• Home
  • »
  • News
  • »
  • sports
  • »
  • IND vs WI T20: ಭಾರತ vs ವೆಸ್ಟ್ ಇಂಡೀಸ್ T20 ಪಂದ್ಯದ ತಂಡ ಪ್ರಕಟ; ಕೊಹ್ಲಿಗಿಲ್ಲ ಅವಕಾಶ, ರೋಹಿತ್ ಶರ್ಮಾ ನಾಯಕ

IND vs WI T20: ಭಾರತ vs ವೆಸ್ಟ್ ಇಂಡೀಸ್ T20 ಪಂದ್ಯದ ತಂಡ ಪ್ರಕಟ; ಕೊಹ್ಲಿಗಿಲ್ಲ ಅವಕಾಶ, ರೋಹಿತ್ ಶರ್ಮಾ ನಾಯಕ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ತಂಡದ ಭಾಗವಾಗಿಲ್ಲ. ಜಸ್ಪ್ರೀತ್ ಬುಮ್ರಾ ಸಹ ತಂಡದ ಭಾಗವಾಗಿಲ್ಲ.

  • Share this:

    ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಗಾಗಿ ಭಾರತ ತಂಡವನ್ನು (India’s Squad For T20I Series Against West Indies) ಪ್ರಕಟಿಸಲಾಗಿದೆ.  ವೆಸ್ಟ್ ಇಂಡೀಸ್ ವಿರುದ್ಧದ ಅಂತರಾಷ್ಟ್ರೀಯ T20 ಸರಣಿಗೆ ರೋಹಿತ್ ಶರ್ಮಾ (Rohit Sharma) ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.  ಆದರೆ ವಿರಾಟ್ ಕೊಹ್ಲಿ (Virat Kohli) ತಂಡದ ಭಾಗವಾಗಿಲ್ಲ. ಜಸ್ಪ್ರೀತ್ ಬುಮ್ರಾ (Jasprit Bumrah) ಸಹ ತಂಡದ ಭಾಗವಾಗಿಲ್ಲ.  ರೋಹಿತ್ ಶರ್ಮಾ (ಕ್ಯಾಪ್ಟನ್), ಇಶಾಂತ್ ಕಿಶನ್, ಕೆಎಲ್ ರಾಹುಲ್*, ಎಸ್ ಯಾದವ್, ಡಿ ಹೂಡಾ, ಎಸ್ ಅಯ್ಯರ್, ಡಿ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್. ಅಶ್ವಿನ್, ರವಿ ಬಿಷ್ಣೋಯ್ , ಕುಲದೀಪ್ ಯಾದವ್*, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ತಂಡದ ಭಾಗವಾಗಿದ್ದಾರೆ.


    ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಐದು ಪಂದ್ಯಗಳ T20I ಸರಣಿಗೆ ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಗುರುವಾರ ತಂಡವನ್ನು ಹೆಸರಿಸಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ವೆಸ್ಟ್ ಇಂಡೀಸ್ ವಿರುದ್ಧ ಆಡುತ್ತಿಲ್ಲ. ಕೆಎಲ್ ರಾಹುಲ್ ತಂಡಕ್ಕೆ ವಾಪಸಾಗಿದ್ದಾರೆ. ಆದರೆ, ಅವರ ಫಿಟ್‌ನೆಸ್‌ ಆಧರಿಸಿ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.


    ರವಿಚಂದ್ರನ್ ಅಶ್ವಿನ್ ವಾಪಸ್
    ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ತಂಡದ ಭಾಗವಾಗಿದ್ದಾರೆ.  ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಸರಣಿಯಲ್ಲಿ ಕೊಹ್ಲಿ ಮತ್ತು ಬುಮ್ರಾ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದರೆ ಬಿಸಿಸಿಐ ಘೋಷಣೆ ಮಾಡಿರುವ  ಟ್ವೀಟ್‌ನಲ್ಲಿ ಅದೇ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ.


    ಇದನ್ನೂ ಓದಿ: Sports Anchor: ಕ್ರೀಡಾ ಆ್ಯಂಕರ್​​​ಗಳ ಸೌಂದರ್ಯಕ್ಕೆ ಮನಸೋತು ಅವರನ್ನೇ ಮದುವೆಯಾದ 5 ಕ್ರಿಕೆಟಿಗರಿವರು!


    ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಮುಂಬರುವ ಸರಣಿಗಾಗಿ T20I ತಂಡದ ಭಾಗವಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20I ಸರಣಿಯು ಜುಲೈ 29 ರಂದು ಪ್ರಾರಂಭವಾಗಲಿದೆ, ಆದರೆ ಅದಕ್ಕೂ ಮೊದಲು ಜುಲೈ 22 ರಿಂದ ಪ್ರಾರಂಭವಾಗುವ ಮೂರು ODI ಗಳನ್ನು ಸಹ ಆಡಲಾಗುತ್ತದೆ.


    ಇದನ್ನೂ ಓದಿ: ICC Rankings: ಪಾಕ್​ ಮೇಲೆ ಟೀಂ ಇಂಡಿಯಾ ಸವಾರಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಭಾರತ ತಂಡ


    ಕುಲದೀಪ್ ಯಾದವ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  ಆದರೆ ಅವರ ಸೇರ್ಪಡೆಯೂ ಸಹ ಫಿಟ್‌ನೆಸ್‌ ಆಧರಿಸಿ ನಿರ್ಧರಿಸಲ್ಪಡುತ್ತದೆ.


    ಏಕದಿನ ಸರಣಿಗೆ ತಂಡ ಘೋಷಣೆ
    ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಹೆಸರಿಸಲಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಉಮ್ರಾನ್ ಮಲಿಕ್ ತಂಡದ ಭಾಗವಾಗಿಲ್ಲ ಮತ್ತು ಅರ್ಶ್ದೀಪ್ ಸಿಂಗ್ ತಂಡದ ಭಾಗವಾಗಿದ್ದಾರೆ

    Published by:guruganesh bhat
    First published: