Shikhar Dhawan: ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ; ವಿಶ್ವಕಪ್​ನಿಂದ ಧವನ್ ಮೂರು ವಾರ ಹೊರಕ್ಕೆ!

ICC World Cup 2019: ಕಳೆದ ಆಸ್ಟ್ರೇಲಿಯಾ ಪಂದ್ಯದ ವೇಳೆ ಧವನ್ ಎಡಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆ.

Vinay Bhat | news18
Updated:June 11, 2019, 10:28 PM IST
Shikhar Dhawan: ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ; ವಿಶ್ವಕಪ್​ನಿಂದ ಧವನ್ ಮೂರು ವಾರ ಹೊರಕ್ಕೆ!
ಶಿಖರ್ ಧವನ್
Vinay Bhat | news18
Updated: June 11, 2019, 10:28 PM IST
ಬೆಂಗಳೂರು (ಜೂ. 11): ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ ಎಂಬೊತ್ತಿಗೆ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಇಂಜುರಿಯಿಂದಾಗಿ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ಕಳೆದ ಆಸ್ಟ್ರೇಲಿಯಾ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಧವನ್ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್​ಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದ ಧವನ್, ನಂತರ ಫೀಲ್ಡಿಂಗ್​​ಗೆ ಬಂದಿರಲಿಲ್ಲ.

IND vs PAK: ಕೊಹ್ಲಿಯನ್ನು ಅಭಿನಂದನ್​ ರೀತಿ ವಿಚಾರಣೆಗೆ ಒಳಪಡಿಸಿದ ಪಾಕಿಗರು; ಪಾಪಿ ಕೃತ್ಯಕ್ಕೆ ಭಾರೀ ಆಕ್ರೋಶ

ಹೀಗಾಗಿ ಧವನ್ ಮೂರು ವಾರಗಳ ಕಾಲ ವಿಶ್ವಕಪ್​ನಿಂದ ಹೊರಗುಳಿಯಲಿದ್ದಾರೆ. ವಿಶ್ವಕಪ್​ ಮಧ್ಯಂತರದಲ್ಲಿ ಧವನ್ ಗಾಯಕ್ಕೆ ತುತ್ತಾಗಿರುವುದು ಕೊಹ್ಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಭಾರತ ತಂಡ ಇದೇ ಜೂನ್ ತಿಂಗಳಲ್ಲಿನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡದ ವಿರುದ್ಧ ಸೆಣಸಲಿದ್ದು, ಈ ಐದು ಪಂದ್ಯಗಳಿಂದ ಧವನ್ ವಂಚಿತರಾಗಲಿದ್ದಾರೆ.

ಧವನ್ ವಿಶ್ವಕಪ್​ನಿಂದ ಹೊರಗುಳಿದ ಕಾರಣ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಆಡುವ ಸಾಧ್ಯತೆಯಿದೆ. ರಾಹುಲ್ ಕಣಕ್ಕಿಳಿಯುತ್ತಿದ್ದ 4ನೇ ಕ್ರಮಾಂದಲ್ಲಿ ವಿಜಯ್ ಶಂಕರ್​ ಅಥವಾ ದಿನೇಶ್ ಕಾರ್ತಿಕ್​ಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ.

ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅತ್ಯತ್ತಮ ಆಟ ಪ್ರದರ್ಶಿಸಿದ್ದರು. ತಂಡದ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖ ಪಾತ್ರವಾಗಿತ್ತು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡಿದ್ದರು.

ಜೂನ್ 13 ರಂದು ಭಾರತ ತನ್ನ 4ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿದ್ದು ಅಭ್ಯಾಸಕ್ಕಾಗಿ ಧವನ್ ಮೈದಾನಕ್ಕೆ ಇಳಿದಿರಲಿಲ್ಲ.

First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...