ಬೆಂಗಳೂರು (ನ. 03): 2020 ರಲ್ಲಿ ನಡೆಯಲಿರುವ ಟೋಕೊಯೋ ಒಲಿಂಪಿಕ್ಸ್ಗೆ ಭಾರತೀಯ ಮಹಿಳಾ ಹಾಕಿ ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ. ಅಮೆರಿಕಾ ವಿರುದ್ಧ ಭಾರತ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಒಲಿಂಪಿಕ್ ಇತಿಹಾಸದಲ್ಲಿ ಮೂರನೇ ಬಾರಿಗೆ ಅರ್ಹತೆ ಪಡೆದುಕೊಂಡ ಸಾಧನೆ ಮಾಡಿದೆ.
ಒಡಿಶಾದ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಹೀನಾಯ ಸ್ಥಿತಿಯಲ್ಲಿತ್ತು. ಪಂದ್ಯ ಭಾರತದ ಕೈಚೆಲ್ಲಿತು ಎಂದೇ ಹೇಳಲಾಗಿತ್ತು. 28 ನಿಮಿಷದವರೆಗೆ ಭಾರತ ಯಾವುದೇ ಗೋಲ್ ಗಳಿಸಿರಲಿಲ್ಲ. ಆದರೆ, ಈ ಹೊತ್ತಿಗೆ ಅಮೆರಿಕಾ 4-0 ಮುನ್ನಡೆ ಸಾಧಿಸಿತ್ತು.
ಹೀಗಾಗಿ ಎರಡನೇ ಲೆಗ್ ಅರ್ಹತಾ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋಲನುಭವಿಸಿದರೂ 6-5 ಗೋಲುಗಳ ಅಂತರವನ್ನು ಕಾಯ್ದುಕೊಂಡಿರುವ ರಾಣಿ ರಾಂಪಾಲ್ ಪಡೆಯ ಗೋಲುಗಳ ಸಂಖ್ಯೆ 5-5 ರ ಸಮಬಲದಲ್ಲಿತ್ತು.
ಭಾರತ vs ಬಾಂಗ್ಲಾ ಮೊದಲ ಟಿ-20 ಎಷ್ಟು ಗಂಟೆಗೆ ಆರಂಭ?, ಯಾವುದರಲ್ಲಿ ನೇರ ಪ್ರಸಾರ?; ಇಲ್ಲಿದೆ ಸಂಪೂರ್ಣ ವಿವರ
Captain Courageous! 👏🔥
IND 1-4 USA#IndiaKaGame #INDvUSA #RoadToTokyo #Tokyo2020 #KalingaKalling #GiftOfHockey pic.twitter.com/RDOjT83rfJ
— Hockey India (@TheHockeyIndia) November 2, 2019
HdhjdjdbdjdndndnddnkekskakbekayiehdjehenensbdndbebebeebYeaaaahhhhhhhhhhhhhhhhhh!!!!!!!!
.
.
.
We can’t keep calm coz we’re coming to Tokyo!🎌🛫#IndiaKaGame #RoadToTokyo #Tokyo2020 #KalingaKalling #GiftOfHockey pic.twitter.com/H2Yvps6jIX
— Hockey India (@TheHockeyIndia) November 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ