• Home
  • »
  • News
  • »
  • sports
  • »
  • ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್​ಗೆ ಭಾರತ; ಕಿವೀಸ್ ಪಡೆ ವಿರುದ್ಧ ರೋಚಕ ಗೆಲುವು

ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್​ಗೆ ಭಾರತ; ಕಿವೀಸ್ ಪಡೆ ವಿರುದ್ಧ ರೋಚಕ ಗೆಲುವು

2018 ರಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 194 ರನ್ ಗಳಿಸಿದ್ದು ವಿಶ್ವ ದಾಖಲೆಯಾಗಿತ್ತು. ಇದೀಗ 1 ರನ್ ಹೆಚ್ಚು ಗಳಿಸುವ ಮೂಲಕ ದ.ಆಫ್ರಿಕಾ ತಂಡವು ಹೊಸ ಸಾಧನೆಗೈದಿದೆ.

2018 ರಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 194 ರನ್ ಗಳಿಸಿದ್ದು ವಿಶ್ವ ದಾಖಲೆಯಾಗಿತ್ತು. ಇದೀಗ 1 ರನ್ ಹೆಚ್ಚು ಗಳಿಸುವ ಮೂಲಕ ದ.ಆಫ್ರಿಕಾ ತಂಡವು ಹೊಸ ಸಾಧನೆಗೈದಿದೆ.

ಈ ಗೆಲುವಿನೊಂದಿಗೆ ಭಾರತದ ಮಹಿಳಾ ತಂಡ ಈ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದ ಮೊದಲ ತಂಡವೆನಿಸಿತು. ಭಾರತೀಯರು ತಮ್ಮ ಹಿಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳನ್ನ ಸೋಲಿಸಿದ್ದರು. ಫೆ. 29ರಂದು ಶ್ರೀಲಂಕನ್ನರ ವಿರುದ್ಧ ತನ್ನ ಕೊನೆಯ ಪಂದ್ಯವಾಡಲಿದೆ.

  • News18
  • Last Updated :
  • Share this:

ಮೆಲ್ಬೋರ್ನ್(ಫೆ. 27): ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಇಂದು ನಡೆದ ಎ ಗುಂಪಿನ ಲೀಗ್ ಹಂತದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತದ ವನಿತೆಯರು 4 ರನ್​ಗಳಿಂದ ರೋಚಕ ಜಯಸಾಧಿಸಿದರು. ನಿಗದಿತ 20 ಓವರ್​ನಲ್ಲಿ ಭಾರತೀಯರು ಗಳಿಸಿದ 133 ರನ್​ಗೆ ಪ್ರತಿಯಾಗಿ ನ್ಯೂಜಿಲೆಂಡ್ ಮಹಿಳೆಯರು 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲು ಶಕ್ಯರಾದರು. ಭಾರತಕ್ಕೆ ಇದು ಹ್ಯಾಟ್ರಿಕ್ ಗೆಲುವಾಗಿದ್ದು ಇನ್ನೊಂದು ಸುತ್ತು ಬಾರಿ ಇರುವಂತೆಯೇ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತೀಯರು ಸಾಧಾರಣ ಆರಂಭ ಕಂಡರು. ಶಫಾಲಿ ವರ್ಮಾ, ತಾನಿಯಾ ಭಾಟಿಯಾ ಇಬ್ಬರೂ ಉತ್ತಮ ಆಟ ಆಡಿದ ಫಲವಾಗಿ ತಂಡದ ಸ್ಕೋರು 133 ರನ್ ತಲುಪಲು ಸಾಧ್ಯವಾಯಿತು. ಕಿವೀಸ್ ಪಡೆಯ ಪರ ರೋಸ್​ಮೆರಿ ಮಾಯರ್ ಮತ್ತು ಅಮೇಲಿಯಾ ಕೇರ್ ಇಬ್ಬರೂ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ಸ್ ಎನಿಸಿದರು.


ಇದನ್ನೂ ಓದಿ: ಟೆನಿಸ್ ಅಂಗಳಕ್ಕೆ ಗುಡ್​ಬೈ ಹೇಳಿದ 5 ಗ್ರ್ಯಾಂಡ್‌ ಸ್ಲ್ಯಾಮ್‌ ಒಡತಿ


ಗೆಲ್ಲಲು 134 ರನ್​ಗಳ ಸಾಧಾರಣ ಗುರಿ ಪಡೆದ ನ್ಯೂಜಿಲೆಂಡ್ ಮಹಿಳಾ ತಂಡದ ಬ್ಯಾಟುಗಾರ್ತಿಯರು ರನ್ ಗಳಿಸಲು ಕಷ್ಟಪಡಬೇಕಾಯಿತು. ಒಂಬತ್ತನೇ ಓವರ್​ನ ನಂತರ ಕಿವೀಸ್ ಪಡೆದ ಸ್ಕೋರಿಗೆ ವೇಗ ಸಿಕ್ಕಿತು. ಅಲ್ಲಿಯವರೆಗೂ ಭಾರತೀಯರ ಬೌಲರ್​​ಗಳು ನ್ಯೂಜಿಲೆಂಡ್ ಬ್ಯಾಟುಗಾರ್ತಿಯರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕೊನೆಯವರೆಗೂ ಹರಸಾಹಸ ಮಾಡಿದ ನ್ಯೂಜಿಲೆಂಡ್ ತಂಡ ಕೊನೆಯ ಎಸೆತದಲ್ಲಿ ಗುರಿ ಮುಟ್ಟುವಲ್ಲಿ ಯಡವಿತು. ಭಾರತದ ಪರ ಬೌಲಿಂಗ್ ಮಾಡಿದ ಎಲ್ಲಾ ನಾಲ್ವರು ಬೌಲರ್​ಗಳಿಗೂ ಒಂದೊಂದು ವಿಕೆಟ್ ಪ್ರಾಪ್ರವಾಯಿತು.


ಈ ಗೆಲುವಿನೊಂದಿಗೆ ಭಾರತದ ಮಹಿಳಾ ತಂಡ ಈ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದ ಮೊದಲ ತಂಡವೆನಿಸಿತು. ಭಾರತೀಯರು ಇರುವ ಎ ಗುಂಪಿನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿವೆ. ಭಾರತೀಯರು ತಮ್ಮ ಹಿಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳನ್ನ ಸೋಲಿಸಿದ್ದರು. ಫೆ. 29ರಂದು ಶ್ರೀಲಂಕನ್ನರ ವಿರುದ್ಧ ಭಾರತ ತನ್ನ ಕೊನೆಯ ಪಂದ್ಯವಾಡಲಿದೆ.


ಬಿ ಗುಂಪಿನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಸೌಥ್ ಆಫ್ರಿಕಾ ಮತ್ತು ಥಾಯ್ಲೆಂಡ್ ತಂಡಗಳಿವೆ.


ಇದನ್ನೂ ಓದಿ: IPL 2020: ಇಂಡಿಯನ್ ಪ್ರೀಮಿಯರ್ ಲೀಗ್​ನ ಟಾಪ್ 5 ಯಶಸ್ವಿ ಕಪ್ತಾನರು


ಪ್ರತೀ ಗುಂಪಿನಿಂದ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶ ಮಾಡುತ್ತವೆ. ಮಾರ್ಚ್ 5ರಂದು ಸೆಮಿಫೈನಲ್ ಪಂದ್ಯಗಳು ನಡೆದರೆ, ಮಾರ್ಚ್ 8ರಂದು ಫೈನಲ್ ಪಂದ್ಯ ನಿಗದಿಯಾಗಿದೆ.


ಸ್ಕೋರು ವಿವರ:


ಭಾರತ ಮಹಿಳಾ ತಂಡ 20 ಓವರ್ 133/8
(ಶಫಾಲಿ ವರ್ಮಾ 46, ತಾನಿಯಾ ಭಾಟಿಯಾ 23, ಸ್ಮೃತಿ ಮಂಧಾನ 11 ರನ್ – ಅಮೇಲಿಯಾ ಕಿಯೆರ್ 21/2, ರೋಸ್​ಮೇರಿ ಮಾಯಿರ್ 27/2)


ನ್ಯೂಜಿಲೆಂಡ್ ಮಹಿಳಾ ತಂಡ 20 ಓವರ್ 129/6
(ಅಮೇಲಿಯಾ ಕಿಯೆರ್ ಅಜೇಯ 34, ಕಟೇ ಮಾರ್ಟಿನ್ 25, ಮ್ಯಾಡಿ ಗ್ರೀನ್ 24, ಸೋಫೀ ಡಿವೈನ್ 14 ರನ್)


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.


Published by:Vijayasarthy SN
First published: