ಪುರುಷ ಕ್ರಿಕೆಟ್ನಲ್ಲಿ ಅದ್ಭುತ ಕ್ಯಾಚ್ಗಳು ಮೂಡಿಬರುವುದು ಸರ್ವೆಸಾಮಾನ್ಯ. ಆದರೆ ಕೆಲವೊಮ್ಮೆ ಮಹಿಳಾ ಕ್ರಿಕೆಟರುಗಳು ಮೈದಾನದಲ್ಲಿ ಮಾಡುವ ಜಾದು ಇದೆಯಲ್ವಾ ಅದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡುತ್ತೆ. ಅಂತಹದೊಂದು ಮ್ಯಾಜಿಕ್ ಮಾಡಿದ್ದಾರೆ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್.
ನಾರ್ಥಾಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮಹಿಳಾ ಟಿ20 ಪಂದ್ಯದಲ್ಲಿ ಹರ್ಲೀನ್ ಡಿಯೋಲ್ ಹಿಡಿದಿರುವ ಅತ್ಯಾಧ್ಭುತ ಕ್ಯಾಚ್ ಇದೀಗ ಹೊಸ ಸಂಚಲನ ಸೃಷ್ಟಿಸಿದೆ. ಪಂದ್ಯದ 18.5ನೇ ಓವರ್ನಲ್ಲಿ ಶಿಖಾ ಪಾಂಡೆ ಎಸೆತಕ್ಕೆ ಆಮಿ ಎಲ್ಲೆನ್ ಜೋನ್ಸ್ ಭರ್ಜರಿ ಹೊಡೆತ ಬಾರಿಸಿದ್ದರು. ಚೆಂಡೆ ಇನ್ನೇನು ಬೌಂಡರಿ ಲೈನ್ ದಾಟಿತು ಅನ್ನುವಷ್ಟರಲ್ಲಿ ಎಗರಿ ಬಾಲ್ನ್ನು ಬಂಧಿಸುವಲ್ಲಿ ಹರ್ಲೀನ್ ಯಶಸ್ವಿಯಾಗಿದ್ದರು. ಆದರೆ, ಸಂಪೂರ್ಣವಾಗಿ ಬ್ಯಾಲೆನ್ಸ್ ಮಾಡಲು ಸಾಧ್ಯವಾಗಿಲ್ಲ. ನಿಯಂತ್ರಣ ತಪ್ಪಿ ಸಿಕ್ಸ್ ಗೇರೆ ದಾಟುವ ಹೊತ್ತಿಗೆ ಚೆಂಡನ್ನು ಮತ್ತೆ ಮೈದಾನಕ್ಕೆ ಎಸೆದರು. ಅಷ್ಟೇ ವೇಗದಲ್ಲಿ ಇದೇವೇಳೆ ಬೌಂಡರಿ ಲೈನ್ ಹೊರಗಿನಿಂದ ಜಿಗಿದು ಸೂಪರ್ ಮ್ಯಾನ್ನಂತೆ ಬಾಲ್ ಹಿಡಿದು ಹರ್ಲೀನ್ ಡಿಯೋಲ್ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಹರ್ಲೀನ್ ಡಿಯೋಲ್ ಹಿಡಿದಿರುವ ಈ ಅತ್ಯಾಧ್ಬುತ ಕ್ಯಾಚ್ ಬಗ್ಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾ ಆಟಗಾರ್ತಿಯ ಫೀಲ್ಡಿಂಗ್ನ್ನು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಹಾಡಿ ಹೊಗಳಿದ್ದಾರೆ. ನಾನು ನೋಡಿದ ಅತ್ಯಾಧ್ಭುತ ಕ್ಯಾಚ್ ಇದು ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರೇ ಹರ್ಲೀನ್ ಕ್ಯಾಚ್ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅದ್ಭುತ ಕ್ಯಾಚ್ ಹರ್ಲೀನ್ ಡಿಯೋಲ್, ಖಂಡಿತವಾಗಿಯೂ ಇದು ಕ್ಯಾಚ್ ಆಫ್ ದಿ ಇಯರ್ ಎಂದು ಸಚಿನ್ ಹಾಡಿ ಹೊಗಳಿದ್ದಾರೆ.
That was a brilliant catch @imharleenDeol. Definitely the catch of the year for me!pic.twitter.com/pDUcVeOVN8
— Sachin Tendulkar (@sachin_rt) July 10, 2021
A fantastic piece of fielding 👏
We finish our innings on 177/7
Scorecard & Videos: https://t.co/oG3JwmemFp#ENGvIND pic.twitter.com/62hFjTsULJ
— England Cricket (@englandcricket) July 9, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ