ಇದೇ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಮಹಿಳಾ ಓಡಿಐ ವಿಶ್ವಕಪ್ ಪಂದ್ಯಾವಳಿಗೆ (Women’s ODI World Cup) 15 ಆಟಗಾರ್ತಿಯರ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರ್ತಿ ಮಿಥಾಲಿ ರಾಜ್ (Mithali Raj) ಅವರು ನಾಯಕಿಯಾದರೆ, ಹರ್ಮನ್ಪ್ರೀತ್ ಕೌರ್ (Harmanpreet Kaur) ಉಪನಾಯಕಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿಶ್ವದಾಖಲೆ ವೇಗದ ಬೌಲರ್ ಝುಲನ್ ಗೋಸ್ವಾಮಿ, ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೆಮಿಮಾ ರಾಡ್ರಿಗೆಸ್ (Jemima Rodrigues) ಮತ್ತು ಶಿಖಾ ಪಾಂಡೆ ಅವರು ತಂಡದಲ್ಲಿ ಸ್ಥಾನ ಸಿಗದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.
ಒಟ್ಟು 15 ಆಟಗಾರ್ತಿಯರ ತಂಡದ ಜೊತೆಗೆ ಮೂವರು ಆಟಗಾರ್ತಿಯರನ್ನ ಸ್ಟ್ಯಾಂಡ್ ಬೈ ಆಗಿ ಆಯ್ಕೆ ಮಾಡಲಾಗಿದೆ. ವಿಶ್ವಕಪ್ಗೆ ಮುನ್ನ ನ್ಯೂಜಿಲೆಂಡ್ನಲ್ಲಿ ಭಾರತದ ವನಿತೆಯರು ಐದು ಓಡಿಐ ಮತ್ತು ಒಂದು ಟಿ20 ಪಂದ್ಯಗಳನ್ನ ಆಡಲಿದ್ಧಾರೆ. ವಿಶ್ವಕಪ್ಗೆ ಆಯ್ಕೆ ಆಗಿರುವ ತಂಡದ ಬಹುತೇಕ ಆಟಗಾರರು ಕಿವೀಸ್ ವಿರುದ್ಧದ ಸರಣಿಯಲ್ಲಿ ಆಡಲಿದ್ದಾರೆ. ಆದರೆ, ವಿಶ್ವಕಪ್ ತಂಡಕ್ಕೆ ನಾಯಕಿಯಾಗಿರುವ ಮಿಥಾಲಿ ರಾಜ್ ಮತ್ತು ವೇಗದ ಬೌಲರ್ ಝುಲನ್ ಗೋಸ್ವಾಮಿ ಅವರು ಓಡಿಐ ಮತ್ತು ಟಿ20 ಸರಣಿಯಲ್ಲಿ ಆಡುವುದಿಲ್ಲ ಎಂಬುದು ತಿಳಿದುಬಂದಿದೆ.
ಫೆಬ್ರವರಿ 9ರಿಂದ ಫೆಬ್ರವರಿ 24ರವರೆಗೆ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಒಂದು ಟಿ20 ಮತ್ತು ಐದು ಏಕದಿನ ಪಂದ್ಯಗಳನ್ನ ಭಾರತೀಯರು ಆಡಲಿದ್ಧಾರೆ. ಮಾರ್ಚ್ 6ರಂದು ತಂಡದ ವಿಶ್ವಕಪ್ ಅಭಿಯಾನ ಶುರುವಾಗಲಿದೆ. ಪಾಕಿಸ್ತಾನ ವಿರುದ್ಧ ಭಾರತದ ಮೊದಲ ಪಂದ್ಯ ನಿಗದಿಯಾಗಿದೆ. ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗು ಸೌತ್ ಆಫ್ರಿಕಾ ವಿರುದ್ಧ ಭಾರತದ ಪಂದ್ಯಗಳಿವೆ. ಮಾರ್ಚ್ 27ರಂದು ಭಾರತದ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ.
ಇದನ್ನೂ ಓದಿ: Happy Birthday Kapil Dev: ಭಾರತ ಮ್ಯಾಚ್ ಗೆದ್ದರೆ ಅದೇ ಕಪಿಲ್ಗೆ ಗಿಫ್ಟ್ ಎಂದ ಗವಾಸ್ಕರ್
ವಿಶ್ವಕಪ್ನಲ್ಲಿ ಭಾರತ ಮಹಿಳಾ ತಂಡದ ಪಂದ್ಯಗಳು:
1) ಮಾ. 6: ಪಾಕಿಸ್ತಾನ ವಿರುದ್ಧ
2) ಮಾ. 10: ನ್ಯೂಜಿಲೆಂಡ್ ವಿರುದ್ಧ
3) ಮಾ. 12: ವೆಸ್ಟ್ ಇಂಡೀಸ್ ವಿರುದ್ಧ
4) ಮಾ. 16: ಇಂಗ್ಲೆಂಡ್ ವಿರುದ್ಧ
5) ಮಾ. 19: ಆಸ್ಟ್ರೇಲಿಯಾ ವಿರುದ್ಧ
6) ಮಾ. 22: ಬಾಂಗ್ಲಾದೆಶ ವಿರುದ್ಧ
7) ಮಾ. 27: ಸೌತ್ ಆಫ್ರಿಕಾ ವಿರುದ್ಧ
ಮಹಿಳಾ ವಿಶ್ವಕಪ್ಗೆ ಪ್ರಕಟವಾಗಿರುವ ಭಾರತ ತಂಡ:
ಮಿಥಾಲಿ ರಾಜ್ (ನಾಯಕಿ), ಹರ್ಮನ್ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಸ್ನೇಹ್ ರಾಣ, ಝುಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿ.ಕೀ.), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್.
ಸ್ಟ್ಯಾಂಡ್ಬೈ ಆಟಗಾರ್ತಿಯರು: ಸಬ್ಬಿನೇನಿ ಮೇಘನಾ, ಏಕ್ತಾ ಬಿಷ್ತ್, ಸಿಮ್ರಾನ್ ದಿಲ್ ಬಹದೂರ್.
ಇದನ್ನೂ ಓದಿ: PKL 8: ನವೀನ್, ರಜನೀಶ್ ಸೂಪರ್20 ರೇಡ್; ಟೈಟಾನ್ಸ್ಗೆ ವೀರೋಚಿತ ಸೋಲು; ಪುಣೇರಿಗೆ ಸುಲಭ ಗೆಲುವು
ನ್ಯೂಜಿಲೆಂಡ್ ವಿರುದ್ಧದ ಒಂದು ಟಿ20 ಪಂದ್ಯಕ್ಕೆ ಪ್ರಕಟಿಸಲಾದ ಭಾರತ ಮಹಿಳಾ ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಸ್ನೇಹ್ ರಾಣ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿ.ಕೀ.), ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ಏಕ್ತಾ ಬಿಷ್ತ್, ಸಬ್ಬಿನೇನಿ ಮೇಘನಾ, ಸಿಮ್ರಾನ್ ದಿಲ್ ಬಹದೂರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ