HOME » NEWS » Sports » CRICKET IPL 2019 3 UNDERPERFORMERS ROYAL CHALLENGERS BANGALORE SHOULD RELEASE

IPL 2019: ಮುಂದಿನ ಆವೃತ್ತಿಗೆ ಆರ್​ಸಿಬಿ ತಂಡದಲ್ಲಿರಲ್ಲ ಈ ಸ್ಟಾರ್ ಆಟಗಾರರು!

IPL 2019, RCB: ಕಳೆದ ಮೂರು ಸೀಸನ್​ನಲ್ಲಿ ಎರಡು ಬಾರಿ ಕೊಹ್ಲಿ ಟೀಂ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಇದಕ್ಕೆ ಕಾರಣ ತಂಡದಲ್ಲಿ ಒಗ್ಗಟ್ಟು ಇಲ್ಲದಿರುವುದು​​. ಘಟಾನುಘಟಿಗಳಿದ್ದರೂ, ಸಂಘಟಿತ ಆಟ ಪ್ರದರ್ಶಿಸುವುದರಲ್ಲಿ ಎಡವುತ್ತಿದೆ.

Vinay Bhat | news18
Updated:May 8, 2019, 4:02 PM IST
IPL 2019: ಮುಂದಿನ ಆವೃತ್ತಿಗೆ ಆರ್​ಸಿಬಿ ತಂಡದಲ್ಲಿರಲ್ಲ ಈ ಸ್ಟಾರ್ ಆಟಗಾರರು!
ವಿರಾಟ್ ಕೊಹ್ಲಿ (ನಾಯಕ)
  • News18
  • Last Updated: May 8, 2019, 4:02 PM IST
  • Share this:
ಬೆಂಗಳೂರು (ಮೇ. 08): ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕಳೆದ ಮೂರು ಆವೃತ್ತಿಯಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದೇ ಹೆಚ್ಚು. ಅದರಲ್ಲೂ ಈ ಬಾರಿ ಟೇಬಲ್​​ ಟಾಪರ್​ ಬದಲು ಪಾಯಿಂಟ್ಸ್ ಟೇಬಲ್​ ಕೊನೆಯಲ್ಲಿ ಸ್ಥಾನ ಪಡೆಯಿತು. ಹೀಗಾಗಿ ಆರ್​ಸಿಬಿ ಮುಂದಿನ ಆವೃತ್ತಿಗಾದರು ತಂಡದಲ್ಲಿ ಮಹತ್ವದ ಬದಲಾವಣೆ ಮಾಡಬೇಕಿದೆ. ಇದಕ್ಕಾಗಿ ಕೆಲವರು ತಂಡದಿಂದ ಹೊರಬೀಳಲಿದ್ದಾರೆ.

ಆರ್​ಸಿಬಿ ಪ್ರತಿ ಬಾರಿಯು ಅಭಿಮಾನಿಗಳ ದುಪ್ಪಟ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯುವ ಟೀಂ​. ಈ ಬಾರಿ ಕಪ್​ ಗೆಲ್ಲಲಿದೆ ಎಂದೇ ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಹಾಡಿದ್ದೇ ರಾಗ ಎಂಬಂತೆ ಆರ್​ಸಿಬಿ ಸೋಲಿನ ಸರಮಾಲೆ ತೊಟ್ಟು ಹೊರನಡೆದಿದೆ.

ಕಳೆದ ಮೂರು ಸೀಸನ್​ನಲ್ಲಿ ಎರಡು ಬಾರಿ ಕೊಹ್ಲಿ ಟೀಂ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಇದಕ್ಕೆ ಕಾರಣ ತಂಡದಲ್ಲಿ ಒಗ್ಗಟ್ಟು ಇಲ್ಲದಿರುವುದು​​. ಘಟಾನುಘಟಿಗಳಿದ್ದರೂ, ಸಂಘಟಿತ ಆಟ ಪ್ರದರ್ಶಿಸುವುದರಲ್ಲಿ ಎಡವುತ್ತಿದೆ. ಆದರೆ ಈ ಬಾರಿ ಲೀಗ್​ ಕೊನೆಯ ಹಂತದಲ್ಲಿ ಉತ್ತಮ ಆಟವಾಡಿದರೂ ಅದಾಗಲೇ ಕಾಲ ಮೀರಿ ಹೋಗಿತ್ತು. ಆರಂಭಿಕ 6 ಪಂದ್ಯಗಳ ಸೋಲು ಆರ್​ಸಿಬಿಯ ಪ್ಲೇ ಆಫ್ ಕನಸಿಗೆ ತಣ್ಣೀರೆರಚಿತು.​​

ಇದನ್ನೂ ಓದಿ: IPL 2019: ಕೂಲ್ ಕ್ಯಾಪ್ಟನ್​​​ನನ್ನೇ ರೊಚ್ಚಿಗೆಬ್ಬಿಸಿದ ಹಿಟ್​ಮ್ಯಾನ್​; ಸಿಡಿದೆದ್ದ ಧೋನಿ ಹೇಳಿದ್ದೇನು?

ಉಮೇಶ್ ಯಾದವ್​ 2018ರ ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿ ತಂಡದ ಸ್ಟಾರ್ ಬೌಲರ್ ಆಗಿ ಮಿಂಚಿದರು. ಪ್ರತಿ ಪಂದ್ಯದಲ್ಲೂ ವಿಕೆಟ್​ಗಳನ್ನ ಬೇಟೆಯಾಡುತ್ತಿದ್ದ ಯಾದವ್​ 14 ಪಂದ್ಯಗಳಲ್ಲಿ 20 ವಿಕೆಟ್​ ಉರುಳಿದ್ದರು. ಇನ್ನು ಒಟ್ಟಾರೆ ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ಉಮೇಶ್​​ ದುಬಾರಿ ಬೌಲರ್​ ಆಗಿಬಿಟ್ಟರು.

12ನೇ ಐಪಿಎಲ್ ಆವೃತ್ತಿಯುದ್ದಕ್ಕೂ ತಡಕಾಡಿದ ಉಮೇಶ್​ ಯಾದವ್​ 11 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 8 ವಿಕೆಟ್​ಗಳು ಅದೂ ಕೂಡ ಅವರ ಎಕಾನಮಿ 9.80. ಮೊದಲೆರಡು ಓವರ್​ ಚೆನ್ನಾಗಿಯೆ ಮಾಡುತ್ತಿದ್ದ ಯಾದವ್ ಕೊನೆಯ 2 ಓವರ್​ಗಳಲ್ಲಿ ದುಬಾರಿ ಬೌಲರ್​ ಆಗಿ ತಂಡದ ತಲೆ ನೋವಾಗಿ ಬಿಟ್ಟರು. ಹೀಗಾಗಿ ಉಮೇಶ್ ಯಾದವ್​ರನ್ನ ಆರ್​ಸಿಬಿ ತಂಡದಿಂದ ರಿಲೀಸ್​ ಮಾಡುವ ಸಾಧ್ಯತೆ ಹೆಚ್ಚಿದೆ.

ಟಿಮ್​​ ಸೌಥಿ ನ್ಯೂಜಿಲೆಂಡ್ ಸ್ಟಾರ್ ಬೌಲರ್​​. ಆದರೆ ಆರ್​ಸಿಬಿ ತಂಡಕ್ಕೆ ಮಾತ್ರ ಎಂದೂ ಆಧಾರವಾಗಿಲ್ಲ. ಈ ಸೀಸನ್​ನ ಮೂರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಸೌಥಿ ಗಳಿಸಿದ್ದು ಮಾತ್ರ ಒಂದೇ ವಿಕೆಟ್​. ಅತಿ ದುಬಾರಿಯಾಗಿ ಗುರುತಿಸಿಕೊಳ್ಳುತ್ತಿದ್ದ ಸೌಥಿ 13.11 ಎಕಾನಮಿಯಲ್ಲಿ ರನ್​ಗಳನ್ನ ಬಿಟ್ಟುಕೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಂತೂ ಇವರು ಮಾಡಿದ ಬೌಲಿಂಗ್​​ಗೆ ಅಭಿಮಾನಿಗಳು ಶಾಕ್​ ಆಗಿದ್ದರು. ಕೆಕೆಆರ್​​​​ ಗೆಲುವಿಗೆ 2 ಓವರ್​​ಗಳಲ್ಲಿ 30 ರನ್​ ಬೇಕಿತ್ತು. ಆದರೆ ಸೌಥಿ ಒಂದೇ ಓವರ್​ನಲ್ಲಿ 29 ರನ್​​ ಬಿಟ್ಟು ತಂಡದ ಸೋಲಿಗೆ ಕಾರಣರಾಗಿದರು. ಹೀಗಾಗಿ ಮುಂದಿನ ಸೀಸನ್​ನಲ್ಲಿ ಸೌಥಿ ಆರ್​ಸಿಬಿ ತಂಡದಲ್ಲಿರುವುದು ಅನುಮಾನ.ಇದನ್ನೂ ಓದಿ: ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ vs ಡೆಲ್ಲಿ; ಎಸ್ಆರ್​​ಎಚ್​ಗೆ ಆರಂಭದಲ್ಲೇ ಆಘಾತ

ಪವನ್​ನೇಗಿ 2018ರ ಐಪಿಎಲ್ ಹರಾಜಿನಲ್ಲಿ ರಿಟೇನ್ ಅವಕಾಶದ ಮೂಲಕ ಆರ್​ಸಿಬಿ ತನ್ನಲ್ಲೇ ಉಳಿಸಿಕೊಂಡಿತ್ತು. ಆದರೆ ನೇಗಿ ಕಳೆದೆರಡು ಸೀಸನ್​ನಲ್ಲಿ​ ತಂಡಕ್ಕೆ ಕೈ ಕೊಟ್ಟಿದ್ದಾರೆ. ಈ ಬಾರಿ ನೇಗಿ ಆಡಿದ 7 ಪಂದ್ಯಗಳಿಂದ ಪಡೆದುಕೊಂಡಿದ್ದು ಕೇವಲ 3 ವಿಕೆಟ್​. ಇನ್ನು 4 ಬಾರಿ ಬ್ಯಾಟಿಂಗ್​ ಅವಕಾಶ ಸಿಕ್ಕಾಗಿ ಒಟ್ಟಾರೆ ಗಳಿಸಿರೋದು ಕೇವಲ 9 ರನ್​ಗಳು ಹೀಗಾಗೆ ಪವನ್​ ನೇಗಿಯನ್ನ 2019ರಲ್ಲಿ ಆರ್​ಸಿಬಿ ತಂಡದಿಂದ ಕೈ ಬಿಡುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ.
First published: May 8, 2019, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories