ಟೀಂ ಇಂಡಿಯಾದ ಹೊಸ ಕೋಚ್ ಆಗಿ ಮುಂದಿನ 26 ತಿಂಗಳಿಗೆ ರವಿಶಾಸ್ತ್ರಿ ಅವರೇ ಮರು ಆಯ್ಕೆಯಾಗಿದ್ದಾರೆ. ಹೀಗಿರುವಾಗ ತನ್ನ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಶಾಸ್ತ್ರಿ, ಭಾರತ ಟಿ-20 ತಂಡ ಇನ್ನೂ ಬಲಿಷ್ಠವಾಗಬೇಕಿದೆ ಇದರ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
'ಭಾರತದ ಟಿ-20 ತಂಡಕ್ಕೆ ಹೊಸ ಮುಖದ ಜೊತೆ ಅದ್ಭುತ ಟ್ಯಾಲೆಂಟ್ ಇರುವ ಆಟಗಾರರ ಹುಡುಕಾಟದಲ್ಲಿದ್ದೇವೆ. ಏಕದಿನ ಮತ್ತು ಟಿ-20 ಕ್ರಿಕೆಟ್ಗೆ ಸಾಕಷ್ಟು ಭಿನ್ನತೆಯಿದೆ.
ಟೀಂ ಇಂಡಿಯಾದಲ್ಲಿ ಸದ್ಯದ ಏಕದಿನ ತಂಡದಲ್ಲಿ ಆಡುತ್ತಿರುವ ಆಟಗಾರರ ಪೈಕಿ 5 ರಿಂದ 6 ಜನ ಟಿ-20 ಕ್ರಿಕೆಟ್ಗೂ ಫಿಟ್ ಆಗಿರುವವರಿದ್ದಾರೆ. ಉಳಿದ ಆಟಗಾರರನ್ನು ಸೇರಿಸಿಕೊಳ್ಳುವ ಕೆಲಸ ಆಗಬೇಕಿದೆ' ಎಂದರು.
ಇನ್ನು ಟಿ-20 ಯಲ್ಲೂ ಭಾರತಕ್ಕೆ ಇರುವ 4 ಕ್ರಮಾಂಕದ ಸಮಸ್ಯೆ ಬಗ್ಗೆ ಮಾತನಾಡಿದ್ದು, 'ನಾವು ಹೆಚ್ಚು ಟಿ-20 ಪಂದ್ಯಗಳನ್ನು ಆಡಿಲ್ಲ. ಆಡಿದ ಪಂದ್ಯಗಳಲ್ಲಿ ಆ ಸ್ಥಾನದ ಕೊರತೆ ಅಷ್ಟೊಂದು ಎದ್ದುಕಾಣಲಿಲ್ಲ. ಆದರೂ ಕಡೆಗಣಿಸಿದೆ 4ನೇ ಕ್ರಮಾಂಕಕ್ಕೆ ಫಿಟ್ ಆಗುವ ಆಟಗಾರನನ್ನು ಸೆಲೆಕ್ಟ್ ಮಾಡುತ್ತೆವೆ. ರಿಷಭ್ ಪಂತ್, ಮಯಾಂಕ್ ಅಗರ್ವಾಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಕುಲ್ದೀಪ್, ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ' ಎಂದು ಶಾಸ್ತ್ರಿ ಹೇಳಿದ್ದಾರೆ.
ಹೊಸ ಟೆಸ್ಟ್ ಜೆರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರು ಫುಲ್ ಮಿಂಚಿಂಗ್; ಇಲ್ಲಿವೆ ಫೋಟೋಗಳು
'50 ಓವರ್ಗಳ ಪಂದ್ಯದಲ್ಲಿ 4ನೇ ಸ್ಥಾನವನ್ನು ಶ್ರೇಯಸ್ ಐಯರ್ ತುಂಬುವ ವಿಶ್ವಾಸವಿದೆ. ಜೊತೆಗೆ ಸಾಕಷ್ಟು ಯುವ ಪ್ರತಿಭಾವಂತ ಆಟಗಾರರು ಈ ಸಾಲಿನಲ್ಲಿದ್ದಾರೆ. ಏಕದಿನ ಕ್ರಿಕೆಟ್ನಲ್ಲೂ ಕೆಲ ಬದಲಾವಣೆ ಆಗಬೇಕಿದ್ದು, ಇದರ ಕೆಲವೂ ಪ್ರಗತಿಯಲ್ಲಿದೆ' ಎಂದು ಹೇಳಿದರು.
ಪಾಕ್ ವೇಗಿಗೆ ಭಾರತದ ಹುಡುಗಿ ಕ್ಲೀನ್ ಬೌಲ್ಡ್: ಹೇಗಿದೆ ಗೊತ್ತಾ ಯುವಜೋಡಿ
ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಬಗ್ಗೆ ಮಾತನಾಡಿದ ಶಾಸ್ತ್ರಿ, 'ಆ 30 ನಿಮಿಷ ಎಲ್ಲವನ್ನೂ ಬದಲಾಯಿಸಿತು. ಟೂರ್ನಿಯುದ್ದಕ್ಕೂ ನಾವು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದೆವು. ವಿಶ್ವಕಪ್ನಲ್ಲಿದ್ದ ಬೇರೆಲ್ಲಾ ತಂಡಗಳಗಿಂತಲೂ ಹೆಚ್ಚಿನ ಪಂದ್ಯವನ್ನು ನಾವು ಗೆದ್ದಿದ್ದೆವು. ಆದರೆ ಆ ಒಂದು ಕೆಟ್ಟ ದಿನ, ಕೆಟ್ಟ ಆಟ ಎಲ್ಲವನ್ನೂ ನಮ್ಮಿಂದ ದೂರವಾಗಿಸಿತು' ಎಂದು ರವಿ ಶಾಸ್ತ್ರಿ ಬೇಸರ ವ್ಯಕ್ತ ಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ