ಇಂಗ್ಲೆಂಡ್ ವಿರುದ್ಧ ಸರಣಿಗೂ ಟೀಮ್ ಇಂಡಿಯಾ ಆಟಗಾರ ಡೌಟ್..!

ಫೆಬ್ರವರಿ ತಿಂಗಳಲಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮಾರ್ಚ್​ ಮೊದಲ ವಾರ ಒಂದು ಪಂದ್ಯ ಜರುಗಲಿದೆ. ಈ ಕೊನೆಯ ಪಂದ್ಯಕ್ಕೆ ಶಮಿ ಲಭ್ಯರಾಗುವ ನಿರೀಕ್ಷೆಯಿದೆ.

Mohammed Shami

Mohammed Shami

 • Share this:
  ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬುಧವಾರ ಭಾರತಕ್ಕೆ ಮರಳಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕಮಿನ್ಸ್​ ಎಸೆತದಲ್ಲಿ ಶಮಿ ಕೈಗೆ ಗಾಯವಾಗಿತ್ತು. ಇದರಿಂದ ಬ್ಯಾಟ್ ಮೇಲೆತ್ತಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ಶಮಿ ಮೊದಲ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದೀಗ ಪರಿಶೀಲನೆ ನಡೆಸಿರುವ ವೈದ್ಯರು ಮೂಳೆಗಳಲ್ಲಿ ಬಿರುಕು ಉಂಟಾಗಿದೆ ಎಂದು ತಿಳಿಸಿದ್ದು, ಮುಂದಿನ ಆರು ವಾರಗಳಗಳ ವಿಶ್ರಾಂತಿ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಂದ ಶಮಿ ಹೊರಗುಳಿದಿದ್ದಾರೆ.

  ಇತ್ತ ಆಸ್ಟ್ರೇಲಿಯಾ ಸರಣಿಯನ್ನು ಕೈ ತಪ್ಪಿಸಿಕೊಂಡಿರುವ ಶಮಿ ಇಂಗ್ಲೆಂಡ್ ವಿರುದ್ಧ ಕೂಡ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಫೆಬ್ರವರಿ 5ರಿಂದ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಈ ವೇಳೆಗೆ ಟೀಮ್ ಇಂಡಿಯಾ ವೇಗಿ ಚೇತರಿಸಿಕೊಳ್ಳುವುದು ಡೌಟ್. ಇನ್ನು ಫೆಬ್ರವರಿ ತಿಂಗಳಲಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮಾರ್ಚ್​ ಮೊದಲ ವಾರ ಒಂದು ಪಂದ್ಯ ಜರುಗಲಿದೆ. ಈ ಕೊನೆಯ ಪಂದ್ಯಕ್ಕೆ ಶಮಿ ಲಭ್ಯರಾಗುವ ನಿರೀಕ್ಷೆಯಿದೆ.

  ಇಂಗ್ಲೆಂಡ್-ಭಾರತ ಸರಣಿಯ ಪೂರ್ಣ ವೇಳಾಪಟ್ಟಿ

  1 ನೇ ಟೆಸ್ಟ್, ಚೆನ್ನೈ: ಫೆಬ್ರವರಿ 5 ರಿಂದ 9

  2 ನೇ ಟೆಸ್ಟ್, ಚೆನ್ನೈ: ಫೆಬ್ರವರಿ 13 ರಿಂದ 173 ನೇ ಟೆಸ್ಟ್, ಅಹಮದಾಬಾದ್ (ಹಗಲು ರಾತ್ರಿ): ಫೆಬ್ರವರಿ 24 ರಿಂದ 28 ರವರೆಗೆ

  4 ನೇ ಟೆಸ್ಟ್, ಅಹಮದಾಬಾದ್: ಮಾರ್ಚ್ 4 ರಿಂದ 8

  ಐದು ಟಿ 20 ಪಂದ್ಯಗಳು

  1 ನೇ ಟಿ-20 ಅಹಮದಾಬಾದ್: ಮಾರ್ಚ್ 12

  2 ನೇ ಟಿ-20 ಅಹಮದಾಬಾದ್: ಮಾರ್ಚ್ 14

  3 ನೇ ಟಿ-20 ಅಹಮದಾಬಾದ್: ಮಾರ್ಚ್ 16

  4 ನೇ ಟಿ-20 ಅಹಮದಾಬಾದ್: ಮಾರ್ಚ್ 18

  5 ನೇ ಟಿ-20 ಅಹಮದಾಬಾದ್: ಮಾರ್ಚ್ 20

  ಮೂರು ಏಕದಿನ ಪಂದ್ಯಗಳು

  1 ನೇ ಏಕದಿನ, ಪುಣೆ: ಮಾರ್ಚ್ 23

  2 ನೇ ಏಕದಿನ, ಪುಣೆ: ಮಾರ್ಚ್ 26

  3 ನೇ ಏಕದಿನ, ಪುಣೆ: ಮಾರ್ಚ್ 28
  Published by:zahir
  First published: