕ್ಸರ್ ಹೋಗಿರುವ ಸಾಧ್ಯತೆ ಇದೆ. ಆದರೂ ಕೂಡ ಎಬಿಡಿ ಕೈ ಚೆಲ್ಲಿದರೂ ಚೆಂಡು ಗಡಿ ದಾಟುತ್ತದೆ ಎಂಬಂತೆ ವೈರಲ್ ಆಗುತ್ತಿದೆ. ಅವರ ಈ ಶಾಟ್ ಹೇಗೆ ನೋಡಿದರೂ ಅಸಾಧ್ಯ ಎಂದೇ ತೋರುತ್ತದೆ. ಇದು ವಿಜ್ಞಾನಕ್ಕೆ ನಿಲುಕದ ಶಾಟ್ ಎಂದೂ ಎಬಿಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.















ಈ ಖುಷಿಗೆ ಇಂಬು ಕೊಡುವಂತೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕಿಂಗ್ಸ್ ಇಲವೆನ್ ತಂಡವನ್ನು ಸೋಲಿಸಿತು. ಎಬಿ ಡೀವಿಲಿಯರ್ಸ್ 44 ಬಾಲ್​ನಲ್ಲಿ ಅಜೇಯ 82 ರನ್ ಗಳಿಸಿದ್ದರಿಂದ ಆರ್​ಸಿಬಿ ತನ್ನ ಎದುರಾಳಿಗಳಿಗೆ ಗೆಲ್ಲಲು ಕಠಿಣವಾದ  203 ರನ್ ಸವಾಲು ನೀಡಲು ಸಾಧ್ಯವಾಯಿತು. ಸತತ ಐದಾರು ಪಂದ್ಯಗಳನ್ನ ಸೋತು ಬಸವಳಿದಿದ್ದ ಆರ್​ಸಿಬಿ ಈಗ 4ನೇ ಗೆಲುವು ಪಡೆದು ಪ್ಲೇ ಆಫ್ ಹಂತದ ಪ್ರವೇಶವನ್ನು ಜೀವಂತವಾಗಿರಿಸಿಕೊಂಡಿದೆ.
First published: April 25, 2019, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading