ಲಾಕ್ಡೌನ್ ಸಮಯದಲ್ಲಿ ಕ್ರೀಡಾಪಟುಗಳು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಇದ್ದುಕೊಂಡು ವರ್ಕೌಟ್ ಮಾಡುತ್ತ ಫಿಟ್ ಆಗಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ಪೂನಂ ರಾಣಿ ಮಲ್ಲಿಕ್ ಮಾತ್ರ ಗದ್ದೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಭಾರತದ ಮಹಿಳಾ ಹಾಕಿ ತಂಡದ ಪರ ಇನ್ನೂರಕ್ಕೂ ಅಧಿಕ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಪೂನಂ ರಾಣಿ ಲಾಕ್ಡೌನ್ ಸಮಯದಲ್ಲಿ ಗೋಧಿ ಕೊಹ್ಲಿನಲ್ಲಿ ಕೆಲಸ ಮಾಡುತ್ತಾ ಲಾಕ್ಡೌನ್ ಕಳೆಯುತ್ತಿದ್ದಾರೆ.
ಪೂನಂ ರಾಣಿ ಮಲ್ಲಿಕ್ ಹರಿಯಾಣದ ಹಿಸಾರ್ನ ಉಮ್ರಾ ಗ್ರಾಮದ ರೈತ ಕುಟುಂಬದಿಂದ ಬಂದವರು. ಸಾಕಷ್ಟು ಅಂತರಾಷ್ಟ್ರೀಯ ಹಾಕಿ ಪಂದ್ಯವನ್ನು ಆಡಿದ್ದಾರೆ. ಆದರೆ ತಮ್ಮ ಮೂಲ ಕಸುಬನ್ನು ಮಾತ್ರ ಪೂನಂ ರಾಣಿ ಮರೆತಿಲ್ಲ. ಹಾಕಿ ಆಡಲು ಸೈ, ಕಟಾವು ಮಾಡಲು ಸೈ ಎಂದು ತೋರಿಸಿಕೊಟ್ಟಿದ್ದಾರೆ.
ಕೊರೋನಾದಿಂದಾಗಿ ಕೆಲಸಗಾರರು ಸಿಗುತ್ತಿಲ್ಲ. ಹಾಗಾಗಿ ಪೂನಂ ರಾಣಿ ಕುಟುಂಬದವರೊಂದಿಗೆ ಸೇರಿಕೊಂಡು ಗದ್ದೆಯಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಇದೇ ಮೊದಲ ಸಲ ನಾನು ಗದ್ದೆಗೆ ಗೋಧಿ ಕಟಾವಿಗೆ ಬಂದಿದ್ದೇನೆ. ಕ್ರೀಡೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರಿಂದ ಸುಗ್ಗಿಯ ಸಮಯದಲ್ಲಿ ನಾನು ಮನೆಯಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ರೈತರು ಪರಿಚಯವಿಲ್ಲದ ಕಾರ್ಮಿಕರಿಗೆ ಕೆಲಸ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವು ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಹೀಗಾಗಿ ನಾನು ಗದ್ದೆಗೆ ತೆರಳಿ ಕುಟುಂಬ ಸದ್ಯರೊಂಡನೆ ಕೆಲಸ ಮಾಡುತ್ತಿದ್ದೇನೆ ಎಂದರು.
ಪೂನಂ ರಾಣಿ ಅವರು ಹರಿಯಾಣ ಹಾಕಿ ತಂಡ ನಾಯಕಿಯಾಗಿದ್ದಾರೆ. ಲಾಕ್ಡೌನ್ ಆರಂಭಕ್ಕೂ ಮೊದಲು ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿ ಚಿನ್ನವನ್ನು ತಂದು ಕೊಟ್ಟಿದ್ದಾರೆ. ಇನ್ನು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
KGF Chapter 2: ನರಾಚಿ ಸೆಟ್ನಲ್ಲಿ ಕ್ರಿಕೆಟ್ ಆಟ; ಬ್ಯಾಟ್ ಹಿಡಿದು ಧೂಳೆಬ್ಬಿಸಿದ್ದ ಕೆ.ಜಿ.ಎಫ್ ಡೈರೆಕ್ಟರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ