ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲು: ತಲೆಕೆಳಗಾದ ಸ್ಟಾರ್​ ಸ್ಪೋರ್ಟ್ಸ್​ ಲೆಕ್ಕಾಚಾರ

ICC World Cup: ಏಕೆಂದರೆ ಅತ್ಯಧಿಕ ಭಾರತ ವಿಶ್ವಕಪ್ ಫೈನಲ್​ ಪ್ರವೇಶಿಸುವ ಯೋಜನೆಯೊಂದಿಗೆ ಸ್ಟಾರ್ ಸ್ಪೋರ್ಟ್ಸ್​ ಜಾಹೀರಾತಿನ ಸಮಯ ಮತ್ತು ದರವನ್ನು ನಿಗದಿ ಮಾಡಿತ್ತು. ಇಲ್ಲಿ ಪ್ರತಿ ಸೆಕೆಂಡ್​ ಜಾಹೀರಾತಿಗೆ 25 ಲಕ್ಷದಿಂದ 30 ಲಕ್ಷದವರೆಗೂ ಗಳಿಸುವ ಅವಕಾಶ ಚಾನೆಲ್​ಗಿತ್ತು.

ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಲ್ಯೂಕಿ ಫರ್ಗ್ಯುಸನ್ ಈ ಸರಣಿಗೆ ಅಲಭ್ಯರಾಗಿದ್ದಾರೆ.

ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಲ್ಯೂಕಿ ಫರ್ಗ್ಯುಸನ್ ಈ ಸರಣಿಗೆ ಅಲಭ್ಯರಾಗಿದ್ದಾರೆ.

  • News18
  • Last Updated :
  • Share this:
ಐಸಿಸಿ ವಿಶ್ವಕಪ್ ಸೆಮಿಫೈನಲ್​ನಲ್ಲಿ ಸೋತು ಭಾರತ ಹೊರ ಬಿದ್ದಿರುವುದು ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ನ ಆದಾಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಫೈನಲ್​ಗೇರುವ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಟೀಂ ಇಂಡಿಯಾ ಅನೀರಿಕ್ಷಿತ ಸೋಲಿನ ಮೂಲಕ ಟೂರ್ನಿಯಿಂದ ಹೊರ ಬಿದ್ದಿತು. ಇದರಿಂದ ಈಗ ಪಂದ್ಯ ನೇರ ಪ್ರಸಾರ ಮಾಡುವ ಸ್ಟಾರ್​ ಸ್ಪೋರ್ಟ್​ಗೆ 10 ರಿಂದ 15 ಕೋಟಿಯಷ್ಟು ನಷ್ಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.​

ಏಕೆಂದರೆ ಅತ್ಯಧಿಕ ಭಾರತ ವಿಶ್ವಕಪ್ ಫೈನಲ್​ ಪ್ರವೇಶಿಸುವ ಯೋಜನೆಯೊಂದಿಗೆ ಸ್ಟಾರ್ ಸ್ಪೋರ್ಟ್ಸ್​ ಜಾಹೀರಾತಿನ ಸಮಯ ಮತ್ತು ದರವನ್ನು ನಿಗದಿ ಮಾಡಿತ್ತು. ಇಲ್ಲಿ ಪ್ರತಿ ಸೆಕೆಂಡ್​ ಜಾಹೀರಾತಿಗೆ 25 ಲಕ್ಷದಿಂದ 30 ಲಕ್ಷದವರೆಗೂ ಗಳಿಸುವ ಅವಕಾಶ ಚಾನೆಲ್​ಗಿತ್ತು. ಆದರೆ ಟೀಂ ಇಂಡಿಯಾ ಹೊರ ಬೀಳುತ್ತಿದ್ದಂತೆ ಫೈನಲ್​ ಪಂದ್ಯದ ವೀಕ್ಷಕರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಲಿದೆ. ಹೀಗಾಗಿ ಇಂಗ್ಲೆಂಡ್-ನ್ಯೂಜಿಲೆಂಡ್ ಕ್ರಿಕೆಟ್ ಕದನದ ಜಾಹೀರಾತು ದರ ಇಳಿದಿದ್ದು, ಇನ್ನು ಕೊನೆ ಕ್ಷಣದಲ್ಲಿ ಪ್ರತಿ ಸೆಕೆಂಡ್​​ಗೆ 15 ರಿಂದ 17 ಲಕ್ಷ ಪಡೆಯುವ ನಿರೀಕ್ಷೆಯಲ್ಲಿ ಸ್ಟಾರ್​ ಸ್ಪೋರ್ಟ್ಸ್​.

ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಪಂದ್ಯಗಳ ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್‌ ಸ್ಫೋರ್ಟ್ಸ್‌ ವಾಹಿನಿ, ಟಿವಿ ಜಾಹೀರಾತಿನ ಮೂಲಕ 1,200 ಕೋಟಿಯಿಂದ 1,500 ಕೋಟಿಯವರೆಗೆ ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿತ್ತು. ಹಾಗೆಯೇ ಹಾಟ್‌ಸ್ಟಾರ್‌ ಆ್ಯಪ್​ ಮೂಲಕ 300 ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಲ್ಲಿತ್ತು. ಆದರೆ ಭಾರತದ ಸೋಲಿನಿಂದ ಈಗ ಸ್ಟಾರ್​ ಸ್ಪೋರ್ಟ್ಸ್​ ಗಳಿಕೆಯಲ್ಲಿ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಮಾರ್ಕೆಟಿಂಗ್ ತಜ್ಞರೊಬ್ಬರು ತಿಳಿಸಿದ್ದಾರೆ.

ವಿಶ್ವಕಪ್ ಪಂದ್ಯಗಳ ಜಾಹೀರಾತಿಗಾಗಿ ಒಟ್ಟು 5,500 ಸೆಕೆಂಡ್‌ಗಳ ಅವಕಾಶವಿದ್ದು, ಫೈನಲ್‌ ಪಂದ್ಯದಲ್ಲಿ ಬೇಡಿಕೆ ಆಧರಿಸಿ 7,000 ಸೆಕೆಂಡ್‌ಗಳ ಜಾಹೀರಾತು ಅವಕಾಶವಿತ್ತು. ಇಲ್ಲಿ ಫೋನ್‌ ಪೇ, ಒನ್‌ಫ್ಲಸ್‌, ಹ್ಯಾವೆಲ್ಸ್, ಅಮೆಜಾನ್, ಡ್ರೀಮ್ 11, ಎಂಆರ್‌ಎಫ್ ಟಯರ್‌ಗಳು, ಊಬರ್, ಒಪೊ, ಫಿಲಿಪ್ಸ್, ಸಿಯೆಟ್‌ ಟಯರ್, ಸ್ವಿಗ್ಗಿ, ಏರ್‌ಟೆಲ್, ವೊಡಾಫೋನ್, ನೆಟ್‌ಫ್ಲಿಕ್ಸ್ ಮತ್ತು ಪೈಸಾ ಬಜಾರ್ ಒಳಗೊಂಡಂತೆ 40 ಕಂಪನಿಗಳೊಂದಿಗೆ ಸ್ಟಾರ್‌ ಸ್ಪೋರ್ಟ್ಸ್​ ಜಾಹೀರಾತು ಒಪ್ಪಂದ ಮಾಡಿಕೊಂಡಿದೆ.

ಭಾರತವು ಫೈನಲ್‌ ಪಂದ್ಯದಲ್ಲಿ ಆಡಿದ್ದರೆ, 10 ಸೆಕೆಂಡಿನ ಜಾಹೀರಾತುಗಳನ್ನು ₹30 ಲಕ್ಷ ನಿಗದಿ ಪಡಿಸುವ ಮೂಲಕ ಸ್ಟಾರ್ ಸ್ಫೋರ್ಟ್ಸ್‌ ಹೆಚ್ಚುವರಿಯಾಗಿ ₹8 ಕೋಟಿಯಿಂದ ₹10 ಕೋಟಿ ಗಳಿಸಬಹುದಿತ್ತು. ಆದರೆ ಸೆಮಿ ಫೈನಲ್​ ಸೋಲು ಚಾನೆಲ್​ನ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದೆ.

ಇದನ್ನೂ ಓದಿ: ವಿಶ್ವಕಪ್​ ಮಹಾಸಮರಕ್ಕೆ ಇಂಗ್ಲೆಂಡ್-ನ್ಯೂಜಿಲೆಂಡ್ ಸಜ್ಜು: ಯಾರು ಬಲಿಷ್ಠ? ಇಲ್ಲಿದೆ ಅಂಕಿ ಅಂಶ
First published: