India's Strongest Playing XI| ಭಾರತದ 11ರ ಬಳಗವೇ ವಿಶ್ವದ ಶ್ರೇಷ್ಠ ಟಿ20 ಪಡೆ; ತಜ್ಞರ ಈ ಅಭಿಪ್ರಾಯಕ್ಕೆ ಕಾರಣವೇನು?

ಧವನ್ ಅನುಪಸ್ಥಿತಿಯಲ್ಲಿ ರೋಹಿತ್ ಮತ್ತು ರಾಹುಲ್ ಮೇಲೆ ತಂಡಕ್ಕೆ ಅತ್ಯುತ್ತಮ ಆರಂಭ ನೀಡುವ ಜವಾಬ್ದಾರಿ ಇದೆ. ಇನ್ನೂ ಆರಂಭಿಕರಾಗಿಯೇ ವೃತ್ತಿ ಬದುಕನ್ನು ಆರಂಭಿಸಿರುವ ಇಶಾನ್ ಕಿಶನ್​ರನ್ನು ಮೀಸಲು ಓಪನರ್ ಆಗಿ ಇರಿಸಿಕೊಳ್ಳುವ ಸಾಧ್ಯತೆ ಇದೆ.

ಟೀಂ ಇಂಡಿಯಾ.

ಟೀಂ ಇಂಡಿಯಾ.

 • News18
 • Last Updated :
 • Share this:
  ಟಿ20 ವಿಶ್ವಕಪ್​ಗೆ ದಿನಗಣೆನೆ ಆರಂಭವಾಗಿದೆ. ಆದರೆ, ಕಳೆದ ಹಲವು ದಿನಗಳಿಂದ ಟಿ20 ವಿಶ್ವಕಪ್​ಗಾಗಿ ಭಾರತದ 15ರ ಬಳಗದ ಬಗ್ಗೆ ಸಾಕಷ್ಟು ಊಹಾಪೋಹಗಳು ಮನೆ ಮಾಡಿದ್ದು ಸುಳ್ಳಲ್ಲ. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಕೊನೆಗೂ ಭಾರತದ ಟಿ20 ವಿಶ್ವಕಪ್ ತಂಡವನ್ನು ಘೋಷಿಸಿದೆ. ಅಲ್ಲದೆ, ಶಿಖರ್ ಧವನ್ ಮತ್ತು ಯಜುವೇಂದ್ರ ಚಹಲ್​ ರಂತಹ ಆಟಗಾರರನ್ನು ಹೊರಗಿಟ್ಟು ಅಚ್ಚರಿಯನ್ನೂ ಮೂಡಿಸಿದೆ. ಆದರೆ, ಬಿಸಿಸಿಐ ಸೆಪ್ಟೆಂಬರ್ 8 ರ ಬುಧವಾರ ಪ್ರಕಟಿಸಿದ ತಂಡವೇ ವಿಶ್ವದ ಬಲಿಷ್ಠ ತಂಡ. ಭಾರತದ ಪ್ಲೇಯಿಂಗ್ 11 ಅನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಮಾತುಗಳೂ ಇದೀಗ ಕೇಳಿ ಬರುತ್ತಿವೆ. ಕ್ರಿಕೆಟ್ ತಜ್ಞರೂ ಸಹ ಇದೇ ರೀತಿಯ ಅಭಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ.

  ಅನುಭವಿ ಆರಂಭಿಕ ಶಿಖರ್ ಧವನ್ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಹೊರಗಿಟ್ಟು ಅವರ ಸ್ಥಾನದಲ್ಲಿ ಯುವ ಜೋಡಿಯಾದ ಇಶಾನ್ ಕಿಶನ್ ಮತ್ತು ರಾಹುಲ್ ಚಾಹರ್ ಅವರನ್ನು ಆಯ್ಕೆ ಮಾಡಲಾಗಿದೆ. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಸಹ ಆಡುವ 11ರ ಬಳಗದಲ್ಲಿ ಆಯ್ಕೆ ಮಾಡುವ ಅವಕಾಶ ಇದೆ. ಆದರೆ, ಕಣಕ್ಕೆ ಇಳಿಯಲಿರುವ ಸಂಭಾವ್ಯ 11ರ ಬಳದಲ್ಲಿ ಆಡಲಿರುವ ಆಟಗಾರರು ಯಾರು?

  ಆರಂಭಿಕರಾಗಿ ರೋಹಿತ್-ರಾಹುಲ್ ಮೋಡಿ;

  ರೋಹಿತ್ ಶರ್ಮಾ ವಿಶ್ವದ ಅತ್ಯುತ್ತಮ ವೈಟ್-ಬಾಲ್ ಓಪನರ್ ಮತ್ತು ತಂಡದ ಉಪ-ನಾಯಕ. ಅವರ ಜೊತೆಯಲ್ಲಿ ಅವರ ಹೊಸ ಟೆಸ್ಟ್ ಪಾಲುದಾರ ಕೆಎಲ್ ರಾಹುಲ್ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟಿ 20  ಸರಣಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. ಹೀಗಾಗಿ ಈ ಜೋಡಿಯೇ ಟಿ20 ವಿಶ್ವಕಪ್​ನಲ್ಲೂ ಆರಂಭಿಕರಾಗಿ ಇಳಿಯಲಿದ್ದಾರೆ ಎಂಬುದು ಈಗಾಗಲೇ ಖಚಿತವಾಗಿದೆ. ಈ ಜೋಡಿ ಪಂದ್ಯದಲ್ಲಿ ಉತ್ತಮ ಆರಂಭ ನೀಡಿದರೆ ಎಂತಹಾ ಬೌಲರ್​ಗಳೂ ನೀರು ಕುಡಿಯುವುದು ಖಚಿತ.

  ಇದಲ್ಲದೆ, ಧವನ್ ಅನುಪಸ್ಥಿತಿಯಲ್ಲಿ ರೋಹಿತ್ ಮತ್ತು ರಾಹುಲ್ ಮೇಲೆ ತಂಡಕ್ಕೆ ಅತ್ಯುತ್ತಮ ಆರಂಭ ನೀಡುವ ಜವಾಬ್ದಾರಿ ಇದೆ. ಇನ್ನೂ ಆರಂಭಿಕರಾಗಿಯೇ ವೃತ್ತಿ ಬದುಕನ್ನು ಆರಂಭಿಸಿರುವ ಇಶಾನ್ ಕಿಶನ್​ರನ್ನು ಮೀಸಲು ಓಪನರ್ ಆಗಿ ಇರಿಸಿಕೊಳ್ಳುವ ಸಾಧ್ಯತೆ ಇದೆ.

  ಅಗ್ರ ಕ್ರಮಾಂಕಕ್ಕೆ ಕೊಹ್ಲಿ-ಸೂರ್ಯಕುಮಾರ್ ಆಸರೆ;

  ಆರಂಭಿಕರಾಗಿ ಕಣಕ್ಕಿಳಿಯುವ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದರೂ ಸಹ ವಿಶ್ವಕಪ್​ನಲ್ಲಿ ಅವರು ಮೂರನೇ ಕ್ರಮಾಂಕದಲ್ಲೇ ಕಣಕ್ಕಿಳಿಯಲಿದ್ದಾರೆ. 2017 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್, 2019 ರ ವಿಶ್ವಕಪ್‌ನ ಸೆಮಿಫೈನಲ್ ಮತ್ತು 2020-21 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋತ ವಿರಾಟ್ ಕೊಹ್ಲಿ ಐಸಿಸಿ ಟೂರ್ನಮೆಂಟ್‌ಗಳಲ್ಲಿ ನಾಯಕನಾಗಿ ಇನ್ನೂ ಯಶಸ್ಸಿನ ರುಚಿ ನೋಡಿಲ್ಲ. ಹೀಗಾಗಿ ಈ ಟೂರ್ನಿಯಲ್ಲಿ ಅವರ ಬ್ಯಾಟ್​ನಿಂದ ರನ್ ಹರಿಯುವ ನಿರೀಕ್ಷೆ ಇದೆ.

  ನಾಲ್ಕನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ ಇದೆ. ಆದರೂ, ಸೂರ್ಯಕುಮಾರ್​ಗೆ ಹೆಚ್ಚಿನ ಅವಕಾಶವಿದೆ. ಸೂರ್ಯಕುಮಾರ್ ಯಾದವ್ ಕೇವಲ ನಾಲ್ಕು ಟಿ 20 ಪಂದ್ಯಗಳು ಸೇರಿದಂತೆ ಒಟ್ಟು ಏಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಕನಿಷ್ಟ ಅವಧಿಯಲ್ಲಿ ಅವರು ಈಗಾಗಲೇ ಭಾರತೀಯ ಬ್ಯಾಟಿಂಗ್ ಶ್ರೇಣಿಯ ಪ್ರಮುಖ ಕಾಗ್‌ಗಳಲ್ಲಿ ಒಬ್ಬರಾಗಿದ್ದಾರೆ.

  ಇದನ್ನೂ ಓದಿ: Ajinkya Rahane| ಮುಗಿಯಿತೇ ಅಜಿಂಕ್ಯಾ ರಹಾನೆ ಕ್ರಿಕೆಟ್​ ಭವಿಷ್ಯ, ಏನು ಹೇಳುತ್ತಿವೆ ಅಂಕಿಅಂಶ?

  ಬಲಿಷ್ಠ ಮಧ್ಯಮ ಕ್ರಮಾಂಕ;

  ಇಶಾನ್ ಕಿಶನ್ ತಂಡಕ್ಕೆ ಕಾಲಿಟ್ಟಿದ್ದರೂ, ರಿಷಬ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರುತ್ತಾರೆ. 23 ವರ್ಷದ ಅವರು ತಮ್ಮ ವೃತ್ತಿಜೀವನದ ಉದಾಸೀನ ಆರಂಭದ ನಂತರ ನಿಧಾನವಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಬಲವಾಗಿ ಬೇರೂರುತ್ತಿದ್ದಾರೆ. ಹೀಗಾಗಿ ಪಂತ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಇನ್ನೂ ಹಾರ್ದಿಕ್ ಪಾಂಡ್ಯ ವಿರಾಟ್​ ಕೊಹ್ಲಿಯ ನಂಬಿಕಾರ್ಹ ಹಿಟ್ಟರ್​. ಕೆಳ ಕ್ರಮಾಂಕದಲ್ಲಿ ಅವರ ಹಾಗೆ ರನ್​ರೇಟ್​ ಏರಿಸುವ ಮತ್ತೋರ್ವ ಆಟಗಾರ ಇಲ್ಲ. ಉಳಿದಿರುವ ಮತ್ತೊಂದು ಸ್ಥಾನಕ್ಕೆ ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್ ನಡುವೆ ಪೈಪೋಟಿ ಇದೆ.

  ಇದನ್ನೂ ಓದಿ: Malhotra Sixers- ಆರು ಬಾಲ್​ಗೆ ಆರು ಸಿಕ್ಸ್- ಗಿಬ್ಸ್ ವಿಶ್ವದಾಖಲೆ ಸರಿಗಟ್ಟಿದ ಜಸ್​ಕರಣ್ ಮಲ್ಹೋತ್ರಾ

  ಸ್ಪಿನ್-ವೇಗ ಮಿಶ್ರಿತ ಬೌಲಿಂಗ್ ಪಡೆ;

  ಭಾರತದ ವೇಗದ ಬೌಲಿಂಗ್ ಪಡೆಯನ್ನು ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಮುನ್ನಡೆಸುತ್ತಿದ್ದಾರೆ. ನಿಖರ ಮತ್ತು ವೇಗಕ್ಕೆ ಹೆಸರಾಗಿರುವ ಈ ತ್ರಿಮೂರ್ತಿಗಳ ಜೋತೆ ಎಂತಹ ಬ್ಯಾಟ್ಸ್​ಮನ್​ಗಳನ್ನು ತಬ್ಬಿಬ್ಬುಗೊಳಿಸುವುದರಲ್ಲಿ ಸಂಶಯ ಇಲ್ಲ.

  ಸ್ಪಿನ್​ ವಿಭಾಗದಲ್ಲಿ ಹಿರಿಯ ಬೌಲರ್ ರವಿಚಂದ್ರನ್ ಅಶ್ವಿನ್, ಆಫ್​ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ನಡುವೆ ಪೈಪೋಟಿ ಇದ್ದು, ಮೂವರಲ್ಲಿ ಇಬ್ಬರ ಸ್ಥಾನ ಖಚಿತ. ಆದರೆ, ಯಾರಿಗೆ ಅವಕಾಶ ಸಿಕ್ಕರೂ ಅವರು ಪಂದ್ಯದಲ್ಲಿ ಎದುರಾಳಿಗಳಿಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ.
  Published by:MAshok Kumar
  First published: